ಇತ್ತೀಚಿನ ಸುದ್ದಿ
ಮುಂದಿನ ವಾರ ‘ಅಸನಿ’ ಚಂಡಮಾರುತ ಅಪ್ಪಳಿಸುವ ಭೀತಿ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
17/03/2022, 18:28
ಹೊಸದಿಲ್ಲಿ(reporterkarnataka.com) : ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ ವಾರ ಅಸನಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಅಸನಿ ಚಂಡಮಾರುತ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕಡೆಗೆ ಚಲಿಸಲಿದೆ.
ಹಿಂದೂ ಸಾಗರದಲ್ಲಿ ಕಡಿಮೆ ಒತ್ತಡ ವಾತಾವರಣ ಪರಿಸ್ಥಿತಿ ರಚಿತಗೊಂಡಿದ್ದು, ಚಂಡ ಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಇದು ಅಂಡಮಾನ್-ನಿಕೋಬಾರ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಸನಿ ಚಂಡಮಾರುತ ಮಾರ್ಚ್ 21ರಂದು ತೀವ್ರಗೊಂಡು, ಮಾರ್ಚ್ 22ರವರೆಗೂ ಉತ್ತರ, ವಾಯುವ್ಯದತ್ತ ಚಲಿಸಲಿದೆ. ಚಂಡ ಮಾರುತ ಉತ್ತರ-ವಾಯುವ್ಯದ ಕಡೆಗೆ ಚಲಿಸಿ ಬಾಂಗ್ಲಾದೇಶದ ಸಮೀಪ ತಲುಪಲಿದೆ. ಮಾರ್ಚ್ 23ರಷ್ಟರಲ್ಲಿ ಉತ್ತರ ಮ್ಯಾನ್ಮಾರ್ ಕರಾವಳಿ ತಲುಪುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಬಂಗಾಳಕೊಲ್ಲಿಯ ದಕ್ಷಿಣ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.