4:47 PM Tuesday28 - April 2026
ಬ್ರೇಕಿಂಗ್ ನ್ಯೂಸ್
ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು… ಶಿವಮೊಗ್ಗ | ಹುಡುಗಿ ವಿಚಾರಕ್ಕೆ ಅಪ್ರಾಪ್ತನಿಗೆ ಲಾಂಗಿನೇಟು: ತಲೆಗೇ ಸಿಲುಕಿಕೊಂಡ ಲಾಂಗ್ ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ… ಚಿಕ್ಕಮಗಳೂರು: ಸೊಪ್ಪು ತರಲು ಹೋದ ವೃದ್ಧೆ ಹೇಮಾವತಿ ನದಿಯಲ್ಲಿ ನೀರುಪಾಲು

ಇತ್ತೀಚಿನ ಸುದ್ದಿ

ಮಾಂಡ್ ಸೊಭಾಣ್ ಆಯೋಜಿಸಿದ 10 ದಿನಗಳ ‘ಕಿರ್ಣಾಂ’ ಸಮಾರೋಪ: 65 ಶಿಬಿರಾರ್ಥಿಗಳಿಗೆ ಸನ್ಮಾನ ಪತ್ರ 

07/05/2022, 18:10

ಮಂಗಳೂರು(reporterkarnataka.com): ಇಂದು ಶಿಕ್ಷಣದ ಜೊತೆಗೆ ಭಾವನೆಗಳನ್ನು ಗುರುತಿಸುವ, ಗೌರವಿಸುವುದನ್ನು ಕಲಿಯುವ ಅಗತ್ಯವಿದೆ ಎಂದು ಎಂಆರ್ ಪಿ ಎಲ್ ಸಂಸ್ಥೆಯ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಜನರಲ್ ಮ್ಯಾನೇಜರ್ ರುಡಾಲ್ಫ್ ಜೋಯರ್ ನೊ ರೊನ್ಹಾ ಹೇಳಿದರು. 


ಅವರು ಮಾಂಡ್ ಸೊಭಾಣ್ ಆಯೋಜಿಸಿದ ಹತ್ತು ದಿನಗಳ ಕಿರ್ಣಾಂ (ಕಿರಣಗಳು ) ಇದರ ಸಮಾರೋಪ ಸಮಾರಂಭದಲ್ಲಿ 65 ಜನ ಶಿಬಿರಾರ್ಥಿಗಳಿಗೆ ಸನ್ಮಾನ ಪತ್ರ ವಿತರಿಸಿ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಅವರು ವಿತೊರಿ ಕಾರ್ಕಳ ಶಿಬಿರ ಹೇಗೆ ನಡೆಯಿತು ಎಂಬ ಬಗ್ಗೆ ಮಾಹಿತಿ ನೀಡಿದರು. ಅಮಾನ್ ಕ್ರಿಸ್ ದಾಂತಿ ಮತ್ತು ಹೆಜೆಲ್ ಏಂಜಲ್ ಡಿಸೋಜ ಅವರು ಕೊಂಕಣಿ ಅಂಕಿ ಸಂಖ್ಯೆಗಳನ್ನು ಪ್ರಸ್ತುತ ಪಡಿಸಿದರು. ರಿಯಾ ಮೊಂತೆರೋ, ರಿಶೋನ್ ಸ್ವೀಡ್ ನೊರೊನ್ಹ ಮತ್ತು ಮರ್ಲಿನ್ ವೇಗಸ್ ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪೋಷಕರ ಪರವಾಗಿ ಅನಿತಾ ಲೋಬೊ ಮತ್ತು ರೋನಿ ಕ್ರಾಸ್ತ ಮಾತನಾಡಿದರು. ಮಾಂಡ್ ಸೋಬಾಣ ಅಧ್ಯಕ್ಷ ಲೂವಿ ಪಿಂಟೊ ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಯಶಸ್ಸಿಗಾಗಿ ದುಡಿದವರನ್ನು ಗೌರವಿಸಿದರು. ಇದೇ ವೇಳೆ ಶಿಬಿರದಲ್ಲಿ  ಉತ್ತಮ ಪ್ರದರ್ಶನ ನೀಡಿದವರಿಗೆ ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ  ಕಾರ್ಯದರ್ಶಿ ಕಿಶೋರ್ ಫರ್ನಾಡಿಸ್ ಮತ್ತು ಕೋಶಾಧಿಕಾರಿ ಎಲ್ರೋನ್ ರೋಡ್ರಿಗಸ್ ಉಪಸ್ಥಿತರಿದ್ದರು. ರೋಲ್ಫ್ ರಶ್ವಿತ್ ಲೋಬೊ ಮತ್ತು ಎಲ್ರಿಶ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ರೋಂವಿಲ್  ಡಿಸೋಜಾ ವಂದಿಸಿದರು. ಕೊನೆಯಲ್ಲಿ  ತ್ಯಾ ಉಪ್ರಾಂತ್ ಕಿರು ನಾಟಕ ಪ್ರದರ್ಶಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು