2:36 PM Monday23 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ವಿಷಪೂರಿತ ಫಲ್ಗುಣಿ ನದಿ ನೀರು ; ಸಾಯುತ್ತಿವೆ ಮೀನುಗಳು ನೂರಾರು ! ಪಂಜರ ಮೀನು ಕೃಷಿಕರ ಕಣ್ಣೀರಿಗೆ ಹೊಣೆ ಯಾರು ?

15/05/2022, 21:27

ಗಣೇಶ್ ಅದ್ಯಪಾಡಿ ಮಂಗಳೂರು
info.reporterkarnataka@gmail.com

ಲಕ್ಷಗಟ್ಟಲೆ ಬಂಡವಾಳ ಹಾಕಿ ಹದಿನೆಂಟು ತಿಂಗಳು ಕಾಳಜಿಯಿಂದ ಸಾಕಿ ಇನ್ನೇನು ಮಾರಾಟಕ್ಕೆ ಅಣಿಯಾಗುವಾಗಲೆ ರಾಶಿ ರಾಶಿ ಮೀನುಗಳ ಮಾರಣ ಹೋಮ ನಡೆಯುತ್ತಿದೆ.

ಹೌದು, ಮಂಗಳೂರಿನ‌ ಬಂಗ್ರ ಕೂಳೂರು ಸಮೀಪ ಪಂಜರ ಮೀನು ಕೃಷಿ ಮಾಡುತ್ತಿರುವ ಮೀನುಗಾರರ ವ್ಯಥೆಯಿದು. ನಗರದ ಫಲ್ಗುಣಿ ನದಿಯಲ್ಲಿ ಪಂಜರ ಅಳವಡಿಸಿ ಮೀನು ಕೃಷಿ ಮಾಡುತ್ತಿರುವ ಸ್ಥಳೀಯರಾದ ರಾಯ್ಸ್ ಡಿಸೋಜಾ, ರುಫಿನಾ ಡಿಸೋಜಾ ಹಾಗೂ ಆಸ್ಟಿನ್ ಅವರ ಮೀನುಗಳು ಕಲುಷಿತಗೊಂಡ ನದಿಯ ನೀರಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಶನಿವಾರ ಒಂದೇ ದಿನ ತಲ ಒಂದೂವರೆ ಕೆ.ಜಿ ತೂಕದ 47 ಮೀನುಗಳು ಸತ್ತು ಹೋಗಿದ್ದು,‌ಕೃಷಿಕರನ್ನು ಚಿಂತೆಗೀಡು ಮಾಡಿದೆ.

ನದಿಯ ಕಿನಾರೆಯಲ್ಲಿರುವ ಅನೇಕ ಕಾರ್ಖಾನೆಗಳು ರಾಸಾಯನಿಕಯುಕ್ತ ನೀರನ್ನು ನದಿಗೆ ಬಿಡುತ್ತಿರುವುದೇ ಇದಕ್ಕೆ ಕಾರಣವಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ‌ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕೂತಿದ್ದು, ಮೀನುಗಾರರ ಕಣ್ಣೀರಿಗೆ ಬೆಲೆಯೆ ಇಲ್ಲದಂತಾಗಿದೆ.

ರಾಯ್ಸ್ ಅವರು ಹೇಳುವ ಪ್ರಕಾರ 2020ರ ಡಿಸೆಂಬರ್‌ನಲ್ಲಿ ಮೀನಿನ ಮರಿಗಳನ್ನು ಹಾಕಲಾಗಿತ್ತು, ಮಾರ್ಚ್ ತಿಂಗಳಲ್ಲಿ ಕಲುಷಿತ ನೀರು ಬರಲು ಶುರುವಾಗಿತ್ತು, ಆಗಲೇ ಹಲವಾರು ಮೀನುಗಳನ್ನು ಬಿಸಾಡಲಾಗಿತ್ತು.

ಒಟ್ಟಾಗಿ ಎಂಟೂವರೆ ಸಾವಿರ ಮೀನು ಮರಿಗಳನ್ನು ಹಾಕಿದ್ದೇವೆ. ಅರವತ್ತೈದು ದಿನಗಳಲ್ಲಿಯೇ ಬಹುತೇಕ ಮೀನುಗಳನ್ನು ಬಿಸಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆಗಲೂ ಬಿಸಾಡಿದ್ದೇವೆ ಈಗ ಹದಿನೆಂಟು ತಿಂಗಳು ಸಾಕಿದ ಮೀನನ್ನು ತೆಗೆದು ಹೂಳುವಂತಾಗಿದೆ ಎಂದು ನೋವಿನಿಂದ ಹೇಳುತ್ತಾರೆ.

ಇಲ್ಲಿ ಸಾಕಿರುವ ಮುಡಾವು ಎನ್ನುವ ಮೀನಿನ ಮರಿಗೆ 50ರೂ. ದರವಿದೆ ಇದನ್ನು ಆಂದ್ರದಿಂದ ತರಿಸಿಕೊಳ್ಳಬೇಕು. ನಾಲ್ಕೂವರೆ ಐದು ಲಕ್ಷ ರೂಪಾಯಿ ಮೀನಿನ ಮರಿಗಳಿಗೆ ಲಕ್ಷಾಂತರ ರೂಪಾಯಿ ಗೂಡುಗಳಿಗೆ ಹಾಕು ಪ್ರತಿ ತಿಂಗಳು ಮೀನಿನ ಆಹಾರಕ್ಕೆ ನಲವತ್ತು ಸಾವಿರ ಖರ್ಚು ಮಾಡಿ ಕೊನೆಗೆ ಸಾಕಿದ ಮೀನುಗಳ ಶವದ ರಾಶಿ ನೋಡಿ ಕಣ್ಣೀರು ಹಾಕುತ್ತಿರುವ ಮೀನು ಕೃಷಿಕರಿಗಾದ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು ?

ತೆರೆದ ಕಣ್ಣಿಗೆ ನದಿಯ ನೀರು ಹಾಲು ಹಾಕದ ಚಹಾ ದಂತೆ ಕಪ್ಪು ಕಪ್ಪಾಗಿ ಕಂಡರೂ ಮಾಲಿನ್ಯ ನಿಯಂತ್ರಣ ಮಂಡಳಿ ಕುರುಡಾಗಿದ್ದು ಯಾಕೆ ? ಮೀನುಗಾರರಿಗಾದ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು ? ಮೀನು ಕೃಷಿಕರ ಕಣ್ಣೀರು ಒರೆಸುವವರಾರು ? ಕೆಎಫ್‌ಡಿಸಿ ಕೂಡ ಸುಮ್ಮನೆ ಕೂತಿದ್ದು ಯಾಕೆ ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಇದಕ್ಕೆ ಸೂಕ್ತ ಉತ್ತರಗಳು ಸಿಗಬೇಕಾಗಿದೆ.

ಹದಿನೆಂಟು ತಿಂಗಳು ಕಾಳಜಿಯಿಂದ ಸಾಕಿದ ಮೀನುಗಳು ಈಗ ಶವವಾಗಿ ಮೇಲೆ ಬರುತ್ತಿರುವಾಗ ಕರುಳು ಚುರುಕು ಎನ್ನುತ್ತಿದೆ. ಎಂಟು ಟನ್‌ನಷ್ಟು ಇಳುವರಿ ಬರಬೇಕಾದಲ್ಲಿ ಈಗ ಒಂದು ಟನ್‌ ನಷ್ಟು ಮೀನು ಸಿಗುವುದು ಅನುಮಾನವಾಗಿದೆ.‌ಕಳೆದ ಒಂದೂವರೆ ವರ್ಷದಿಂದ ನದಿಯ ನೀರು ಕಲುಷಿತಗೊಳ್ಳುತ್ತಿದ್ದರೂ ಯಾರೂ ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ.
-ರಾಯ್ಸ್ ಡಿಸೋಜಾ, ಪಂಜರ ಮೀನು ಕೃಷಿಕರು

ಇತ್ತೀಚಿನ ಸುದ್ದಿ

ಜಾಹೀರಾತು