9:55 PM Thursday1 - January 2026
ಬ್ರೇಕಿಂಗ್ ನ್ಯೂಸ್
6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಮಸ್ಕಿ ವೀರಶೈವ ಜಂಗಮ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ: ಅಯ್ಯಾಚಾರ ದೀಕ್ಷೆ 

16/03/2022, 16:36

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಪಟ್ಟಣದ ಶ್ರೀ ಗಚ್ಚಿನ ಹಿರೇಮಠದಲ್ಲಿ ಜರಗಿರುವ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಅದ್ದೂರಿಯಲ್ಲಿ ನಡೆಯಿತು.


ಶ್ರೀ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯರು ಅಮೃತ ಅವರ ನೇತೃತ್ವದಲ್ಲಿ ಬೆಳಗ್ಗೆ ಆದಿ ಜಗದ್ಗುರುಗಳು ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ ಮಾಡಲಾಯಿತು. ನಂತರ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು . ಶ್ರೀ ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ತನ್ಮೂಲಕ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಚಾಲನೆ ನೀಡಲಾಯಿತು. ಜಗದ್ಗುರುಗಳ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜಯ ಗೋಷಳೊಂದಿಗೆ ಚಾಲನೆ ನೀಡಲಾಯಿತು. ಹಳೆ ಬಸ್ಟ್ಯಾಂಡ್ ಅಶೋಕ್ ವೃತ್ತ ದೈವದ ಕಟ್ಟಿ ತೇರ್ ಬಜಾರ್ ಕನಕ ವೃತ್ತ ಬ್ರಮರಾಂಬ ಕಲ್ಯಾಣಮಂಟಪ. ಕಳಸ ಕನ್ನಡಿ ಒಂದಿಗೆ ಭಾವಚಿತ್ರ ಮೆರವಣಿಗೆ ಶ್ರೀ ಗಚ್ಚಿನ ಮಠ ತಲುಪಿತು. ಜಯಂತೋತ್ಸವ ಅಂಗವಾಗಿ ಮಹಿಳೆಯರ ಮಕ್ಕಳ ವಿವಿಧ ರೀತಿಯ ಛದ್ಮವೇಷ ಶ್ರೀ ರೇಣುಕಾಚಾರ್ಯರ ಹಾಗೂ ಪಂಚಪೀಠ ಹಾದಿಗಳ ವೇಷ ನೋಡುಗರನ್ನು ಆಕರ್ಷಣೆ ಕಂಡು ಬಂತು. ಶಿವದೀಕ್ಷೆ ಕಾರ್ಯಕ್ರಮ ಮಾಡಲಾಯಿತು. ಗಚ್ಚಿನ ಹಿರೇಮಠ ಸಾಯಂಕಾಲ ಜನಜಾಗೃತಿ ಧರ್ಮಸಭೆ. ದಿವ್ಯ ಸಾನಿಧ್ಯವನ್ನು ಷಟಸ್ಥಲ ಬ್ರಹ್ಮ ಡಾ.ನಾಗಭೂಷಣ ಶಿವಾಚಾರ್ಯರು ಮಹಾಸ್ವಾಮಿಗಳು, ಬೋಳೋಡಿ ಬಸವೇಶ್ವರ ಸಂಸ್ಥಾನ ಮಠ ಹೆಬ್ಬಾಳ, ಶ್ರೀ ಷಟಸ್ಥಲ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯರು ಮಹಾಸ್ವಾಮಿಗಳು,  ಗಚ್ಚಿನ ಹಿರೇಮಠ ಮಸ್ಕಿ .ಶ್ರೀ ಷಟಸ್ಥಲ ಬ್ರಹ್ಮ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ಮಹಾಂತ ಮಠ ಸಂತೆಕೆಲ್ಲೂರು, ಧರ್ಮೋಪದೇಶ ಕಾಲಜ್ಞಾನಿ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು, ತಳ್ಳಿ ಹಾಳ ಸಂಸ್ಥಾನ ಕೋಡಿಮಠ ಕಾಲಜ್ಞಾನ ಮಠ ಗಜೇಂದ್ರಗಡ ಮುಖ್ಯ ಅತಿಥಿಗಳಾಗಿ ಶಾಸಕ ಆರ್. ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಅಮರನಾಥ ರೆಡ್ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ, ಜಂಗಮ ಸಮಾಜದ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ, ಆದಯ್ಯ ಸ್ವಾಮಿ ಕರಿ ಬಸಯ್ಯಸ್ವಾಮಿ ಸಿಂಧನೂರು ಮಠ, ತಿಪ್ಪಯ್ಯ ಸ್ವಾಮಿ ಸಾಲಿಮಠ, ಯುವ ಘಟಕದ ಅಧ್ಯಕ್ಷ ಶಂಭುಲಿಂಗಯ್ಯ ಸ್ವಾಮಿ, ಕಂಬಾಳಿಮಠ ವೀರೇಶ್ ಪಾಟೀಲ್,  ಡಾ. ಪಂಚಾಕ್ಷರಯ್ಯ ಹಿರೇಮಠ, ಶಿವಕುಮಾರಸ್ವಾಮಿ ಕಡ ಮುಡಿ ಮಠ, ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ (ಸಂಪಾದಕರು),
ಗಣ ಮಠದಯ್ಯ ಸ್ವಾಮಿ ಸಾಲಿಮಠ, ನಾಗಯ್ಯ ಸ್ವಾಮಿ, ಉದ್ಬಾಳ ಶಿವಶಂಕರಯ್ಯ ಸ್ವಾಮಿ,ಶರಣಯ್ಯ ಸ್ವಾಮಿ, ದಿನ್ನಿ ಮಠ ಮಲ್ಲಿಕಾರ್ಜುನ್, ಬ್ಯಾಳಿ ಪುರಸಭೆ ಸದಸ್ಯ ಅಂದಾನಪ್ಪ ಗುಂಡಳ್ಳಿ, ಡಾಕ್ಟರ್ ಶಿವಶರಣಪ್ಪ ಪ್ರಕಾಶ್ ಮಸ್ಕಿ, ಗವಿಸಿದ್ದಪ್ಪ ಸಾಹುಕಾರ್ ಸಂತೆಕೆಲ್ಲೂರು ಮಲ್ಲಯ್ಯ, ಮಹೇಶ್ ಕೊಟ್ಟೂರು ಮಠ, ಶಿವ ಶರಣಯ್ಯಸ್ವಾಮಿ, ಸ್ವಾಮಿ ಶರಣಬಸವ ಸೊಪ್ಪಿಮಠ ಪುರಸಭೆ ಸದಸ್ಯರು ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್ ಶಾರದಾ ಸರಗಣಾಚಾರಿ, ಭುವನೇಶ್ವರಿ, ರಾಜೇಶ್ವರಿ ಹಿರೇಮಠ, ವಿದ್ಯಾಶ್ರೀ,ಶಿವಲೀಲಾ ಗಚ್ಚಿನಮಠ, ಅನ್ನಪೂರ್ಣ ಸರಗಣಾಚಾರಿ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು