10:52 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ದೇಶದಲ್ಲಿ ಈ ವರ್ಷ ಅಂತ್ಯದ ವೇಳೆಗೆ 5G ಸೇವೆ ಆರಂಭ: ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಮಾಹಿತಿ

25/03/2022, 23:45

ಹೊಸದಿಲ್ಲಿ(reporterkarnataka.com): ದೇಶದಲ್ಲಿ ಈ ವರ್ಷದ ಅಂತ್ಯದ ವೇಳೆ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ಶುಕ್ರವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಸಚಿವ ದೇವು ಸಿನ್ಹ ಚೌಹಾಣ್, 5G ಸೇವೆಗಾಗಿ ಸ್ಪೆಕ್ಟ್ರಮ್ ಹರಾಜು ಕೂಡ ಶೀಘ್ರದಲ್ಲೇ ನಡೆಯಲಿದೆ. ದೇಶದಲ್ಲಿ 5ಜಿ ತಂತ್ರಜ್ಞಾನ ಪ್ರಾರಂಭಕ್ಕಾಗಿ ನಾಲ್ಕು ಕಂಪನಿಗಳಿಗೆ ತರಂಗಾಂತರಗಳನ್ನು ರೂಪಿಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಪ್ರಯೋಗಗಳು ಪೂರ್ಣಗೊಂಡು, ದೇಶಾದ್ಯಂತ 5ಜಿ ಸೇವೆ ಜನರಿಗೆ ಸಿಗಲಿದೆ ಎಂದು ತಿಳಿಸಿದರು.

ಇನ್ನು ಬಿಎಸ್​ಎನ್​ಎಲ್​ ಕೂಡ ಈ ವರ್ಷ 4 ಜಿ ಸೇವೆಯನ್ನು ಆರಂಭಿಸಲಿದೆ. ಕಳೆದ 7 ವರ್ಷಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಮಹಾನ್​ ಕ್ರಾಂತಿಯಾಗಿದೆ. ಅಂತರ್ಜಾಲ ಬಳಕೆಯ ಮೇಲೆ ಸುಂಕಗಳು ಕಡಿಮೆ ಇದ್ದ ಕಾರಣ ಡೇಟಾ ಬಳಕೆಯು ಹೆಚ್ಚಿದೆ ಎಂದು ಅವರು ನೀಡಿದರು.

ದೇಶದಲ್ಲಿ ಮೊಬೈಲ್ ಬಳಕೆದಾರರ ಪ್ರಮಾಣ ಅಧಿಕವಾಗುತ್ತಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆ 2020 ರಲ್ಲಿದ್ದ 1157.75 ಮಿಲಿಯನ್‌ನಿಂದ 2021 ರ ವೇಳೆಗೆ ಅದು 1180.96 ಮಿಲಿಯನ್‌ಗೆ ಏರಿದೆ ಎಂದು ಮಾಹಿತಿ ನೀಡಿದರು,.

ಇತ್ತೀಚಿನ ಸುದ್ದಿ

ಜಾಹೀರಾತು