ಇತ್ತೀಚಿನ ಸುದ್ದಿ
ಇಂಧನ ದರ ಭಾರಿ ಇಳಿಕೆ: ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡಿಸೇಲ್ ಬೆಲೆ ಎಷ್ಟಿದೆ ನೋಡಿ
22/05/2022, 21:39
ಹೊಸದಿಲ್ಲಿ(reporterkarnataka.com): ಪೆಟ್ರೋಲ್, ಡಿಸೇಲ್, ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಕೇಂದ್ರ ಸರಕಾರ ಗುಡ್‌ನ್ಯೂಸ್ ನೀಡಿದೆ.
ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಇಂದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದೆ.
ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್ ಮೇಲೆ 6 ರೂಪಾಯಿ ಇಳಿಸಲಾಗುವುದು ಎಂದು ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಇದರ ಬೆನ್ನಲ್ಲೇ ಇಂದು ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ ಇಂದಿನ ದರ ವಿವರ:
ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ಸದ್ಯ 101.94ರೂ. ಮತ್ತು ಡೀಸೆಲ್ 87.89 ರೂಪಾಯಿ ಇದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 96.72 ರೂಪಾಯಿ ಇದ್ದರೆ, ಲೀಟರ್ ಡೀಸೆಲ್ ಬೆಲೆ 89.62 ರೂಪಾಯಿ ಇದೆ. ಇನ್ನೂ, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ. ಇದ್ದರೆ, ಡೀಸೆಲ್ ಬೆಲೆ 92.76 ಇದೆ. ಮಹಾರಾಷ್ಟ್ರದ ಮುಂಬೈಯಲ್ಲಿ ಪೆಟ್ರೋಲ್ ಬೆಲೆ 111.35 ರೂ. ಇದ್ದರೆ, ಡೀಸೆಲ್ ಬೆಲೆ 97.28 ರ. ಇದೆ. ಹಾಗೆಯೇ, ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 102.63 ರೂ. ಇದ್ದು, ಡೀಸೆಲ್ಬೆಲೆ 94.24 ರೂ ಇದೆ.