5:28 AM Monday25 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 2 ಮಂದಿ ಸ್ಥಳದಲ್ಲೇ ಸಾವು; ಓರ್ವ ಗಂಭೀರ

22/04/2022, 11:38

ಸುರತ್ಕಲ್(reporterkarnataka.com): ಓಮ್ನಿ ಕಾರು ಹಾಗೂ ಖಾಸಗಿ ಎಕ್ಸ್ ಪ್ರೆಸ್ ಬಸ್ 
ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಓಮ್ನಿ ಕಾರು ಹಳೆಯಂಗಡಿ ಪೇಟೆ ಒಳರಸ್ತೆಯಾಗಿ ಪಾವಂಜೆ ಜಂಕ್ಷನ್ ಗೆ ಬರುತ್ತಿದ್ದು ಬಸ್ ಉಡುಪಿ ಕಡೆಗೆ ಸಂಚರಿಸುತ್ತಿತ್ತು. ಮೃತಪಟ್ಟವರನ್ನು ಓಮ್ನಿಯಲ್ಲಿದ್ದ ವಸಂತ (64) ಹಾಗೂ ಭುಜಂಗ (62) ಎಂದು ಗುರುತಿಸಲಾಗಿದೆ. ಬಾಲಕೃಷ್ಣ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲರೂ‌ ಮುಕ್ಕದ ಪಡ್ರೆ ನಿವಾಸಿಗಳು ಎಂದು ತಿಳಿದು ಬಂದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದ ವಸಂತ ಮತ್ತು ಬುಜಂಗ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು