3:10 AM Saturday18 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಮಂಗಳೂರು ಲೀಜನಿನ 2022 – 23ನೇ ಸಾಲಿನ ಪದಗ್ರಹಣ

29/04/2022, 00:26

ಮಂಗಳೂರು( reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಮಂಗಳೂರು ಲೀಜನಿನ 2022 – 23ನೇ ಸಾಲಿನ ಪದಗ್ರಹಣ ಸಮಾರಂಭ ನಗರದ ಹೋಟೆಲ್ ಮಾಯಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು.

2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಿಶೋರ್ ಫೆರ್ನಾಂಡಿಸ್, ಕಾರ್ಯದರ್ಶಿಯಾಗಿ ಫ್ಲೇವಿ ಡಿ ಮೆಲ್ಲೋ, ಜತೆ ಕಾರ್ಯದರ್ಶಿ ಹಾಗೂ ಪಿಆರ್ ಒ ಆಗಿ ಲತಾ ಕಲ್ಲಡ್ಕ ಹಾಗೂ ಖಜಾಂಚಿಯಾಗಿ ಶಾಲಿನಿ ಪಿ. ಸುವರ್ಣ,ಸೀನಿಯರೇಟ್ ಅಧ್ಯಕ್ಷೆಯಾಗಿ ನಿರ್ಮಲಾ ಪ್ರಮೋದ್ , ಸೀನಿಯರೇಟ್ ಕಾರ್ಯದರ್ಶಿಯಾಗಿ ಮಾಲತಿ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಶೋರ್ ಫೆರ್ನಾಂಡಿಸ್ ಅವರಿಗೆ ಕಳೆದ ಸಾಲಿನ ಅಧ್ಯಕ್ಷರಾದ ರಾಷ್ಟೀಯ ಪ್ರಶಸ್ತಿ ವಿಜೇತರಾದ ಹರಿಪ್ರಸಾದ್ ಅವರು ಪ್ರಮಾಣ ವಚನ ಬೋಧಿಸಿದರು. ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಸೀನಿಯರ್ ಚೇಂಬರ್ ಅಧ್ಯಕ್ಷರಾದ ಡಾ.ಅರವಿಂದ ರಾವ್ ಕೇದಿಗೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಅತಿಥಿಗಳಾಗಿ ಭಾರತೀಯ ಜೂನಿಯರ್ ಚೇಂಬರಿನ ಜನರಲ್ ಲೀಗಲ್ ಕೌನ್ಸಿಲರ್, ಜೇಸಿ ಸೆನೆಟರ್ ಸೌಜನ್ಯ ಹೆಗ್ಡೆ, ಭಾರತೀಯ ಭೂಸೇನೆಯ ನಿವೃತ್ತ ಹಿರಿಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಹೆಬ್ರಿ, ಅಂತಾರಾಷ್ಟ್ರೀಯ ಸೀನಿಯರ್ ಚೇಂಬರಿನ ನಿರ್ದೇಶಕರಾದ ಚಿತ್ರ ಕುಮಾರ್  ಅವರು ವೇದಿಕೆಯಲ್ಲಿದ್ದರು.


ಈ ಸಂದರ್ಭದಲ್ಲಿ 6 ಮಂದಿ ಹೊಸ ಸದಸ್ಯರು ಮಂಗಳೂರು ಲೀಜನಿಗೆ ಸೇರ್ಪಡೆಗೊಂಡರು. ಸದಸ್ಯರಾದ ಅಶೋಕ್ ಎಂ.ಕೆ. ಮತ್ತು ವಿಕಾಸ್ ಶೆಟ್ಟಿ ದೇಣಿಗೆಯಿತ್ತರು. ಅಧ್ಯಕ್ಷರಾದ ಹರಿಪ್ರಸಾದ್ ಅವರು ಸ್ವಾಗತಿಸಿ, ಹೊಸದಾಗಿ ಆಯ್ಕೆಯಾದ ಕಾರ್ಯದರ್ಶಿ ಫ್ಲೇವಿ ಡಿಮೆಲ್ಲೊರವರು ವಂದಿಸಿದರು.

ಪ್ರೀತಿ ರೈ, ಶಾಲಿನಿ ಪ್ರಶಾಂತ್, ಸುರೇಶ್ ಎಂ.ಎಸ್.,ಲತಾ ಕಲ್ಲಡ್ಕ, ದತ್ತಾತ್ರೇಯ ಬಿ., ಫ್ಲೇವಿ ಡಿಮೆಲ್ಲೊ ವಿವಿಧ ಜವಾಬ್ದಾರಿ ನಿರ್ವಹಿಸಿದರು.ಉಡುಪಿ ಟೆಂಪಲ್ ಸಿಟಿ ಲೀಜನ್, ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್, ಉಳ್ಳಾಲ ರಾಣಿ ಅಬ್ಬಕ್ಕ ಲೀಜನ್, ಮಂಗಳೂರು ಜೇಸಿಸ್ ಮತ್ತಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು