9:09 AM Friday29 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಹೊರಟವರಿಗೆ ದರ್ಶನವಾದದ್ದು ಗೋವಾದಲ್ಲಿ ಬಿಕಿನಿ ತೊಟ್ಟ ವಿದೇಶಿ ಮಹಿಳೆಯರು!!

18/05/2022, 10:46

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕೇರಳದ ತಿರುವನಂತಪುರದಿಂದ ಕರ್ನಾಟಕದ ಕೊಲ್ಲೂರಿಗೆ ಹೊರಟ ಬಸ್ಸೊಂದು ಗೋವಾದ ಸಮುದ್ರ ಕಿನಾರೆಗೆ ತಲುಪಿದ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಹಾಗೆಂತ ಇದೇನೂ ಚಾಲಕ ರಹಿತ ಅತ್ಯಾಧುನಿಕ ಬಸ್ಸಲ್ಲ. ಚಾಲಕನಿರುವ ಸಾಮಾನ್ಯ ಬಸ್ ಆಗಿದೆ. ಆದರೆ ಇದೆಲ್ಲ ಎಡವಟ್ಟಿಗೆ ಮುಖ್ಯ ಕಾರಣ ಗೂಗಲ್ ಮ್ಯಾಪ್!

ಮೇ 15ರಂದು ಪ್ರಯಾಣಿಕರಿಂದ ತುಂಬಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಕೆ-ಸ್ವಿಫ್ಟ್‌ ಬಸ್‌ ಕೊಲ್ಲೂರಿಗೆ ಹೊರಟಿತ್ತು. ದಾರಿ ಮಧ್ಯೆಇನ್ನೊರ್ವ ಚಾಲಕ ಕರ್ತವ್ಯದ ಮೇಲೆ ಬಸ್ ಏರಿದ್ದ. ರಾತ್ರಿ ವೇಳೆಯಲ್ಲಿ ಪ್ರಯಾಣಿಕರೆಲ್ಲ ಗಡದಾಗಿ ನಿದ್ದೆ ಮಾಡಿದ್ದರು. ಬೆಳಿಗ್ಗೆ ಆಗುತ್ತಲೇ ಬಸ್ ಸಮುದ್ರ ಕಿನಾರೆಯಲ್ಲಿತ್ತು. ಯಾತ್ರಾರ್ಥಿಗಳು ಕಣ್ಣುಜ್ಜುತಾ ಕಣ್ಣು ತೆರೆದರೆ ದರ್ಶನವಾಗಿರುವುದು ಮೂಕಾಂಬಿಕೆಯಲ್ಲ. ಬದಲಿಗೆ ಬಿಕಿನಿ ತೊಟ್ಟ ತಿರುಗಾಡುತ್ತಿದ್ದ ವಿದೇಶಿ ಮಹಿಳೆಯರು.

ಕೊಲ್ಲೂರಿಗೆ ಹೊರಟ್ಟಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಕೆ-ಸ್ವಿಫ್ಟ್‌ ಬಸ್ಸಿಗೆ ಎರ್ನಾಕುಳಂ ವರೆಗೆ ಓರ್ವ ಚಾಲಕನಿದ್ದು, ಅಲ್ಲಿಂದ ಇನ್ನೋರ್ವ ಚಾಲಕ ಬಸ್ಸನ್ನೇರಿ ಕರ್ತವ್ಯ ಆರಂಭಿಸಿದ. ಬಸ್‌ ಮಂಗಳೂರು ಮೂಲಕ ಕುಂದಾಪುರಕ್ಕೆ ತಲುಪಿತು. ಅಲ್ಲಿಂದ ಕೊಲ್ಲೂರಿಗೆ ತೆರಳಲು ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ಆದರೆ ಕೊಲ್ಲೂರು ಬಗೆಗೆ ಯಾವುದೇ ಮಾಹಿತಿ ಇಲ್ಲದ ಚಾಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್ಸನ್ನು ಚಲಾಯಿಸಿದ.

ಸೋಮವಾರ ಬೆಳಗ್ಗೆ ಬಸ್‌ನಲ್ಲಿದ್ದವರು ಎಚ್ಚೆತ್ತು ನೋಡಿದಾಗ ಬಸ್‌ ಸಮುದ್ರ ಕಿನಾರೆಯಲ್ಲಿತ್ತು. ಅರೆನಗ್ನ ವಿದೇಶೀಯರು ಓಡಾಡುತ್ತಿದ್ದರು. ಮೂಕಾಂಬಿಕೆಯ ದರ್ಶನಕ್ಕೆಂದು ಹೊರಟ ತಾವು ಗೋವೆಗೆ ತಲುಪಿದ್ದೇವೆ ಎಂಬುದು ತಿಳಿಯಿತು.

ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಗೂಗಲ್‌ ಮ್ಯಾಪ್‌ ದಾರಿ ತಪ್ಪಿಸಿದೆ ಎಂದು ಹೇಳಿ ಚಾಲಕ ಪಾರಾಗಲು ಯತ್ನಿಸಿದ. ಬಳಿಕ ಪ್ರಯಾಣಿಕರನ್ನು ಕೊಲ್ಲೂರಿಗೆ ಕರೆದೊಯ್ದ. ದೇವರ ದರ್ಶನ ಪಡೆದ ಪ್ರಯಾಣಿಕರು ಊರಿಗೆ ವಾಪಸಾಗಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು