ಇತ್ತೀಚಿನ ಸುದ್ದಿ
ಮಠಗಳ ಅನುದಾನದಲ್ಲಿ ಪರ್ಸೆಂಟೇಜ್ ಆರೋಪ: ಮಠಾಧೀಶರು ದಾಖಲೆ ಕೊಟ್ಟರೆ ತನಿಖ: ಸಿಎಂ ಬೊಮ್ಮಾಯಿ
18/04/2022, 23:43
ಬೆಂಗಳೂರು(reporterkarnataka.com): ಬಾಳೆಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳ 30 ಪರ್ಸೆಂಟ್ ಕಮಿಷನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾವ ಮಠಾಧೀಶರು ಎಲ್ಲಿ, ಯಾರಿಗೆ ಎಷ್ಟು ಪರ್ಸೆಂಟ್ ಕೊಟ್ಟಿದ್ದಾರೆ ದಾಖಲೆ ನೀಡಲಿ ತನಿಖೆ ಮಾಡುತ್ತೇವೆ’ ಎಂದರು.
ದಿಂಗಾಲೇಶ್ವರ ಸ್ವಾಮೀಜಿಗಳ ಮಾತಿಗೆ ಬೆಲೆ ಕೊಡುತ್ತೇವೆ.ಯಾವ ಮಠಾಧೀಶರು ಯಾರಿಗೆ ಕೊಟ್ಟಿದ್ದಾರೆ ದಾಖಲೆ ನೀಡಲಿ. ಎಲ್ಲಿ, ಯಾರಿಗೆ ಎಷ್ಟು ಪರ್ಸೆಂಟ್ ಕೊಟ್ಟಿದ್ದಾರೆ ದಾಖಲೆ ಕೊಡಲಿ. ದಾಖಲೆ ನೀಡದರೆ ಈ ಕುರಿತು ಸಂಪೂರ್ಣ ತನಿಖೆ ಮಾಡ್ತೇವೆ. ಅದರ ಆಳಕ್ಕೆ ಹೋಗ್ತೇವೆ, ಸಂಪೂರ್ಣ ತನಿಖೆ ಮಾಡುತ್ತೇವೆ ಎಂದರು.
ಮಠಗಳಿಗೆ ಬರುವ ಅನುದಾನದಲ್ಲೂ 30% ಕಮಿಷನ್ ಕೊಟ್ಟರಷ್ಟೇ ಅನುದಾನ ಬಿಡುಗಡೆ ಮಾಡುತ್ತಾರೆ. ಇದು ಬಿಜೆಪಿ ಸರ್ಕಾರ ಮಾತ್ರವಲ್ಲ ಎಲ್ಲಾ ಸರ್ಕಾರದಲ್ಲೂ ಇದೇ ಪರಿಸ್ಥಿತಿ ಇದೆ. ಕಮಿಷನ್ ಕಟ್ ಮಾಡಿಯೇ ಕೊಡುತ್ತಾರೆ. ಮಠದ ಅನುದಾನದಲ್ಲೂ ಕಮಿಷನ್ ಕೇಳುತ್ತಾರೆ. ಅನುದಾನದಲ್ಲೂ ಪರ್ಸೆಂಟೇಜ್ ಕೊಡಬೇಕು. ಎನ್ ಓಸಿಗೂ ಕಮಿಷನ್ ಕೊಡಬೇಕು. ಭೂಮಿ ಪೂಜೆಗೂ ಕಮಿಷನ್ ಕೊಡಬೇಕು . ಇದರ ಜತೆಗೆ ಯಾಕೆ ಹಣ ಕೊಟ್ಟಿಲ್ಲ ಎಂದು ದೌರ್ಜನ್ಯ ಮಾಡುತ್ತಾರೆಂದು ಗಂಭೀರವಾಗಿ ಬಾಲೇ ಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಅರೋಪಿಸಿದ್ದಾರೆ.