11:13 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

‘ವೀಸಾ’ ಮುಗಿದ ಬಳಿಕವೂ ಇನ್ನೂ ಭಾರತದಲ್ಲೇ  ಬರೋಬ್ಬರಿ ಇದ್ದಾರೆ 3,93,421 ಮಂದಿ.!

06/04/2022, 11:05

ಹೊಸದಿಲ್ಲಿ(reporterkarnataka.com): ವೀಸಾ ಅವಧಿ ಮುಕ್ತಾಯವಾದ ಬಳಿಕವೂ ಭಾರತದಲ್ಲಿ ವಾಸಿಸುತ್ತಿರುವರ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ  3,93,421  !

ಎಸ್, ಈ ಮಾಹಿತಿಯನ್ನು ಮಂಗಳವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ನೀಡಿದ್ದಾರೆ. 

ಆಘಾತಕಾರಿ ಅಂಶ ಎಂದರೆ, 2019ರಲ್ಲಿ ವೀಸಾ ಅವಧಿ ಮೀರಿದ ಬಳಿಕವೂ 25,143 ವಿದೇಶಿಗರು ಭಾರತದಿಂದ ತಮ್ಮ ದೇಶಗಳಿಗೆ ಹಿಂದಿರುಗಿಲ್ಲ.

2020ರಲ್ಲಿ ವೀಸಾ ಅವಧಿ ಕೊನೆಗೊಂಡ 40,239, 2021ರಲ್ಲಿ ವೀಸಾ ಅವ ಮುಗಿದ 54,576 ವಿದೇಶಿಗರು ಇನ್ನೂ ಭಾರತದಲ್ಲಿಯೇ ಇದ್ದಾರೆ. 2019ರಿಂದ ಡಿಸೆಂಬರ್ 31, 2021ರ ವರೆಗೆ ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿರುವ ವಿದೇಶಿಗರ ಸಂಖ್ಯೆ 3,93,421 ಎಂದು ಸಚಿವ ರೈ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.

ಅಕ್ರಮವಾಗಿ ನೆಲೆಸಿರುವವರ ಮೇಲೆ ವಿದೇಶೀಯರ ಕಾಯಿದೆ, 1946ರ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಪೈಕಿ ವಿದೇಶಿಯರ ಹೆಸರನ್ನು ದೇಶದಿಂದ ಗಡೀಪಾರು ಮಾಡುವುದನ್ನು ಖಾತ್ರಿಪಡಿಸಿದ ನಂತರ ಬ್ಲ್ಯಾಕ್ ಲಿಸ್ಟ್‌ನಲ್ಲಿ ಸೇರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು