12:50 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹಣದುಬ್ಬರದ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕ್ರಮ: ಗೋಧಿ ಬಳಿಕ ಸಕ್ಕರೆ ರಫ್ತಿನ ಮೇಲೂ ನಿರ್ಬಂಧ

26/05/2022, 10:52

ಹೊಸದಿಲ್ಲಿ( reporterkarnataka.com); ದೇಶದಲ್ಲಿ ಹೆಚ್ಚುತ್ತಿರುವ ಹಣ ದುಬ್ಬರವನ್ನು ನಿಯಂತ್ರಿಸಲು ಸರಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೋಧಿ ರಫ್ತು ನಿಷೇಧಿಸಿದ್ದ ಸರ್ಕಾರ ಇದೀಗ ಸಕ್ಕರೆ ಸರಬರಾಜಿನ ಮೇಲೂ ನಿರ್ಬಂಧ ಹೇರಿದೆ.

ದೇಶದಲ್ಲಿ ಸಕ್ಕರೆಯ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ಮಾರುಕಟ್ಟೆಯ ಅವಧಿ ಸೆಪ್ಟೆಂಬರ್‌ಗೆ ಕೊನೆಗೊಳ್ಳುವಂತೆ ವರ್ಷದಲ್ಲಿ 10 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ರಫ್ತು ಮಾಡಬೇಕು. ಇದು ಜೂನ್​ 1 ರಿಂದಲೇ ಜಾರಿಯಾಗಬೇಕು ಎಂಬ ಮಿತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.

ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಯನ್ನು ತಡೆಯಲು ಸಕ್ಕರೆ ರಫ್ತು (ಕಚ್ಚಾ, ಸಂಸ್ಕರಿಸಿದ ಮತ್ತು ಬಿಳಿ ಸಕ್ಕರೆ) ಜೂನ್ 1, 2022 ರಿಂದ ನಿರ್ಬಂಧಿತ ವರ್ಗದಲ್ಲಿ ಇರಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ.

2017-18, 2018-19 and 2019-20 ರಲ್ಲಿ ಕ್ರಮವಾಗಿ 6.2 ಲಕ್ಷ ಮೆಟ್ರಿಕ್​ ಟನ್​, 38 ಎಲ್​ಎಂಟಿ ಮತ್ತು 59.60 ಎಲ್​ಎಂಟಿಯಷ್ಟು ವಿದೇಶಗಳಿಗೆ ರಫ್ತು ಮಾಡಲಾಗಿದೆ.2020- 21 ರಲ್ಲಿ 60 ಎಲ್​ಎಂಟಿ ಗುರಿ ದಾಟಿ 70 ಸುಮಾರು ಸಕ್ಕರೆ ರಫ್ತು ಮಾಡಲಾಗಿದೆ. ಪ್ರಸಕ್ತ 2021-22 ರ ಋತುವಿನಲ್ಲಿ ಸುಮಾರು 90 ಎಲ್​ಎಂಟಿ ಸಕ್ಕರೆ ರಫ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸುಮಾರು 82 ಲಕ್ಷ ಮೆಟ್ರಿಕ್ ಟನ್​ ಸಕ್ಕರೆಯನ್ನು ರಫ್ತು ಮಾಡಲು ಕಾರ್ಖಾನೆಗಳಿಗೆ ಸೂಚಿಸಲಾಗಿತ್ತು. ಇದರಲ್ಲಿ 78 ಲಕ್ಷ ಮೆಟ್ರಿಕ್​ ಟನ್​ ರಫ್ತು ಮಾಡಲಾಗಿದೆ. ಇದು ಈ ವರ್ಷದ ಮತ್ತು ಸಾರ್ವಕಾಲಿಕವಾಗಿ ಅತ್ಯಧಿಕ ರಫ್ತಿನ ವರ್ಷವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು