6:29 PM Sunday21 - September 2025
ಬ್ರೇಕಿಂಗ್ ನ್ಯೂಸ್
ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ…

ಇತ್ತೀಚಿನ ಸುದ್ದಿ

ವಿಜಯಪುರ: ಜೋಡೆತ್ತುಗಳಿಂದ ಮುಖ್ಯಮಂತ್ರಿ ಬೊಮ್ಮಾಯಿಯ ತಿವಿಯಲು ಯತ್ನ; ಇದಕ್ಕೆಲ್ಲ ಕಾರಣ ಏನು ಗೊತ್ತೇ?

26/04/2022, 16:29

ವಿಜಯಪುರ(reporterkarnataka.com):  ಜನಜಂಗುಳಿಯ ಗದ್ದಲದಿಂದ ಬೆದರಿದ ಜೋಡೆತ್ತುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಿವಿಯಲು ಯತ್ನಿಸಿದ ಘಟನೆ ವಿಜಯಪುರದ ತಾಳಿಕೋಟೆಯ ಬಂಟನೂರಲ್ಲಿ ನಡೆದಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಂಟನೂರು ಸಮೀಪದ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಶಂಕು ಸ್ಥಾಪನೆಗೆ ಆಗಮಿಸಿದ್ದರು. ಬಳಿಕ ಸಿಎಂ ಅವರು ಬಂಟನೂರು ಗ್ರಾಮದ ರೈತರಿಂದ ಜೋಡೆತ್ತು ಹಾಗೂ ಹಸು ಕಾಣಿಕೆ ಕಾರ್ಯಕ್ರಮದಲ್ಲಿ ಜೋಡೆತ್ತುವನ್ನು ಕಾಣಿಕೆ ನೀಡುವ ಕಾರ್ಯಕ್ರಮವಿತ್ತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಜೋಡೆತ್ತುವನ್ನು ನೋಡಲು ಹೋದಾಗ ಜನಜಂಗುಳಿ ಮತ್ತು ಗದ್ದಲದಿಂದ ಗಾಬರಿಗೊಂಡು ಬೊಮ್ಮಾಯಿ ಅವರನ್ನು ತಿವಿಯಲು ಮುಂದಾಯಿತು. ಸ್ಥಳದಲ್ಲೇ ಇದ್ದ ರೈತ ಎ. ಎಸ್. ಪಿ. ರಾಮ್ ಅರಸಿದ್ದಿ ಎಂಬುವವರು ತಕ್ಷಣ ಎತ್ತಿನ ಕೊಂಬನ್ನು ಹಿಡಿದು ಹಿಂದಕ್ಕೆ ಎಳೆದು ಮುಖ್ಯಮಂತ್ರಿಯವರನ್ನು ಪಾರು ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು