ಇತ್ತೀಚಿನ ಸುದ್ದಿ
ಕೆದೂರು ರೈಲ್ವೆ ಹಳಿ ಬಳಿ ತೋಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಸಾವಿನ ಕಾರಣ ಇನ್ನೂ ನಿಗೂಢ
16/07/2022, 21:51
ಕುಂದಾಪುರ(reporterkarnataka.com): ಇಲ್ಲಿಗೆ ಸಮೀಪದ ಕೆದೂರು ಗ್ರಾಮದ ರೈಲ್ವೆ ಹಳಿಯ ಪಶ್ಚಿಮ ಬದಿಯ ನೀರಿನ ತೋಡಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಮೃತರನ್ನು ನಿತ್ಯಾನಂದ ಶೇಟ್ ಎಂದು ಗುರುತಿಸಲಾಗಿದೆ. ಕೊಂಕಣ ರೈಲ್ವೆ ಸ್ಟೇಷನ್ ಕುಂದಾಪುರದಲ್ಲಿ ರೈಲ್ವೆ ಟ್ರ್ಯಾಕ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುವ ಪ್ರಶಾಂತ ನಾಯಕ್ ಎಂಬವರಿಗೆ ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಅದರಂತೆ ಸ್ಥಳಕ್ಕೆ ಹೋಗಿ ನೋಡಿದಾಗ ವ್ಯಕ್ತಿಯೊಬ್ಬರು ತಲೆಯ ಹಿಂಬದಿಗೆ ತೀವ್ರ ಗಾಯಗೊಂಡು ಮೃತಪಟ್ಟಿರುವುದು ಕಂಡುಬಂದಿದೆ. ವ್ಯಕ್ತಿಯು ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಬಿದ್ದು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.