5:29 PM Friday3 - May 2024
ಬ್ರೇಕಿಂಗ್ ನ್ಯೂಸ್
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:…

ಇತ್ತೀಚಿನ ಸುದ್ದಿ

100ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮಾತೃಶ್ರೀ: ಪಾದಪೂಜೆ ಮಾಡಿ ತಾಯಿಯ ಆಶೀರ್ವಾದ ಪಡೆದ ಮೋದಿ

18/06/2022, 16:42

ಹೊಸದಿಲ್ಲಿ(reporterkarnataka.com): 100ನೇ ವಸಂತಕ್ಕೆ ಕಾಲಿಟ್ಟಿರುವ ತಾಯಿಯನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಪಡೆದಿದ್ದಾರೆ. ತಾಯಿಯ ಪಾದಪೂಜೆ ನೆರವೇರಿಸಿದ್ದಾರೆ.

ಮಾತೋಶ್ರಿಯವರಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ ಅವರು ಟ್ವೀಟರ್‌ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ಮಾತೆ ಎಂಬುದು ಕೇವಲ ಪದವಲ್ಲ ಇದು ಭಾವನೆಗಳ ವ್ಯಾಪ್ತಿಯನ್ನು ಸೆರೆಹಿಡಿಯುತ್ತದೆ. ಇಂದು ಜೂನ್ 18 ನನ್ನ ತಾಯಿ ಹೀರಾಬಾ ತನ್ನ 100 ನೇ ವರ್ಷಕ್ಕೆ ಕಾಲಿಡುವ ದಿನ. ಈ ವಿಶೇಷ ದಿನದಂದು ನಾನು ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಕೆಲವು ಆಲೋಚನೆಗಳನ್ನು ಬರೆದಿದ್ದೇನೆ” ಎಂದು ಟ್ವೀಟ್‌ ಮಾಡಿ ಫೋಟೋಗಳನ್ನು ಮೋದಿ ಹಂಚಿಕೊಂಡಿದ್ದಾರೆ. 

ಮೋದಿ ತಮ್ಮ ತಾಯಿಗೆ ಜನುಮದಿನದ ಉಡುಗೊರೆಯಾಗಿ ಬ್ಲಾಗ್‌ ಒಂದನ್ನು ಬರೆದಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿ ಪ್ರಧಾನಿಯವರು ತಮ್ಮ ತಾಯಿ ಹೀರಾಬೆನ್ ಅವರನ್ನು ಸರಳ ಆದರೆ ಅಸಾಮಾನ್ಯ ಮಹಿಳೆ ಎಂದು ಬಣ್ಣಿಸಿದ್ದಾರೆ. ಅವರು ಚಿಕ್ಕಂದಿನಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡರು. ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಕಷ್ಟಗಳ ಮಧ್ಯೆಯೇ ದೃಢವಾಗಿ ಹೊರಹೊಮ್ಮಿದ್ದಾರೆ.


ತಮ್ಮ ಬಾಲ್ಯದ ಕೆಲವು ವಿಶೇಷ ಕ್ಷಣಗಳನ್ನು ತಮ್ಮ ತಾಯಿಯೊಂದಿಗೆ ಕಳೆದಿರುವುದನ್ನು ನೆನಪಿಸಿಕೊಂಡಿರುವ ಮೋದಿಯವರು ಅವರು ಬೆಳೆದಂತೆ ಅವರ ತಾಯಿ ಮಾಡಿದ ಹಲವಾರು ತ್ಯಾಗಗಳನ್ನು ಅವರು ಸ್ಮರಿಸಿದ್ದಾರೆ ಮತ್ತು ಅವರ , ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸಿದ ಅವರ ತಾಯಿಯಲ್ಲಿನ ವಿವಿಧ ಗುಣಗಳನ್ನು ಪ್ರಸ್ತಾಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು