4:16 PM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಲಿಂಗಸುಗೂರು: ಸಮಾಜ ಕಲ್ಯಾಣ ಇಲಾಖೆ  ಹೊರಗುತ್ತಿಗೆ ಕಾರ್ಮಿಕರಿಗೆ 9 ತಿಂಗಳಿನಿಂದ ಸಂಬಳ ಇಲ್ಲ!

20/04/2022, 20:07

ಅಮರೇಶ್ ಲಿಂಗಸುಗೂರು ರಾಯಚೂರು

info.reporterkarnataka.com

ಒಂದು ತಿಂಗಳು ಸಂಬಳವಾಗದಿದ್ದರೆ ಈ ದುಬಾರಿ ಕಾಲದಲ್ಲಿ ಬದುಕುವುದು ಕಷ್ಟ. ಹಾಗಾದರೆ 9 ತಿಂಗಳಿನಿಂದ ವೇತನ ಕೊಡದಿದ್ದರೆ, ಆ ಕಾರ್ಮಿಕರು ಹೇಗೆ ಬದುಕು ನಡೆಸಬೇಕು? ಇಂತಹದ್ದೊಂದು ಭಯಾನಕ ವಾಸ್ತವ ರಾಯಚೂರು ಜಿಲ್ಲೆಯಿಂದ ವರದಿಯಾಗಿದೆ.

ಲಿಂಗಸುಗೂರು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ವಸತಿ ನಿಲಯದ ಹೊರಗುತ್ತಿಗೆ ಕಾರ್ಮಿಕರಿಗೆ  9 ತಿಂಗಳಿನ ವೇತನ ನೀಡದೆ ಸತಾಯಿಸಲಾಗುತ್ತಿದೆ.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಎಆರ್ ಸಿ ಗುತ್ತಿಗೆದಾರರು ನಿರ್ಲಕ್ಷದಿಂದ ವಸತಿ ನಿಲಯದ ಕಾರ್ಮಿಕರು ಬೇಸತ್ತು ಪಟ್ಟಣದ ಸಮಾಜ ಕಲ್ಯಾಣ ಕಾರ್ಯಾಲಯ ಮುಂದೆ ವೇತನಕ್ಕಾಗಿ ಪ್ರತಿಭಟನೆ ನಡೆಸಿದರು. ನಂತರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬರುವ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸುಮಾರು 9 ತಿಂಗಳಿಂದ ವೇತನ ನೀಡಿರುವುದಿಲ್ಲ. ನಮ್ಮ ಕುಟುಂಬ ನಿರ್ವಹಣೆ ಮತ್ತು ನಮ್ಮ ಜೀವನ ತೀರಾ ಕಷ್ಟಕರವಾಗಿರುತ್ತದೆ. 6 ದಿನಗಳೋಳಗಾಗಿ ನಮಗೆ ವೇತನವನ್ನು ನೀಡಬೇಕು. ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ನಮ್ಮ ವೇತನ ನೀಡುವ ವಿಚಾರದಲ್ಲಿ ನಿರ್ಲಕ್ಷ ವಹಿಸಿದರೆ ನಾವುಗಳು ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರು ಇಲಾಖೆಯ ಮುಂದುಗಡೆ ಅನಿರ್ದಿಷ್ಟವಧಿಯ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ದೇವೇಂದ್ರಪ್ಪ ಪಂಜಲರ್, ಚಿನ್ನಪ್ಪ, ಹನುಮರೆಡ್ಡಿ, ಗೌರಮ್ಮ, ರೇಣುಕಮ್ಮ, ಬಸಮ್ಮ, ಕಮಲಬಾಯಿ, ಶಿವಮ್ಮ, ಇನ್ನಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು