8:40 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಪಚ್ಚನಾಡಿ ಅಕ್ರಮ ಮನೆಗಳ ವಾರದೊಳಗೆ ತೆರವು ಮಾಡದಿದ್ದರೆ ತ್ಯಾಜ್ಯ ವಿಲೇವಾರಿ ಸ್ಥಗಿತ: ಪಾಲಿಕೆಗೆ ದಲಿತ ಮುಖಂಡರ ಎಚ್ಚರಿಕೆ

11/06/2022, 17:10

ಮಂಗಳೂರು(reporterkarnataka.com):  ನಗರದ ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸiಲಿಟ್ಟ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಒಂದು ವಾರದೊಳಗೆ ತೆರವು ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಎಸ್.ಪಿ.ಆನಂದ್ ಎಚ್ಚರಿಕೆ ನೀಡಿದ್ದಾರೆ.

ರಿಪೋರ್ಟರ್ ಕರ್ನಾಟಕ ಜತೆ ಶನಿವಾರ ಮಾತನಾಡಿದ ಅವರು, ವಾರದೊಳಗೆ ತೆರವು ಮಾಡದೇ ಇದ್ದಲ್ಲಿ ಮುಂದಿನ ವಾರ ಪಾಲಿಕೆಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು (ಆ್ಯಂಟೋನಿ ತ್ಯಾಜ್ಯ ವಿಲೇವಾರಿಯ ಕಾರ್ಮಿಕರು ಸೇರಿದಂತೆ) ಕೆಲಸ ಸ್ಥಗಿತ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.

4 ಎಕರೆ ಸ್ಥಳ ಸರಿ ಸುಮಾರು 200 ಪೌರ ಕಾರ್ಮಿಕರಿಗೆ ತಲಾ2 ಸೆಂಟ್ ನ ಹಾಗೆ ಮೀಸಲಿರಿಸಿದ ಸ್ಥಳ.  ಇತೀಚೆಗೆ ಸಹ ಪರವಾನಿಗೆ ಇಲ್ಲದೇ ಹಲವರು ಅತಿಕ್ರಮಿಸಿ ಮನೆ ನಿರ್ಮಾಣವಾಗುತ್ತಿದ್ದಾಗ

ಇದರ ಬಗ್ಗೆ ದಲಿತ ಸಂಘರ್ಷ ಸಮಿತಿ  ಹಾಗೂ ಪೌರ ಕಾರ್ಮಿಕರ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರಿಂದ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ ನಗರ ಪಾಲಿಕೆಯ ನಗರ ಯೋಜನೆ  ಅಧಿಕಾರಿಗಳು ಸ್ಥಳೀಯ ಪೋಲಿಸ್ ಇಲಾಖೆಯ ಸಹಾಕಾರದೊಂದಿಗೆ ತೆರವು ಮಾಡಲು ಮುಂದಾಗಿದ್ದರು. ಆದರೆ ಅಲ್ಲಿನ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್ ಹಾಗೂ ಅವರ ಪತಿ ರವಿಂದ್ರ ನಾಯಕ್  ಹಾಗೂ ಸ್ಥಳೀಯ ಕೆಲವರು ತೆರವು ಮಾಡಲು ತಡೆಮಾಡಿದ್ದಾರೆ. ಪಾಲಿಕೆ ತೆರವಿಗೆ ಇನ್ನೊಂದು ವಾರ ಗಡುವು ನೀಡುತ್ತೇವೆ. ತೆರವು ಮಾಡದೇ ಇದ್ದಲ್ಲಿ ಮುಂದಿನ ವಾರ ಪಾಲಿಕೆಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು (ಆ್ಯಂಟೋನಿ ತ್ಯಾಜ್ಯ ವಿಲೇವಾರಿಯ ಕಾರ್ಮಿಕರು ಸೇರಿದಂತೆ) ಕೆಲಸ ಸ್ಥಗಿತ ಮಾಡಿ  ಉಗ್ರ ಹೋರಟ ನಡೆಸುವುದಾಗಿ ಆನಂದ್ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು