8:02 AM Sunday20 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

Bioagile Therapeutics Pvt  Ltd ಮಲ್ಟಿ ನ್ಯಾಷನಲ್  ಉದ್ದಿಮೆ ಸ್ಥಾಪಿಸಿದ ಬೆಂಗಳೂರಿನ ಗಟ್ಟಿಗಿತ್ತಿ ಯುವತಿ..!!

18/07/2022, 12:29

ವಿಜೇತ್ ಪೂಜಾರಿ ಶಿಬಾಜೆ

info.reporterkarnataka@gmail.com

ಒಬ್ಬಳು ಮಹಿಳೆ ಸಮಾಜದ ಅಡಿಯಾಳಾಗಿ ದುಡಿಯಬೇಕು ಎನ್ನುವ ಅನಾದಿ ಕಾಲದ ಅಲಿಖಿತ ನಿಯಮವನ್ನು ಪಕ್ಕಕ್ಕೆ ಸರಿಸಿ, ಅದೆಷ್ಟೋ ದಶಕಗಳು ಸಂದರು ಅವಳು ಪೂರ್ಣವಾಗಿ ನಿಂತದ್ದು ಬೆರಳಣಿಕೆಯಷ್ಟೇ..! ಆ ಬೆರಳೆಣಿಕೆಯ ಸಾಧಕರು, ಸಮಾಜವೇ ತನ್ನ ಕಡೆ ತಿರುಗಿ ನೋಡುವಂತೆ ಬೆಳೆದು ನಿಂತವರು. ಆ ಸಾಲಿನಲ್ಲಿ ಬೆಂಗಳೂರಿನ ದಿವ್ಯ ಚಂದ್ರಧರ ಕೂಡ ಒಬ್ಬರು..!

ಸಿಲಿಕಾನ್ ಸಿಟಿಯ ಮಧ್ಯಮ ಕುಟುಂಬದಲ್ಲಿ ಜನಿಸಿದ ದಿವ್ಯರವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೇಂಬ್ರಿಡ್ಜ್ ವಿದ್ಯಾಲಯದಲ್ಲಿ, ಪಿಯುಸಿ ಹಾಗೂ ಉನ್ನತ ಶಿಕ್ಷಣವಾದ ಬಿಎಸ್ ಸಿ ಹಾಗೂ ಎಂಎಸ್ ಸಿಯನ್ನು ಆದರ್ಶ ಕಾಲೇಜು ಶೇಷಾದ್ರಿಪುರಂನಲ್ಲಿ ಪೂರ್ಣಗೊಳಿಸಿದರು.

ತಂದೆ ಬಿಎಂಟಿಸಿ. ಸಂಸ್ಥೆಯಲ್ಲಿ ಕಂಡಕ್ಟರ್ ಕಾಯಕವನ್ನು ಮಾಡುತ್ತ ಕುಟುಂಬದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಇಂದು ನಿವೃತ್ತಿ ಜೀವನದ ಜೊತೆಗೆ, ತಾಯಿ ಶಾಲೆಯ ಬೋಧಕಿಯಾಗಿ ಇಂದು ನಿವೃತ್ತಿಯ ಜೀವನವನ್ನು ನಡೆಸುತ್ತಿದ್ದಾರೆ.

ಉದ್ಯಮಶೀಲರಾಗಿ  ಏನಾದರು ಸಾಧಿಸಬೇಕು ಎನ್ನುವ ತುಡಿತ ಆವಾಗಲೇ ಗಟ್ಟಿಯಾಗಿತ್ತು..!((((bold))))

ಬಯೋಟೆಕ್ ಎಂಬ ಬೃಹತ್ ಸಂಸ್ಥೆಯ ಒಡತಿಯಾದ ಕಿರಣ್ ಮಜುಂದಾರ್ ಅವರ ಕಾಯಕದ ದಾರಿ ದಿವ್ಯರವರಿಗೆ ಪ್ರೇರಣದಾಯಕ ಆಶಾವಾದವನ್ನು ನೀಡಿತ್ತು ಎನ್ನುತ್ತಾರೆ ದಿವ್ಯರವರು.

ಎಂಎಸ್ ಸಿಯನ್ನೂ ಪೂರ್ಣಗೊಳಿಸಿದ ನಂತರ ತನ್ನದೇ ಆದ ಸಂಸ್ಥೆಯನ್ನು ಕಟ್ಟಬೇಕೆಂಬ ಬಲವಾದ ಕನಸಿಗೆ ಪೋಷಣೆ ನೀಡುತ್ತಾ ಬಂದರು. 

ಒಂದು ಉದ್ಯಮವನ್ನು ಆರಂಭಿಸಬೇಕೆಂದರೆ ಮೊದಲು ನಾನು ಕಾರ್ಮಿಕನಾಗಿ ದುಡಿಯಬೇಕು ಎನ್ನುವ ನಂಬಿಕೆಯ ಜೊತೆಗೆ, ಜ್ಞಾನದ ಭಂಡಾರವನ್ನು ಹೆಚ್ಚಿಸಬೇಕೆಂದು ತುಡಿತದೊಂದಿಗೆ ಮೂರು ವರುಷ ಟಾಟಾ ಸಂಸ್ಥೆಯಲ್ಲಿ ಹಾಗೂ ಎರಡು ವರುಷ ಫ್ಯಾಮಿ ಲಾಬ್ಸ್ ನಲ್ಲಿ ಉದ್ಯೋಗವನ್ನು ಮಾಡಿದ ನಂತರ ತನ್ನ ಕನಸಿನ ಉದ್ಯಮಕ್ಕೆ ವೇಗವನ್ನು ನೀಡಿದ ದಿವ್ಯರವರು 2016ರಲ್ಲಿ “Bioagile Therapeutics PVT LTD” ಎನ್ನುವ ಹೊಸ ಆಲೋಚನೆಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮುನ್ನುಡಿ ಇಟ್ಟರು..!

ಕಾಲೇಜುವಿನ ದಿನಗಳಲ್ಲಿಯೇ ಬಿಡುವಿನ ಸಮಯದಲ್ಲಿ,ತರಗತಿಯ ನಂತರ ಹಲವು ಕಾರ್ಯಕ್ರಮಗಳನ್ನು ನಡೆಸು ಕೊಡುತ್ತಾ ಬರುತ್ತಿದ್ದ ದಿವ್ಯರವರಿಗೆ ಅಂದಿನ ದಿನದಲ್ಲಿಯೇ ಭದ್ರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಿಕೊಂಡು ಬರುತ್ತಿದ್ದರು.

ಇಂದು ಈ ಸಂಸ್ಥೆ 6ನೇ ವರುಷಕ್ಕೆ ಪಾದಾರ್ಪಣೆ ಮಾಡಿ, ಯಶಸ್ವಿ ಉದ್ಯಮಿಯಾಗಿ ಮುನ್ನಡೆಯುತ್ತ ಬರುತ್ತಿದ್ದಾರೆ. ಮೆಡಿಕಲ್ ವಿಭಾಗದಲ್ಲಿ ಯಾವುದೇ ಮೆಡಿಸಿನ್ ನನ್ನು ಮೊದಲ ಬಾರಿಗೆ ಕಂಡು ಹಿಡಿದಾಗ ಮನುಷ್ಯನ ಮೇಲೆ ಪ್ರಯೋಗ ಮಾಡುವಂತಹ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಹಲವಾರು ಯಶಸ್ವಿ ಪ್ರಯೋಗಗಳನ್ನು ಮಾಡಿ ತನ್ನ ಕಾರ್ಯ ದಕ್ಷತೆಯನ್ನು ಇವರ ಬಳಗ ಹೆಚ್ಚಿಸಿಕೊಂಡಿದೆ. ಅಲ್ಲದೇ ಇನ್ನೊಂದು ಕಚೇರಿಯನ್ನು ಅಮೆರಿಕದಲ್ಲಿಯೂ ಹೊಂದಿದೆ ಎನ್ನುವುದೇ ಈ ಸಂಸ್ಥೆಯೇ ಮತ್ತೊಂದು ಹೆಗ್ಗಳಿಕೆ..!

ಆಸ್ಟ್ರೇಲಿಯ, ಸಿಂಗಪೂರ್ ಮತ್ತು ಅಮೆರಿಕಾ ದೇಶಗಳ ಜತೆಗೆ ಕೂಡ Bioagile ತನ್ನ ಉದ್ಯಮ ವಲಯವನ್ನು ಚಾಚಿದೆ.

ದಿವ್ಯರವರ ಪ್ರತೀ ಕಾರ್ಯದಲ್ಲಿ ಬೆಂಬಲವಾಗಿ ನಿಂತಂತಹ ಪತಿ ಜೀವನ್ ರವರು ಸಾಫ್ಟ್ವೇರ್ ಉದ್ಯೋಗದ ಜತೆಗೆ ಮಡದಿಯ ಎಲ್ಲಾ ಉದ್ಯಮ ಯೋಜನೆಗಳಿಗೆ ಯೋಚನಾ ಲಹರಿಯಾಗಿ ನಿಂತರು. ಕೋವಿಡ್ ಸಮಯದಲ್ಲಿ ಕರ್ನಾಟಕ ಸರಕಾರದ ಜೊತೆಗೆ ಸೇರಿಕೊಂಡು ವೈದ್ಯಕೀಯ ಸಲಕರಣೆಗಳನ್ನು ಹಾಗೂ  ಕೊರೋನ ಟೆಸ್ಟಿಂಗ್ ಕಿಟ್ ಗಳನ್ನು ಕಡಿಮೆ ದರದಲ್ಲಿ ಸರಬರಾಜು ಮಾಡಿದ ಹೆಗ್ಗಳಿಕೆ ಇವರದು..!

ಅದೆಷ್ಟೋ ಅವಮಾನಗಳನ್ನು ಕಂಡರೂ, ಧೃತಿ ಗೆಡದೆ ಮುನ್ನಡೆದು ಇಂದು ಯಶಸ್ವಿ ಉದ್ಯಮಿಯಾಗಿ ದಿವ್ಯರವರು ಬೆಳೆದು ನಿಂತಿದ್ದಾರೆ..!ಇಂತಹ ಸಾಧಕರು ಭಾರತದ ಭದ್ರ ಭವಿಷ್ಯದ ದಾರಿಗೆ ತಳಹದಿ ಎನ್ನುವುದೇ ಮೆಚ್ಚುವಂತಹ ವಿಷಯವಾಗಿದೆ..!

ದಿವ್ಯರವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಇವರ ದಾರಿಯನ್ನೇ ಹುಡುಕಿಕೊಂಡು ಬಂದವು..

* ಎಮರ್ಜಿಂಗ್ ಕ್ಲಿನಿಕಲ್ ರಿಸರ್ಚ್ ಕಂಪನಿ ಇನ್ ಇಂಡಿಯಾ ಎಂಬ ಬಹು ದೊಡ್ಡ ಪ್ರಶಸ್ತಿಯನ್ನು ಟೈಮ್ಸ್ ನೆಟ್ವರ್ಕ್ ನೀಡಿತು.

* ಫಾಸ್ಟೆಸ್ಟ್ ಗ್ರೋಯಿಂಗ್ ಇಂಡಿಯಾ ಕಂಪನಿ ಎನ್ನುವ ಇನ್ನೊಂದು ಬಿರುದನ್ನು ಡೆಪ್ಯುಟಿ ಪ್ರೈಮ್ ಮಿನಿಸ್ಟರ್ ಆಫ್ ಥೈಲ್ಯಾಂಡ್ ನೀಡಿತ್ತು.

* ವುಮೆನ್ ಅಚೀವರ್ ಅವಾರ್ಡ್ ಕೂಡ ಇವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.

ಇದು ದಿವ್ಯರವರ ಬದುಕಿನ ಪುಸ್ತಕದ ಕೆಲವು ಪುಟಗಳಷ್ಟೇ, ಇನ್ನುಳಿದವು ಇತಿಹಾಸ.!

ಇತ್ತೀಚಿನ ಸುದ್ದಿ

ಜಾಹೀರಾತು