4:43 AM Wednesday10 - September 2025
ಬ್ರೇಕಿಂಗ್ ನ್ಯೂಸ್
ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ

ಇತ್ತೀಚಿನ ಸುದ್ದಿ

ಕಾರಿನ ಜತೆ ಸಜೀವ ಸುಟ್ಟು ಕೊಲೆಗೈದ ಪ್ರಕರಣ: ಇಬ್ಬರು ಆರೋಪಿಗಳಿಗೆ 5 ದಿನ ಪೊಲೀಸ್ ಕಸ್ಟಡಿ

16/07/2022, 21:46

ಕಾರ್ಕಳ(reporterkarnataka.com):
ಕಾರ್ಕಳದ ಆನಂದ ದೇವಾಡಿಗ ಎಂಬವರನ್ನು ಕಾರು ಸಮೇತ ಸಜೀವವಾಗಿ ಸುಟ್ಟು ಕೊಲೆಗೈದ ಅಮಾನುಷ ಪ್ರಕರಣದಲ್ಲಿ 3ನೇ ಆರೋಪಿ ಸತೀಶ್ ದೇವಾಡಿಗ ಹಾಗೂ 4ನೇ ಆರೋಪಿ ನಿತಿನ್ ದೇವಾಡಿಗನಿಗೆ ಕುಂದಾಪುರ ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


ಬೈಂದೂರು ಪೊಲೀಸರು ಜುಲೈ15ರಂದು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿ ನೀಡುವಂತೆ ಕೋರಿದ್ದರು. ಅದರಂತೆ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಸದಾನಂದ ಶೇರಿಗಾರ್ ಹಾಗೂ 2ನೇ ಆರೋಪಿ ಶಿಲ್ಪಾ ಈಗಾಗಲೇ ಪೊಲೀಸರ ಕಸ್ಟಡಿಯಲ್ಲಿದ್ದು, ವಿವಿಧ ಆಯಾಮಗಳಲ್ಲಿ ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಶನಿವಾರ ಸ್ಥಳ ಬೈಂದೂರಿನಿಂದ ಕಾರ್ಕಳಕ್ಕೆ ಆಗಮಿಸಿದ ಪೋಲೀಸ್ ತನಿಖಾ ತಂಡ ಕಾರ್ಕಳ ನಗರ ಸಭೆ ವ್ಯಾಪ್ತಿ ಯ ಕುಂಟಲ್ಪಾಡಿ ಗ್ಯಾರೇಜ್  ಹಾಗೂ ಹಿರ್ಗಾನ ಶಿವನಗರ ದ ಶಿಲ್ಪಾ ಪೂಜಾರಿ ಮನೆ, ಎಣ್ಣೆಹೊಳೆ ನದಿಯ ಪಕ್ಕದಲ್ಲಿ ಸ್ಥಳ ಬಟ್ಟೆ ಬಿಸಾಡಿದ ಸ್ಥಳವನ್ನು ಮಹಜರು ಮಾಡಲಾಯಿತು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು