3:15 PM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಮಂಗಳೂರು: ಯೋಗ ಕುರಿತು 30 ಗಂಟೆಯ ಸರ್ಟಿಫಿಕೇಟ್ ಕೋರ್ಸ್ ಸಮಾರೋಪ

14/03/2022, 00:01

ಮಂಗಳೂರು(reporterkarnataka.com): ಕೆನರಾ ಸಂಧ್ಯಾ ಕಾಲೇಜು ಹಾಗೂ ಶ್ರೀ ಪತಂಜಲಿ ಯೋಗ ಪ್ರತಿಷ್ಠಾನ ಮಂಗಳೂರು (ರಿ) ಇದರ ಜಂಟಿ ಆಶ್ರಯದಲ್ಲಿ 30 ಗಂಟೆಯ ಸರ್ಟಿಫಿಕೇಟ್ ಕೋರ್ಸ್ ನ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಖಜಾಂಜಿ ಸಿಎ ವಾಮನ್ ಕಾಮತ್ ಮಾತನಾಡಿ, ಯೋಗದಿಂದ ಆತ್ಮಶಕ್ತಿ, ಮನಸ್ಸಿಗೆ ನೆಮ್ಮದಿ ಗಳಿಸಲು ಸಾಧ್ಯ ಹಾಗೂ ಇದನ್ನು ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಳ್ಳಬೇಕು ಎಂದು ನುಡಿದರು.


ಯೋಗ ಸರ್ಟಿಫಿಕೇಟ್ ಕೋರ್ಸನ ಸಂಪನ್ಮೂಲ ವ್ಯಕ್ತಿ ಏಕನಾಥ್ ಬಾಳಿಗ ಮಾತನಾಡಿ, ಯೋಗಾಭ್ಯಾಸವು ನಮ್ಮ ಜೇವನದ ಅವಿಭಾಜ್ಯ ಅಂಗವಾಗಿರಬೇಕು, ನಿತ್ಯ ಯೋಗಾಭ್ಯಾಸದಿಂದ ಮಾನಸಿಕ ನೆಮ್ಮದಿ ಹಾಗೂ ಶಿಸ್ತುಬದ್ಧ ಜೀವನ ನಡೆಸಲು ಸಾಧ್ಯ ಎಂದರು. ಇಂತಹ ಸರ್ಟಿಫಿಕೇಟ್ ಕೋರ್ಸಿನಿಂದ ಮುಂದಕ್ಕೆ ಹಲವಾರು ಯೋಗಶಿಕ್ಷಕರು ಸಮಾಜಕ್ಕೆ ಸಿಗಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ,ಕೆನರಾ ಸಂಧ್ಯಾ ಕಾಲೇಜಿನ ಸಂಚಾಲಕರಾದ ಸಿಎ ಜಗನ್ನಾಥ ಕಾಮತ್ ವಹಿಸಿ, ಸರ್ಟಿಫಿಕೇಟ್ ಕೋರ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಜೀವನದಲ್ಲಿ ಉನ್ನತ ಸ್ಥಾನ ತಲುಪಲು ಸೂಕ್ತ ಮನೋಭಾವ ಅಗತ್ಯ,ಈ ನಿಟ್ಟಿನಲ್ಲಿ ಇಂತಹ ಸರ್ಟಿಫಿಕೇಟ್ ಕೋರ್ಸಗಳು ಅನುಕೂಲ ಎಂದರು.

ಸರ್ಟಿಫಿಕೇಟ್ ಕೋರ್ಸ್ ಸಂಯೋಜಕಿ, ಉಷಾ ನಾಯಕ್ ಕಾರ್ಯಕ್ರಮದ ಸಂಕ್ಷಿಪ್ತ ವರದಿ ಪ್ರಸ್ತುತ ಪಡಿಸಿದವರು.ಯೋಗ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಸಾಮಾಗ್ರಿಗಳನ್ನು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿಲಾ ಅತಿಥಿಗಳನ್ನು ಸ್ವಾಗತಿಸಿದರು.

ಕೆನರಾ ಕಾಲೇಜು ಪ್ರಾಂಶುಪಾಲೆ ಡಾ.ಪ್ರೇಮಲತಾ.ವಿ, ಆಂತರಿಕ ಗುಣಮಟ್ಟ ಸಂಯೋಜಕರಾದ ದೇಜಮ್ಮ, ಹಾರ್ದಿಕ್ ಚೌಹಾನ್, ಪತಂಜಲಿ ಯೋಗ ಪ್ರತಿಷ್ಠಾನದ ಟ್ರಷ್ಟಿ ಪ್ರತಿಭಾ ನಾಯಕ್, ಶಿಕ್ಷಕರಾದ ಪ್ರಭಾ ಎನ್.ವಿ, ಸಂಜನಾ ಮೂರ್ತಿ, ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಯೋಗಗುರು ಏಕನಾಥ್ ಬಾಳಿಗ ಇವರಿಗೆ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಸರ್ಟಿಫಿಕೇಟ್ ಕೋರ್ಸ್ ಸಂಯೋಜಕಿ ಉಷಾ ನಾಯಕ್ ವಂದನಾರ್ಪಣೆಗೈದರು. ಸೀಮಾ ಪ್ರಭು ಕಾರ್ಯಕ್ರಮ ನಿರೂಪಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು