ಇತ್ತೀಚಿನ ಸುದ್ದಿ
ಅಂಜನಾದ್ರಿಯಿಂದ ಅಯೋಧ್ಯಗೆ ಶೀಘ್ರದಲ್ಲೆಯೇ ರೈಲು ಸಂಚಾರ ಪ್ರಾರಂಭಿಸಲಿ: ಸಮ್ಮೇಳನಾಧ್ಯಕ್ಷ ಕುಂದರ್ಗಿ ಅಭಿಮತ
20/04/2022, 16:32
ಕೊಪ್ಪಳ(reporterkarnataka.com): ಪವಿತ್ರ ಯಾತ್ರಾ ಸ್ಥಳವಾದ ಅಂಜನಾದ್ರಿ ಪರ್ವತವನ್ನು ಅಭಿವೃದ್ಧಿಗೊಳಿಸಬೇಕು. ಪ್ರವಾಸಿಗಳಿಗೆ ಹಾಗೂ ಭಕ್ತರಿಗೆ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಅಂಜನಾದ್ರಿಯಿಂದ ಅಯೋಧ್ಯಗೆ ಶೀಘ್ರದಲ್ಲೆಯೇ ರೈಲು ಸಂಚಾರ ಪ್ರಾರಂಭಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಕೆ .ಎಲ್ .ಕುಂದರಗಿ ಹೇಳಿದರು.
ಜಿಲ್ಲೆಯ ಗಂಗಾವತಿ ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಜರುಗಿದ ಅಂಜನಾದ್ರಿ ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಜನಾದ್ರಿಯು ಆಂಜನೇಯನ ಜನ್ಮ ಸ್ಥಳವಾಗಿದ್ದು, ಇದು ಹಿಂದುಗಳ ಪವಿತ್ರ ಕ್ಷೇತ್ರವಾಗಿದ್ದು, ರಾಮಾಯಣದ ಕಾಲ ಘಟ್ಟದ ಅನೇಕ ನೆನಪುಗಳನ್ನ ನೆನಪಿಸಿ ಆಂಜನೇಯ ಶ್ರೀರಾಮನ ಭಕ್ತ ಎಂಬುದನ್ನು ನಿರೂಪಿಸುವ ಹಲವಾರು ಪಳಯುಳಿಕೆಗಳನ್ನು ಇಲ್ಲಿ ಕಾಣಬಹುದು. ಆಂಜನಾದ್ರಿ ಪರ್ವತವೇ ಹನುಮಂತನ ಜನ್ಮಸ್ಥಳವೆಂಬುದು ಸರ್ವಕಾಲಿಕಾ ಸತ್ಯ. ಕನ್ನಡಿಗರ ಆರಾಧ್ಯ ದೇವನಾದ ಹನುಮಾನ ದೇವಸ್ಥಾನವನ್ನು ಪ್ರತಿಯೊಂದು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕಾಣಬಹುದು. ಆದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅಂಜನಾದ್ರಿ ಪರ್ವತವನ್ನು ಅಭಿವೃದ್ಧಿಗೊಳಿಸಬೇಕು ಎಂದರು.
ಸಮ್ಮೇಳನದಲ್ಲಿ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್ .ಶ್ರೀನಾಥ್, ಅಂಜನಾದ್ರಿಯ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನಡಿಯಲ್ಲಿ ಸಮಗ್ರವಾಗಿ ಅಭಿವೃದ್ದಿಗೊಳಿಸಲು ಮುಂದಾಗಬೇಕು ಎಂದರು.
ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂಜನಾದ್ರಿ ಸಾಂಸ್ಕೃತಿಕ
ಉತ್ಸವ ಮತ್ತು ಸಮ್ಮೇಳನದಲ್ಲಿ ಮಾತನಾಡುತ್ತಾ, ಉತ್ತರದಲ್ಲಿ ಶ್ರೀರಾಮ, ದಕ್ಷಿಣದಲ್ಲಿ ಅಂಜನಾದ್ರಿ ಹನುಮಾನ್ ಮುಖ್ಯವಾಗಿದೆ. ನಾಡಿನಲ್ಲಿ ಹನುಮ ಜಯಂತಿಯನ್ನು ಭಕ್ತಿ ಬಾವಗಳಿಂದ ಎಲ್ಲರೂ ಆಚರಿಸುವ ಶುಭ ಸಂದರ್ಭದಲ್ಲಿ ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಸಮಿತಿಯು ಗಂಗಾವತಿಯಲ್ಲಿ ಅಂಜನಾದ್ರಿ ಉತ್ಸವನ್ನು ಆಯೋಜನೆ ಮಾಡಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ನೃತ್ಯ ಮತ್ತು ಸಂಗೀತದ ಮೂಲಕ ಅನಾವರಣಗೊಳಿಸುತ್ತಿರುವದು ವಿಶೇಷ ಮತ್ತು ವಿನೂತನ ಪಯತ್ನವಾಗಿದೆ ಎಂದು ಉತ್ಸವ ಸಮಿತಿಯ ಕಾರ್ಯವನ್ನು ಪ್ರಶಂಸಿಸಿದರು.
ಸಮ್ಮೇಳನಾಧ್ಯಕ್ಷರು ಬರೆದ ನಾಟಕದ ಪುಸ್ತಕ ಲೋಕಾರ್ಪಣೆಗೊಂಡಿದ್ದು ಸಂತೋಷವಾಗಿದೆ. ಪ್ರತಿ ವರ್ಷವೂ ಹೀಗೆ ಸಂಭ್ರಮ-ಸಡಗರದಿಂದ ಅಂಜನಾದ್ರಿ ಉತ್ಸವ ನಡೆಯಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಗಂಗಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಜನಾದ್ರಿ ಪರ್ವತದ ವಿಶೇಷಗಳನ್ನು ರಾಜ್ಯದ ಪ್ರವಾಸಿಗಳಿಗೆ ತಿಳಿಸಿ. ಈ ಸ್ಥಳವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾಡಬೇಕು ಎಂದರು.
ಉತ್ಸವದ ಸಂಚಾಲಕ ಮಹೇಶ ಬಾಬು ಸುರ್ವೆ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೊರೋನಾ ಮತ್ತು ಅನೇಕ ತಾಂತ್ರಿಕ ಕಾರಣಗಳಿಂದಾಗಿ ಮುಂದುಡೂತ್ತಾ ಬಂದಿದ್ದು. ಈ ವರ್ಷ ಉತ್ಸವವನ್ನು ಅತ್ಯಂತ್ಯ ಸಡಗರದಿಂದ ರಾಜ್ಯದ ವಿವಿಧ ಜಲ್ಲೆಗಳಿಂದ ಸುಮಾರು 40ಕ್ಕೂ ಹೆಚ್ಚು ಕಲಾ ತಂಡಗಳನ್ನು ಆಹ್ವಾನಿಸಿ ಸಾಂಸ್ಕøತಿಕ ಉತ್ಸವ ಆಚರಿಸುವ ಮೂಲಕ ಅಂಜನಾದ್ರಿಗೆ ಸಾಂಸ್ಕೃತಿ ಮೆರಗನ್ನು ನೀಡುವ ಪಯತ್ನವಾಗಿ ಮಾಡುತ್ತಿರುವುದಕ್ಕೆ ನೀವೆಲ್ಲಾ ಸಾಕ್ಷಿಯಾಗಿದ್ದು ಸಂತೋಷದ ವಿಚಾರವಾಗಿದೆ. ಮುಂದಿನ ವರ್ಷ ಅಂಜನಾದ್ರಿ ಸಾಂಸ್ಕೃತಿಕ ಶೋಭಾಯಾತ್ರೆ ಮಾಡಲಾಗುವದು. ಈ ಸಾಂಸ್ಕೃತಿ ಶೋಭಾಯಾತ್ರೆಯಲ್ಲಿ ರಾಜ್ಯದ ಖ್ಯಾತ ಮೆರವಣಿಗೆ ತಂಡಗಳನ್ನು ಆಹ್ವಾನಿಸಿ ಅಂಜನಾದ್ರಿಯಿಂದ ಗಂಗಾವತಿ ವರೆಗೂ ಮಾಡಲಾಗುವದು ಎಂದರು.
ಸಮ್ಮೇಳನಾಧ್ಯಕ್ಷರಾದ ಕೆ.ಎಲ್.ಕುಂದರಿಗಿ ಅವರು ಬರೆದ ಸ್ವತಂತ್ರ ಸೇನಾನಿ ವೀರ ಸಾರ್ವಕರ ನಾಟಕ ಪುಸ್ತಕವನ್ನು ಕರ್ನಾಟಕ ನಾಟಕ ಅಕಾಡಮಿ ಆದ್ಯಕ್ಷರಾದ ಭೀಮಸೇನ ಅವರು ಬಿಡುಗಡೆಗೊಳಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷರು, ಅಂಜನಾದ್ರಿ ಉತ್ಸವದಲ್ಲಿ ನಾನು ಬರೆದ ನಾಟಕದ ಪುಸ್ತಕ ಲೋಕಾರ್ಪಣೆಗೊಂಡಿದ್ದು ಸಂತೋಷವಾಗಿದೆ. ಪ್ರತಿ ವರ್ಷವೂ ಹೀಗೆ ಸಂಭ್ರಮ-ಸಡಗರದಿಂದ ಅಂಜನಾದ್ರಿ ಉತ್ಸವ ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಋಷಿಮಾದವಾನಂದ ಮಹಾರಾಜರು, ಡಾ.ಸಿದ್ದರಾಮೇಶ್ವರ ಶರಣರು ಸಿದ್ದಾಶ್ರಮ ರೌಡಕುಂದಾ ಶ್ರೀಗಳವರು
ಸಾನಿಧ್ಯವನ್ನ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಕಲಬುರ್ಗಿ, ಬೀದರ, ಯಾದಗಿರಿ, ಬಳ್ಳಾರಿ, ಹೊಸಪೇಟೆ, ಬೆಂಗಳೂರು, ತುಮಕೂರು, ಧಾರವಾಡ, ಹುಬ್ಬಳ್ಳಿ, ಗೋವಾ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಪ್ರರ್ದಶನ ನೀಡಿದವು.
ಉತ್ಸವದಲ್ಲಿ ವಿಜಾಪುರದ ಕಂಪೂಟರ್ ಕನ್ನಡತಿ ಭುವನೇಶ್ವರಿ ಮೇಲಿನಮಠ, ಮಂಗಳೂರಿನ ಪ್ರಗತಿಪರ ತಾರಸಿ ಕೃಷಿಕ ಕೃಷ್ಣಪ್ಪಗೌಡ ಪಡಂಬೈಲ್, ಡಿವೈಎಸ್‍ಪಿ ರುದ್ರಶ್ ಉಜ್ಜನಕೊಪ್ಪ, ಕಾಡ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಗಂಗಾವತಿ ಕೃಷಿ ವಿಜ್ಞಾನಿ ಬದರಿಪ್ರಸಾದ, ಸಮಾಜ ಸೇವಕ ಕೊಲ್ಲಿ ನಾಗೇಶ್ವರಾವ, ಬೆಂಗಳೂರಿನ ಶಿಕ್ಷಕ ಸುರೇಂದ್ರ ಸಮಾಗಾರ, ಹುಬ್ಬಳ್ಳಿ ಪತ್ರಕರ್ತರಾದ ರಾಮಚಂದ್ರ ಸುಣಗಾರ, ಬೆಂಗಳೂರಿನ ರಜನಿ ಪೈ, ಗಂಗಾವತಿಯ ರಾಮಮೂರ್ತಿ ನವಲಿ, ಎಂ.ಜೆ.ಶ್ರೀನಿವಾಸ, ನಾಗರಾಜ ಇಂಗಳಗಿ, ಆನೆಗುಂದಿಯ ಸುದರ್ಶನ ವರ್ಮ, ಹೋರಾಟಗಾರ ವಿಜಯ ಕವಲೂರು, ರಂಗಕರ್ಮಿಗಳಾದ ಹಾಲಯ್ಯ ಹುಡೇಜಾಲಿ, ಬಸವರಾಜ ಹೆಸರೂರು, ಸಮಾಜ ಸೇವಕರಾದ ಜಿ.ಎಸ್.ಗಿರೀಶ ಮತ್ತು ಜೆ.ಶ್ರೀಧರ, ಶಿಕ್ಷಣ ತಜ್ಞರಾದ ಶಿವರಾಜ ಗುರಿಕಾರ, ಜ್ಯೂ. ವಿಷ್ಣುವರ್ಧನ್‍ರಾದ ನಾರಾಯಣ ದೇಸಾಯಿ ಕಾರಟಗಿ, ಸಮಾಜ ಸೇವಕ ಅನಿಲ ಬೇಗಾರ, ಕೊಪ್ಪಳ ಪ್ರಾಧ್ಯಪಕರಾದ ಡಾ.ಭಾಗ್ಯಜ್ಯೋತಿ, ಬೆಂಗಳೂರಿನ ಮಾರುತಿ ಭಂಡಾರಿ, ಅಥಣಿಯ ಮಹಾದೇವ ಬಿರದಾರ ಅವರಿಗೆ ಅಂಜನಾದ್ರಿ ಸಬ್ಬಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಅಂಜನಾದ್ರಿ ಕವಿಗೋಷ್ಠಿಯನ್ನ ನಡೆಸಲಾಯಿತು. ಅಂಜನಾದ್ರಿ ಕುರಿತು ಉಪನ್ಯಾಸ ಬಸನಗೌಡ ಹೊಸಳ್ಳಿ ನೀಡಿದರು. ಕಾರ್ಯಕ್ರಮದಲ್ಲಿ ಗಂಗಾವತಿ ನಗರಸಭೆ ಸದಸ್ಯ ವಿಷ್ಣು ಜೋಶಿ, ಪತ್ರಕರ್ತರಾದ ಸಾದಿಕ್ ಅಲಿ, ಜೆಎಸ್ ಗೋನಾಳ, ಉಮೇಶ ಪೂಜಾರ, ಸಾಹಿತಿ ಮಹಾಂತೇಶ ಮಲ್ಲನಗೌಡರ್, ಎಂಬಿ ಅಳವಂಡಿ, ಮೈಲಾರಪ್ಪ ಉಂಕಿ, ಕಲಾವಿದ ಶರಣು ಕುಕುನಪಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದರು. ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ಸ್ವಾಗತಿಸಿ, ಸುನಿಲ ನಾಗೇಶನಹಳ್ಳಿ ನಿರೂಪಿಸಿ, ಸಂಸ್ಥೆಯ ಶಿವಕುಮಾರ ಹಿರೇಮಠ ವಂದಿಸಿದರು.