8:23 AM Monday26 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ಮಡಿಕೇರಿ: ಜೆಸಿಬಿ ತಂದು ಮನೆ ಒಡೆಯಲು ಮುಂದಾದ ನಗರಸಭೆ; ಮನೆ ಗ್ಯಾಸ್ ಆನ್ ಮಾಡಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಕುಟುಂಬ

22/03/2022, 09:50

ಮಡಿಕೇರಿ(reporterkarnataka.com): ಮಡಿಕೇರಿ‌ ನಗರದಲ್ಲಿ ಕಲಾವಿದನ ಕುಟುಂಬದಿಂದ ಆತ್ಮಹತ್ಯೆ ಹೈಡ್ರಾಮಾ‌ ನಡೆದಿದೆ. ಮನೆಯ ಗ್ಯಾಸ್ ಸಿಲಿಂಡರ್ ಆನ್ ಮಾಡಿ ಸಾಮೂಹಿಕ ಆತ್ಮಹತ್ಯೆ‌ ಮಾಡಿಕೊಳ್ಳುವುದಾಗಿ ಕುಟುಂಬ ಬೆದರಿಕೆ ಹಾಕಿದೆ.

ಚಿತ್ರ ಕಲಾವಿದ ಸಂದೀಪ್ ವಿರುದ್ಧ ಅಕ್ರಮ‌ ಮನೆ ನಿರ್ಮಾಣದ ಆರೋಪ ಇದ್ದು, ನಗರಸಭೆ ಜಾಗದಲ್ಲಿ ಅಕ್ರಮ‌ ಮನೆ ನಿರ್ಮಾಣ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಅಕ್ರಮ‌ ಸಕ್ರಮದ ಅಡಿಯಲ್ಲಿ ಮನೆ ಸಕ್ರಮಕ್ಕೆ ಅರ್ಜಿ ಹಾಕಿದ್ದು, ಸಂದೀಪ್ ಇಂದು ಫೇಸ್ ಬುಕ್ ನಲ್ಲಿ ವ್ಯಂಗ್ಯ ಚಿತ್ರ ಪ್ರಕಟಿಸಿದ್ದರು.

ಸಂದೀಪ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಸಭೆ ಆಯುಕ್ತ ರಾಮದಾಸ್ ಜೆಸಿಬಿ ತಂದು ಮನೆ ಒಡೆಯಲು ಮುಂದಾಗಿದ್ದರು.

ಮನೆ ಒಡೆಯಲು ಮುಂದಾದಾಗ ಸಂದೀಪ್ ಕುಟುಂಬ ಆತ್ಮಹತ್ಯೆ ಬೆದರಿಕೆ ಹಾಕಿದ್ದು, ಮನೆ ಗ್ಯಾಸ್ ಆನ್ ಮಾಡಿ ಬೆಂಕಿಪೆಟ್ಟಿಗೆ ಹಿಡಿದು ಬೆದರಿಕೆಯೊಡ್ಡಿದ್ದಾರೆ‌. ಮಡಿಕೇರಿ ನಗರದ ಚೈನ್‌ಗೇಟ್ ಬಳಿ‌ ಘಟನೆ‌ ನಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು