ಇತ್ತೀಚಿನ ಸುದ್ದಿ
‘777 ಚಾರ್ಲಿ’ ಭರ್ಜರಿ ಕಲೆಕ್ಷನ್: ಶೇ. 5ರಷ್ಟನ್ನು ಪ್ರಾಣಿಗಳ ರಕ್ಷಣೆಗೆ ದೇಣಿಗೆ ನೀಡಿದ ನಟ ರಕ್ಷಿತ್ ಶೆಟ್ಟಿ
05/07/2022, 22:47
ಬೆಂಗಳೂರು(reporterkarnataka.com): ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧ ಕುರಿತಾತ ಕಥೆ ಹೊಂದಿದ ಚಿತ್ರ “777 ಚಾರ್ಲಿ”
ಯಶಸ್ವಿ 25 ದಿನ ಪೂರೈಸಿದ್ದು, ಭರ್ಜರಿ ಗಳಿಕೆಯಲ್ಲಿ ಶೇ. 5ರಷ್ಟು ಹಣವನ್ನು ಪ್ರಾಣಿ ರಕ್ಷಣೆಗೆ ನಟ ರಕ್ಷಿತ್ ಶೆಟ್ಟಿ ದೇಣಿಗೆ ನೀಡಿದ್ದಾರೆ.
ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರ 150 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ನಟ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ಲಾಭದ ಹಣದಲ್ಲಿ ಶೇ. 5ರಷ್ಟನ್ನು ಪ್ರಾಣಿಗಳ ರಕ್ಷಣೆಗಾಗಿ ದೇಣಿಗೆ ನೀಡಲಿದ್ದೇವೆ ಎಂದು ನಟ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಚಿತ್ರದ ಯಶಸ್ವಿನ ಹಿಂದೆ ತಂಡದ ಪರಿಶ್ರಮವಿದೆ. ಚಿತ್ರ ಯಶಸ್ವಿಯಾಗಿ ತೆರೆಗೆ ಬರಲು ಶ್ರಮಿಸಿದ ಚಿತ್ರ ತಂಡದ ಜೊತೆಗೆ ಚಿತ್ರದ ಶೇ. 10ರಷ್ಟು ಹಂಚಿಕೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಕೂಡ ಅವರು ತಿಳಿಸಿದ್ದಾರೆ.