ಇತ್ತೀಚಿನ ಸುದ್ದಿ
ಬಿಗ್ ಬಾಸ್ ಕನ್ನಡ ಒಟಿಟಿ: ಸೋನು ಗೌಡಗೆ ಸಿಕ್ಕಾಪಟ್ಟೆ ಜನಬೆಂಬಲ; ಎಲಿಮಿನೇಷನ್ನಿಂದ ಬಚಾವ್
14/08/2022, 19:30
ಬೆಂಗಳೂರು(Reporterkarnataka.com):ರೀಲ್ಸ್ ಹಾಗೂ ವಿವಾದ ಮೂಲಕ ಫೇಮಸ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಅವರನ್ನು ಜನರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದರೂ‘ಬಿಗ್ ಬಾಸ್ ಕನ್ನಡ ಒಟಿಟಿ ಶೋನಲ್ಲಿ ಅವರನ್ನು ಸಪೋರ್ಟ್ ಮಾಡುವವರ ಸಂಖ್ಯೆ ದೊಡ್ಡದಿದೆ.
ಬಿಗ್ ಬಾಸ್ ಕನ್ನಡ ಒಟಿಟಿ ಶೋನ ಮೊದಲ ವಾರದಲ್ಲಿ ಸೋನು ಗೌಡ ನಾಮಿನೇಟ್ ಆಗಿದ್ದರು. ಆದರೆ ಜನರಿಂದ ವೋಟ್ ಪಡೆಯುವ ಮೂಲಕ ಅವರು ಸೇಫ್ ಆಗಿ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ.
ಮೊದಲ ವಾರದ ಎಲಿಮಿನೇಷನ್ನಿಂದ ಬಚಾವ್ ಆಗಿರುವ ಸೋನು ಶ್ರೀನಿವಾಸ್ ಗೌಡ ಕುಣಿದು ಕುಪ್ಪಳಿಸಿದ್ದಾರೆ. ಇನ್ನೋರ್ವ ಸ್ಪರ್ಧಿ ಕಿರಣ್ ಯೋಗೇಶ್ವರ್ ಎಲಿಮಿನೇಟ್ ಆಗಿದ್ದಾರೆ.
ಈ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ವೈರಲ್ ಆಗಿ ಆ ಬಳಿಕ ಟ್ರೋಲಿಗರ ಕೆಂಗಣ್ಣಿಗೆ ಗುರಿ ಆಗಿದ್ದರು. ಆ ಕಹಿ ಘಟನೆ ನಡೆದಿದ್ದು ಹೇಗೆ ಎಂಬ ಬಗ್ಗೆ ಮೊದಲ ವಾರವೇ ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಬಾಯ್ಬಿಟ್ಟಿದ್ದಾರೆ. ಅಲ್ಲದೇ, ‘ನನ್ನದು ಇನ್ನೊಂದು ವಿಡಿಯೋ ಇದ್ದು, ಅದು ಯಾವಾಗ ಹೊರಬರುತ್ತೋ ಗೊತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದರು.