10:04 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕುತುಬ್‌ ಮಿನಾರ್‌: ಪುರಾತತ್ವ ಇಲಾಖೆ ಮಾಜಿ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದೇನು..?

19/05/2022, 12:51

ಹೊಸದಿಲ್ಲಿ(reporterkarnataka.com): ಕುತುಬ್ ಮಿನಾರ್ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.ದೇಶದೆಲ್ಲೆಡೆ ಸ್ಮಾರಕಗಳ ಬಗ್ಗೆ ವಿವಾದಗಳು ಭುಗಿಲೇಳುತ್ತಿರುವ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕರು ಈ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಅದೇನೆಂದರೆ ಕುತುಬ್‌ ಮಿನಾರ್‌ ನಿರ್ಮಿಸಿದ್ದು ಕುತುಬ್‌ ಉದ್‌ ದೀನ್‌ ಐಬಕ್‌ ಅಲ್ಲ ಎಂದು ಹೇಳಿದ್ದಾರೆ.

5ನೇ ಶತಮಾನದಲ್ಲಿ ದೆಹಲಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ  ವಿಕ್ರಮಾದಿತ್ಯ ಎಂಬ ರಾಜನು ಸೂರ್ಯನ ಪರಿವೀಕ್ಷಣೆಗೆ ಅದನ್ನು ನಿರ್ಮಾಣ ಮಾಡಿದ್ದಾನೆ. ಇದು ಕುತುಬ್ ಮಿನಾರ್ ಅಲ್ಲ ಸೂರ್ಯ ಗೋಪುರ (ವೀಕ್ಷಣಾ ಗೋಪುರ) ಎಂದು ಕರೆಯಲಾಗುತ್ತಿತ್ತು. ಈ ಬಗ್ಗೆ ಅನೇಕ ಪುರಾವೆಗಳಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದಾರೆ. ಎಎಸ್ ಐ ಪರವಾಗಿ ಹಲವು ಬಾರಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಕುತುಬ್‌ ಗೋಪುರವು 25 ಇಂಚು ಓರೆಯಾಗಿದೆ. ಸೂರ್ಯನನ್ನು ವೀಕ್ಷಿಸಲು ಅನುಕೂಲವಾಗಲೆಂದು ಈ ರಚನೆಯಿದೆ. ಜೂನ್‌ 21ರಂದು ಅಯನ ಸಂಕ್ರಾಂತಿಯ ನಡುವೆ ಆ ಪ್ರದೇಶದ ಮೇಲೆ ಕನಿಷ್ಟ ಅರ್ಧಗಂಟೆ ನೆರಳು ಬೀಳುವುದಿಲ್ಲ. ಇದು ವಿಜ್ಞಾನ ಮತ್ತು ಪುರಾತತ್ತ್ವ ಶಾಸ್ತ್ರದ ಸತ್ಯ. ಕುತುಬ್‌ ಮಿನಾರ್‌ ಗೂ ಅದರ ಪಕ್ಕದಲ್ಲಿರುವ ಮಸೀದಿಗೂ ಯಾವುದೇ ಸಂಬಂಧವಿಲ್ಲ. ಕುತುಬ್‌ ಮಿನಾರ್‌ ಎಂದು ಕರೆಯಲ್ಪಡುವ ಕಟ್ಟಡವು ಸ್ವತಂತ್ರ ರಚನೆಯಾಗಿದೆ. ಕುತುಬ್ ಮಿನಾರ್‌ನ ಬಾಗಿಲು ಕೂಡ ಉತ್ತರಕ್ಕೆ ಮುಖ ಮಾಡಿದೆ. ಇದು ರಾತ್ರಿ ಸಮಯದಲ್ಲಿ ಧ್ರುವ ನಕ್ಷತ್ರವನ್ನು ನೋಡುವುದನ್ನು ಸೂಚಿಸುತ್ತದೆ.


ಈ ಮಾತುಗಳನ್ನಾಡಿರುವ ಶರ್ಮಾ ಅವರು ಹಲವು ಬಾರಿ ಎಎಸ್ ಐ ಪರವಾಗಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು