4:29 AM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಸೈಕಲ್‌ನಲ್ಲಿ ಆಡುತ್ತಿದ್ದ ಆರು ವರ್ಷದ ಬಾಲಕನ ಮೇಲೆ ಹರಿದ ಟಿಪ್ಪರ್ ; ಬಜಾಲ್‌ನಲ್ಲಿ ನಡೆದ ದುರ್ಘಟನೆ

20/04/2022, 22:10

ಮಂಗಳೂರು(reporterkarnataka.com: ನಗರದ ಬಜಾಲ್ ಕಟ್ಟಪುಣಿ ಎಂಬಲ್ಲಿ ಲಾರಿ ಹರಿದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಆರು ಗಂಟೆ ವೇಳೆಗೆ ನಡೆದಿದೆ.

ಬಜಾಲ್ ಜಲ್ಲಿಗುಡ್ಡೆ ಸಮೀಪದ ಕಟ್ಟಪುಣಿಯ ಕೋರ್ದಬ್ಬು ದೈವಸ್ಥಾನದ ರಸ್ತೆಯಲ್ಲಿ ಘಟನೆ ನಡೆದಿದ್ದು, ಬಾಲಕ ಸೈಕಲ್ ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಲಾರಿ ಬಾಲಕನ ಮೇಲಿನಿಂದ ಹರಿದಿದೆ.


ಸ್ಥಳೀಯ ನಿವಾಸಿ ಹಿದಾಯತುಲ್ಲಾ ಎಂಬವರ ಪುತ್ರ ಮೊಹಮ್ಮದ್ ಜೀಶನ್ (6) ಮೃತ ಬಾಲಕ.ಮೊಹಮ್ಮದ್ ಜೀಶನ್ ಮತ್ತು ಇನ್ನೊಬ್ಬ ಬಾಲಕ ಜೊತೆಯಾಗಿ ಅಂಗಡಿಗೆಂದು ಬಂದಿದ್ದು ಒಬ್ಬ ಹುಡುಗ ಇಳಿದು ಹೋಗಿದ್ದಾನೆ ಎನ್ನಲಾಗುತ್ತಿದೆ. ಈ ವೇಳೆ ಸೈಕಲ್ ನಲ್ಲಿದ್ದ ಹುಡುಗನಿಗೆ ಟಿಪ್ಪರ್ ಡಿಕ್ಕಿಯಾಗಿದೆ. ಕಟ್ಟಪುಣಿ ರಸ್ತೆ ಕಿರಿದಾದ ರಸ್ತೆಯಾಗಿದ್ದು ಟಿಪ್ಪರ್ ಲಾರಿಯಲ್ಲಿ ಚಾಲಕ ಮಣ್ಣು ಹೇರಿಕೊಂಡು ಫೈಸಲ್ ನಗರಕ್ಕೆ ತೆರಳುತ್ತಿದ್ದ.

ಘಟನೆ ಆಗುತ್ತಲೇ ಜನ ಸೇರಿದ್ದು, ಲಾರಿ ಚಾಲಕ ಅಬುಬಕ್ಕರ್ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು