ಇತ್ತೀಚಿನ ಸುದ್ದಿ
ಕಾಫಿನಾಡು ಚಿಕ್ಕಮಗಳೂರಿಗೆ ಇಂದು ಮುಖ್ಯಮಂತ್ರಿ ಬೊಮ್ಮಾಯಿ: ಶೃಂಗೇರಿ, ಹರಿಹರಪುರ ಮಠಕ್ಕೆ ಭೇಟಿ
19/04/2022, 09:30
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡು ಎಂದೇ ಪ್ರಖ್ಯಾತವಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಲಿದ್ದಾರೆ.
ಸಿಎಂ ಆದ ಬಳಿಕ ಮೊದಲ ಬಾರಿ ಅವರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿಯವರು ಹರಿಹರಪುರ ಮಠಕ್ಕೆ ಭೇಟಿ ನೀಡಲಿರುವರು.
ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕದ ಕಾರ್ಯಕ್ರಮ ನಡೆಯುತ್ತಿದೆ.
ಬೆಳಗ್ಗೆ 9.50ಕ್ಕೆ ಶೃಂಗೇರಿಯ ಮೆಣಸೆ ಹೆಲಿಪ್ಯಾಡ್ ಗೆ ಬೊಮ್ಮಾಯಿ ಆಗಮಿಸುವರು.10 ಗಂಟೆಗೆ ಶೃಂಗೇರಿ ಶಾರದಾಂಬೆ ದರ್ಶನ ಮಾಡುವರು.11ಕ್ಕೆ ಹರಿಹರಪುರ ಮಠಕ್ಕೆ ಭೇಟಿ ನೀಡುವರು.12 ಗಂಟೆಗೆ ಶಿವಮೊಗ್ಗಕ್ಕೆ ನಿರ್ಗಮಿಸುವರು.