10:43 AM Thursday16 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಸರಕಾರ ಕೊಡುವ 3 ಸಾವಿರ ಪರಿಹಾರದಿಂದ ಮೀನುಗಾರಿಕೆ ಉಳಿಸಲು ಸಾಧ್ಯವಿಲ್ಲ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ 

14/06/2021, 07:30

ಉಡುಪಿ(reporterkarnataka news): ಮೀನುಗಾರಿಕೆ ಇಂದು ಅಳಿವಿನಂಚಿಗೆ ಸರಿದಿದೆ. ಮೀನುಗಾರರ ಸಮಸ್ಯೆಗಳಿಗೆ ಸರಕಾರ ತುರ್ತು ಸ್ಪಂದಿಸಬೇಕಾಗಿದೆ. ಅದೇ ರೀತಿ ಮೀನುಗಾರಿಕೆ ಉಳಿವಿಗೆ ಏಕ ರೂಪದ ಕಾನೂನು ಜಾರಿಗೆ ತರುವ ಅಗತ್ಯವಿದೆ. ತಾನು ಮೀನುಗಾರಿಕೆ ಸಚಿವನಾಗಿದ್ದಾಗ ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆ. ಕೇಂದ್ರ ಕೃಷಿ ಸಚಿವರ ಜತೆ ಈ ಕುರಿತು ಚರ್ಚೆ ಕೂಡ ಮಾಡಿದ್ದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಮೀನುಗಾರಿಕೆಗೆ ಬಳಸುವ ಡಿಸೇಲ್ ಬೆಲೆ ಇದೀಗ ಹೆಚ್ಚಳವಾಗಿದೆ. ಕೊರೊನಾದಿಂದ ರಫ್ತಿನ ಮೇಲೂ ಪರಿಣಾಮ ಬೀರಿದೆ. ನಮ್ಮ ಹೆಚ್ಚಿನ ಮೀನು ಉತ್ಪನ್ನಗಳು ಚೀನಾ ದೇಶಕ್ಕೆ ರಫ್ತಾಗುತ್ತದೆ. ಇದೀಗ ಅಲ್ಲಿಯೂ ಕೂಡ ಸಮಸ್ಯೆ ಏರ್ಪಟ್ಟಿದೆ ಇದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಸಚಿವರು ಅಭಿಪ್ರಾಯಪಟ್ಟರು.

ರಾಜ್ಯ ಸರಕಾರ ಕೊಡುವ ಕೇವಲ 3 ಸಾವಿರ ರೂ. ಪರಿಹಾರದಿಂದ ಮೀನುಗಾರಿಕೆ ಉಳಿಸಲು ಸಾಧ್ಯವಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮೀನುಗಾರಿಕೆಗೆ ಪುನಶ್ಚೇತನ ನೀಡಬೇಕು. ಏಕ ರೂಪದ ಕಾನೂನು ತರದೆ ಹೋದರೆ ಮೀನುಗಾರಿಕೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮೀನುಗಾರಿಕೆ ಇದೇ ರೀತಿ ಮುಂದೆ ಸಾಗಿದರೆ ಮುಂದಿನ 10 ವರ್ಷಗಳಲ್ಲಿ ಮೀನುಗಾರಿಕೆ ಅವನತಿ ಹೊಂದುವ ಸಾಧ್ಯತೆಯ ಕುರಿತು ಭವಿಷ್ಯ ನುಡಿದಿದ್ದೆ. ಆದರೆ ಯಾರೂ ಗಂಭೀರವಾಗಿ ಇದನ್ನು ತೆಗೆದುಕೊಂಡಿರಲಿಲ್ಲ. ಇದೀಗ ದೋಣಿ ಹೊಂದಿರುವವರು, ಅವಲಂಬಿತರು, ಉದ್ದಿಮೆದಾರರು ಭೀತಿಗೊಳಗಾಗಿದ್ದಾರೆ. ಇದೇ ನೀತಿ ಸೂಕ್ತ ನಿರೂಪಣೆಯಿಲ್ಲದೆ ಮೀನುಗಾರಿಕೆ ಮುಂದುವರಿಸಿದರೆ ಅರಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ. ಕೇಂದ್ರ ಹಾಗೂ ಎಲ್ಲ ರಾಜ್ಯಗಳು ಸರಕಾರ ಸೇರಿ ಧೃಢವಾದ ಸಂಕಲ್ಪ ಮಾಡಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೀನುಗಾರಿಕೆಯ ಭವಿಷ್ಯ ಚಿಂತಾಜನಕವಾಗಲಿದೆಯೆಂದು ಅವರು ನುಡಿದರು.

ರಾಜ್ಯ ಸರಕಾರ ತಕ್ಷಣಕ್ಕೆ ಡಿಸೇಲ್ ಸಬ್ಸಿಡಿ ಬಿಡುಗಡೆ ಮಾಡಬೇಕು. ಮೀನಗಾರರಿಗೆ ಕೇಂದ್ರ ಸರಕಾರದ ಎಕ್ಸೆಸ್ ತೆರಿಗೆಯಾದ 33 ರೂಪಾಯಿಂದ ವಿನಾಯಿತಿ ನೀಡಬೇಕು. ಮೀನುಗಾರರಿಗೆ ಡಿಸೇಲ್ 50 ರೂಪಾಯಿ ಒಳಗೆ ಸಿಗುವಂತಾಗಬೇಕು. ಅದು ಮೀನುಗಾರರಿಗೆ ತಾತ್ಕಾಲಿಕ ಉಪಶಮನ ನೀಡುತ್ತದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು