10:53 PM Thursday16 - January 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಮಂಗಳೂರು ಸಾರ್ಟ್ ಸಿಟಿ ಫಂಡ್: ರಸ್ತೆಗೆ 250 ಕೋಟಿ!; ಹಳೆ ಬಂದರು ಅಭಿವೃದ್ಧಿಗೆ ಬರೇ 68 ಕೋಟಿ!!

21/04/2022, 13:51

ಮಂಗಳೂರು(reporterkarnataka.com): ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಮಂಜೂರಾದ 590.25 ಕೋಟಿ ಅನುದಾನದಲ್ಲಿ 250 ಕೋಟಿ ರೂ.ವನ್ನು ರಸ್ತೆಗೆ ಮೀಸಲಿಡಲಾಗಿದೆ. ಇದರಲ್ಲಿ 120 ಕೋಟಿ ರೂ.ವನ್ನು ಈಗಾಗಲೇ ವೆಚ್ಚಮಾಡಲಾಗಿದ್ದು, ಇನ್ನು 130 ಕೋಟಿ ರೂ.ಗಳ ರಸ್ತೆ ಕಾಮಗಾರಿ ನಡೆಯಲಿದೆ.

ಸ್ಮಾರ್ಟ್ ಸಿಟಿಯಡಿ 56 ರಸ್ತೆಗಳ ಅಭಿವೃದ್ಧಿ ನಡೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ವಿಶೇಷವೆಂದರೆ ರಸ್ತೆಗೆ 250 ಕೋಟಿ ರೂ. ಮೀಸಲಿಟ್ಟರೆ, ಹಳೆ ಬಂದರು ಅಭಿವೃದ್ಧಿಗೆ ಬರೇ 68 ಕೋಟಿ ರೂಪಾಯಿ ಮಾತ್ರ.
ವಾಸ್ತವದಲ್ಲಿ ಮಂಗಳೂರಿನ ಐಡೆಂಟಿಟಿಯೇ ಇಲ್ಲಿಯ ಸಮುದ್ರ ಮತ್ತು ಹಳೆ ಬಂದರು. ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಬೆನ್ನೆಲುಬು ಹಳೆ ಬಂದರು ದಕ್ಕೆಯಾಗಿದೆ. ಮೀನುಗಾರರು ಸಮುದ್ರದಿಂದ ತರುವ ಮತ್ಸರಾಶಿ ಇಲ್ಲಿನ ಇಕಾನಮಿಯನ್ನು ಅವಲಂಬಿಸಿದೆ. ಹಳೆ ಬಂದರು ಅಭಿವೃದ್ಧಿ ಅಂದ್ರೆ ಅಲ್ಲಿನ ಹಳೆ ಕಟ್ಟಡಕ್ಕೆ ಬಣ್ಣ ಬಳಿಯುವುದಲ್ಲ, ಬದಲಿಗೆ ಹಳೆ ಬಂದರಿನಿಂದ ನವ ಮಂಗಳೂರು ಬಂದರಿಗೆ ನೇರ ರಸ್ತೆ ವ್ಯವಸ್ಥೆ ಮಾಡುವುದು, ಹಳೆ ಬಂದರಿನಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನೇರ ರಸ್ತೆ ಕಲ್ಪಿಸುವುದು, ಹಳೆ ಬಂದರಿನಿಂದ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸುವುದು, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ನವ ಮಂಗಳೂರು ಬಂದರಿಗೆ ರಸ್ತೆ ಕಲ್ಪಿಸುವುದು ಮುಂತಾದ ಅಭಿವೃದ್ಧಿ ಸ್ಫೋಟಗೊಳ್ಳುವಂತಹ ಯೋಜನೆ ರೂಪಿಸುವ ಅಗತ್ಯವಿದೆ. ಇಕಾನಮಿ ಹುಟ್ಟುವಲ್ಲೆಲ್ಲ ಸಂಪರ್ಕ ವ್ಯವಸ್ಥೆಯಾಗಬೇಕು. ಆಗ
ಸಂಪರ್ಕವೇ ಅಭಿವೃದ್ಧಿಗೆ ಸಾಧನವಾಗುತ್ತದೆ. ಅದು ಬಿಟ್ಟು ಹಳೆ ರಸ್ತೆ ಅಭಿವೃದ್ಧಿಗೆ, ಬಣ್ಣದ ಫುಟ್ ಪಾತ್ ನಿರ್ಮಾಣಕ್ಜೆ ಸ್ಮಾರ್ಟ್ ಸಿಟಿ ಫಂಡಿನ ಕೋಟಿಗಟ್ಟಲೆ ಹಣ ಸುರಿದರೆ ಗುತ್ತಿಗೆದಾರರಿಗೆ, ಕಮಿಷನ್ ಕೊಳ್ಳೆ ಹೊಡೆಯುವ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಹಾಯವಾಗುತ್ತದೆ
ಹೊರತು ಮಂಗಳೂರು ನಾಗರಿಕರಿಗೆ ಯಾವುದೇ ಪ್ರಯೋಜನವಾಗಲಾರದು. 
ಇಲ್ಲಿ ಮಾತ್ರ
ಚೆನ್ನಾಗಿರುವ ರಸ್ತೆಯನ್ನು ಅಗೆದು ಮತ್ತೆ ಕಾಂಕ್ರೀಟ್ ಹಾಕುತ್ತಾರೆ, ಕೆಡಹಿದ ಕ್ಲಾಕ್ ಟವರ್ ಹೊಸ ಅವತಾರದಲ್ಲಿ ತಲೆ ಎತ್ತುತ್ತದೆ. ಜನಪ್ರತಿನಿಧಿಗಳ ಈ ಎಲ್ಲ ಆಟವನ್ನು ಅರ್ಥ ಮಾಡಿಕೊಳ್ಳದಷ್ಟು ಜನರು ಹೆಡ್ಡರಲ್ಲ. ರಸ್ತೆ, ಫುಟ್ ಪಾತ್ ಎನ್ನುವುದು ಕೇವಲ 4- 5 ವಾರ್ಡ್ ಗಳಿಗೆ ಮಾತ್ರ ಸೀಮಿತವಾದದ್ದು ಅಲ್ಲ ತಾನೆ?
ನಗರದ 60 ವಾರ್ಡ್ ಗಳ ಪೈಕಿ ಜನ ಸಾಮಾನ್ಯರು ಓಡಾಡುವ ಹೆಚ್ಚಿನ ಫುಟ್ ಪಾತ್ ಗಳು ಅಲ್ಲಲ್ಲಿ ಬಾಯಿ ಬಿಟ್ಟು ಬಲಿಗಾಗಿ ಕಾಯುತ್ತಿದೆ. ಇದ್ಯಾಕೆ ಜನಪ್ರತಿನಿಧಿಗಳಿಗೆ ಕಾಣಿಸುವುದಿಲ್ಲ. ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಬಹುತೇಕ ಕಡೆಗಳಲ್ಲಿ ಫುಟ್ ಪಾತ್ ಅವ್ಯವಸ್ಥೆ ಹೇಳಿ ತೀರದು. ಪ್ರಭಾವಿ ವ್ಯಕ್ತಿಗಳ ಮನೆ, ಕಚೇರಿ ಇರುವ ಪ್ರದೇಶದಲ್ಲಿ 5 ವರ್ಷಕ್ಕೊಮ್ಮೆ ಬೇಕಾದರೂ ಫುಟ್ ಪಾತ್ ಚಪ್ಪಡಿ ಕಲ್ಲು ಬದಲಾಯಿಸಲಾಗುತ್ತದೆ. ಉಳಿದ ಕಡೆಗಳಲ್ಲಿ 20- 30 ವರ್ಷಗಳಿಂದ ಶಿಥಿಲಾವಸ್ಥೆಯಲ್ಲೇ ಫುಟ್ ಪಾತ್ ಗಳಿವೆ. ಮಂಗಳೂರು ಮಹಾನಗರಪಾಲಿಕೆ ಕಚೇರಿಯಿಂದ ಕೂಗಳತೆಯ ದೂರದಲ್ಲಿರುವ ಲೇಡಿಹಿಲ್ ಪ್ರದೇಶದಲ್ಲೇ ಇಂತಹ ಫುಟ್ ಪಾತ್ ಅವ್ಯವಸ್ಥೆಯನ್ನು ಕಾಣಬಹುದಾಗಿದೆ.

ಮಂಗಳೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ 1628 ಎಕರೆ ಪ್ರದೇಶ ಪುನರ್ ಅಭಿವೃದ್ಧಿಗೆ ಯೋಜನೆ ಇದೆ. ಮಂಗಳೂರಿನಲ್ಲಿ ವಾಣಿಜ್ಯ ಅಭಿವೃದ್ಧಿಗೆ 100 ಎಕರೆ ಜಮೀನು ಮೀಸಲಿಡಬೇಕು. ಹಂಪನಕಟ್ಟೆ ಪ್ರದೇಶಾಭಿವೃದ್ಧಿಗೆ 27 ಎಕರೆ ಮೀಸಲಿಡಬೇಕು. ಮೀನುಗಾರಿಕೆ ಬಂದರು ಅಭಿವೃದ್ಧಿಗೆ 22 ಎಕರೆ, ಹಳೆ ಬಂದರು ಅಭಿವೃದ್ಧಿಗೆ 10 ಎಕರೆ, ಧಾರ್ಮಿಕ ವಲಯಕ್ಕೆ 57 ಎಕರೆ, ಮರೀನಾ ಅಭಿವೃದ್ಧಿಗೆ 25 ಎಕರೆ, ಐಟಿ ಮತ್ತು ಬಹು ಉಪಯೋಗಿ ವಲಯಕ್ಕೆ 42 ಎಕರೆ ಹಾಗೂ ಸೋಲಾರ್ ಫಾರ್ಮ್ ಗೆ 20 ಎಕರೆ ಮೀಸಲಿಡಬೇಕು. ಇವೆಲ್ಲ ಯೋಜನೆಗಳು ಕಾರ್ಯಗತಗೊಂಡರೆ ಮಾತ್ರ ಮಂಗಳೂರು ಸ್ಮಾರ್ಟ್ ಸಿಟಿಯ ಅರ್ಹತೆಯನ್ನು ಪಡೆಯುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು