ಇತ್ತೀಚಿನ ಸುದ್ದಿ
ಕಾರ್ಕಳ: ಮಾನಸಿಕ ಖಿನ್ನತೆಯಿಂದ ವೃದ್ಧ ನೇಣು ಬಿಗಿದು ಆತ್ಮಹತ್ಯೆ
26/04/2022, 23:37
ಕಾರ್ಕಳ(reporterkarnataka.com): ಮಾನಸಿಕ ಕಾಯಿಲೆ ಯಿಂದ ಬಳಲುತಿದ್ದ ವೃದ್ದರೊಬ್ಬರು
ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಬಂಗಾರುಗುಡ್ಡೆ ದೇಕಿಬೆಟ್ಟು ಎಂಬಲ್ಲಿ ನಡೆದಿದೆ. ನಾರಾಯಣ ನಾಯ್ಕ್ ಆತ್ಮಹತ್ಯೆ (78)ಮಾಡಿಕೊಂಡವರು. ಮಾನಸಿಕ ಖಿನ್ನತೆಗೆ ಒಳಗಾಗಿ ಸುಮಾರು 3-4 ಸಾರಿ ನಮ್ಮಲ್ಲಿ ತಾನು ಸಾಯುತ್ತೇನೆಂದು ಎಂದು ಹೇಳಿ ಅತ್ಮಹತ್ಯೆಗೆ ಪ್ರಯತ್ನಿಸಿದ್ದರು. ಎ.25 ರಂದು ರಾತ್ರಿ ತನ್ನ ಮನೆಯ ಹಿಂದುಗಡೆ ಇರುವ ದನದ ಕೊಟ್ಟಿಗೆಯ ಹೊರಭಾಗದಲ್ಲಿರುವ ಮೇಲಿನ ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೆಬ್ರಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.