ಇತ್ತೀಚಿನ ಸುದ್ದಿ
ಅವರು ಸಚಿನ್ ತೆಂಡುಲ್ಕರ್ ಜತೆ ಮಾತನಾಡಿರಬಹುದು: ರೀಟಾ ಹೇಳಿಕೆಗೆ ಸಚಿನ್ ಪೈಲಟ್ ಖಾರವಾಗಿ ಪ್ರತಿಕ್ರಿಯೆ
12/06/2021, 08:32
ಜೈಪುರ: ಅವರು ಸಚಿನ್ ತೆಂಡುಲ್ಕರ್ ಅವರೊಂದಿಗೆ ಮಾತನಾಡಿದ್ದಿರಬಹುದು. ನನ್ನೊಂದಿಗೆ ಮಾತನಾಡಲು ಅವರಿಗೆ ಧೈರ್ಯವಿಲ್ಲ” ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ಸಚಿನ್ ಪೈಲಟ್ ಅವರೊಂದಿಗೆ ಮಾತನಾಡಿದ್ದೇನೆ ಹಾಗೂ ಅವರು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತಾರೆ ಎಂಬ ಬಿಜೆಪಿ ಮುಖಂಡರಾದ ರೀಟಾ ಬಹುಗುಣ ಜೋಶಿ ಅವರ ಹೇಳಿಕೆಗೆ ಪೈಲಟ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಜಿತಿನ್ ಪ್ರಸಾದ್ ಅವರು ಬಿಜೆಪಿಗೆ ಪಕ್ಷಾಂತರವಾದ ನಂತರ ಸಚಿನ್ ಪೈಲಟ್ ಈಗ ಚರ್ಚೆಯಲ್ಲಿದ್ದಾರೆ. ಪಕ್ಷಾಂತರವಾಗುವ ಮುಂದಿನ ಸರದಿಯಲ್ಲಿ ತಾನಿದ್ದೇನೆ ಎಂಬ ಬಿಜೆಪಿ ಮುಖಂಡರ ಅಭಿಪ್ರಾಯವನ್ನು ಇಂದು ಸಚಿನ್ ಪೈಲಟ್ ಖಂಡಿಸಿದ್ದಾರೆ.