ಇತ್ತೀಚಿನ ಸುದ್ದಿ
ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ: ಆರ್ ಬಿಐ ಸ್ಪಷ್ಟನೆ
06/06/2022, 23:41
ಹೊಸದಿಲ್ಲಿ(reporterkarnataka.com): ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿಯವರ ಮುಖವನ್ನು ಇತರರ ಮುಖದೊಂದಿಗೆ ಬದಲಾಯಿಸುವ ಮೂಲಕ ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವರು, ಆದರೆ ಈ ಬಗ್ಗೆ RBI ಸ್ಪಷ್ಟನೆ ನೀಡಿದ್ದು, ರಿಸರ್ವ್ ಬ್ಯಾಂಕ್ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಆರ್ ಬಿ ಐ ತಿಳಿಸಿದೆ.