7:42 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

110 ವರ್ಷಗಳ ಹಿಂದೆ ಮಂಗಳೂರು ರಥಬೀದಿಯ ವೆಂಕಟರಮಣ ದೇಗುಲದಲ್ಲಿ ಏನಿತ್ತು ವಿಶೇಷ?: ಬನ್ನಿ, ಆ ಹಳೆಯ ನೋಟಿಸ್ ಓದೋಣ !

09/06/2021, 15:48

ಮಂಗಳೂರು(reporterkarnataka news): ಇದು ಅಪರೂಪದಲ್ಲಿ ಅತೀ ಅಪರೂಪ, ವಿರಳದಲ್ಲಿ ಅತೀ ವಿರಳ ಎಂದೇ ಹೇಳಬಹುದು. ಶತಮಾನ ಹಿಂದಿನ, ಬ್ರಿಟಿಷ್ ಸಾಮ್ರಾಜ್ಯ ಕಾಲದ ನೋಟಿಸ್ ಇದು. ಹಾಗೆಂತ ಜನಪದ ಕಲೆಯಾದ ಯಕ್ಷಗಾನ, ಕಂಬಳದ ನೋಟಿಸ್ ಅಲ್ಲ. ಬದಲಿಗೆ ಮಂಗಳೂರಿನ ರಥಬೀದಿಯಲ್ಲಿರುವ ಐತಿಹಾಸಿಕ ಶ್ರೀ ವೆಂಕಟರಮಣ ದೇವಾಲಯಕ್ಕೆ ಸಂಬಂಧಿಸಿದ ನೋಟಿಸ್ (ಆಮಂತ್ರಣ ಪತ್ರಿಕೆ). ಬಹಳ ಶ್ರದ್ಧೆಯಿಂದಲೇ ಇದನ್ನು ಕಾಪಾಡಿಕೊಂಡು ಬರಲಾಗಿದೆ.

ಅದು ಬ್ರಿಟಿಷ್ ಸಾಮ್ರಾಜ್ಯದ ಕಾಲ. 5ನೇ ಜಾರ್ಜರ ಆಳ್ವಿಕೆಯ ಅವಧಿ. 1911ನೇ ಇಸವಿ. ಅಂದ್ರೆ ಸುಮಾರು 110 ವರ್ಷಗಳ ಹಿನ್ನೋಟವನ್ನು ಇದು ನಮ್ಮೆಲ್ಲರ ಮನ ತುಂಬಿಸುತ್ತದೆ, ಹೃದಯವನ್ನು ನವಿರಾಗಿ ತಟ್ಟುತ್ತದೆ.

ಬ್ರಿಟಿಷ್ ದೊರೆ 5ನೇ ಜಾರ್ಜ್ ಹಾಗೂ ಮಹಾರಾಣಿ ಮೇರಿ ಅವರ ಪಟ್ಟಾಭಿಷೇಕದ ಸಂಭ್ರಮವನ್ನು ಸಾಕ್ಷಾತ್ಕರಿಸುವ ಕಾಲವಾಗಿತ್ತು. ಇದರ ಅಂಗವಾಗಿ ರಥಬೀದಿ(ಅಂದಿನ ತೇರಬೀದಿ)ಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆಯ ವಿವರ ನೋಟಿಸ್ ಎಂಬ ಈ ಆಮಂತ್ರಣ ಪತ್ರಿಕೆಯಲ್ಲಿ ಲಭ್ಯವಿದೆ. 1911 ಡಿಸೆಂಬರ್ 12ನೇ ಮಂಗಳವಾರದಂದು ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಕುಂಕುಮಾರ್ಚನೆ ನಡೆದಿತ್ತು ಎನ್ನುವುದನ್ನು ಇದು ಸಾದರಪಡಿಸುತ್ತದೆ. ಅಂದು ದೇವಳದ ಮೊಕ್ತೇಸರರಾಗಿ ಸಾವಕಾರ ಪಾಂಡುರಂಗ ಪೈ, ಸಾವಕಾರ ರಂಗ ಪೈ ಹಾಗೂ ನಗರ ಗಣಪತಿ ರಾವ್ ಸೇವೆ ಸಲ್ಲಿಸಿದ್ದರು. ದೇಗುಲದ ಆಡಳಿತ ಮಂಡಳಿಯ ಸದಸ್ಯರಾಗಿ ಎಂ. ನಾಗಪ್ಪ ಭಂಡಾರಿ, ಬಿ. ನಾರಾಯಣಪ್ಪ ಹಾಗೂ ಎ. ಶ್ರೀನಿವಾಸ ರಾವ್ ಕಾರ್ಯನಿರ್ವಹಿಸಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು