ಇತ್ತೀಚಿನ ಸುದ್ದಿ
ಹಿಜಾಬ್ ತೀರ್ಪು: ಮಂಗಳೂರಿನ ಹಳೆ ಬಂದರು, ಧಕ್ಕೆ, ಉಳ್ಳಾಲ ಪ್ರದೇಶದಲ್ಲಿ ವ್ಯಾಪಾರಿಗಳಿಂದ ಬಂದ್ ಆಚರಣೆ
17/03/2022, 10:53
ಮಂಗಳೂರು(reporterkarnataka.com): ಹಿಜಾಬ್ ಕುರಿತು ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರತಿಭಟಿಸಿ ಇಂದು ಮಂಗಳೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಬಂದ್ ಮಾಡಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ಅಮೀರ್ ಎ ಶರೀಯತ್ ನ ಮೌಲಾನಾ ಸಗೀರ್ ಅಹ್ಮದ್ ರಾಜ್ಯ ಬಂದ್ ಗೆ ಕರೆ ನೀಡಿದ್ದರು.
ಮುಸ್ಲಿಂ ಸಮುದಾಯಕ್ಕೆ ಸೇರಿದ ಬಹುತೇಕ ಅಂಗಡಿ, ಮಳಿಗೆ, ವಾಣಿಜ್ಯ ಸಂಕೀರ್ಣ, ಹೋಟೆಲ್ ಬಂದ್ ನಲ್ಲಿ ಪಾಲ್ಗೊಂಡಿದ್ದವು.
ನಗರದ ಬಂದರು, ಧಕ್ಕೆ, ಕಂಡತಪಳ್ಳಿ ಪ್ರದೇಶದಲ್ಲಿ ಮುಸ್ಲಿಮರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರು. ಸ್ಟೇಟ್ ಬ್ಯಾಂಕ್, ಮಾರುಕಟ್ಟೆ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಕೆಲವು ಶಿಕ್ಷಣ ಸಂಸ್ಥೆಗಳು ಹಾಗೂ ಮದ್ರಸಾಗಳು ಬಂದ್ ನಲ್ಲಿ ಪಾಲ್ಗೊಂಡಿದ್ದವು. ನಗರದ ಹೊರವಲಯದ ಉಳ್ಳಾಲ, ತೊಕ್ಕೊಟ್ಟು ಪ್ರದೇಶದಲ್ಲಿಯೂ ಬಂದ್ ಆಚರಿಸಲಾಗಿದೆ.