8:33 PM Saturday20 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ನಾಯಿ ಮರಿಗೆ ಸ್ನಾನ ಮಾಡಿಸುವಾಗ ಸಂಪ್ ಗೆ ಬಿದ್ದು ಪುಟ್ಟ ಬಾಲಕಿ ಸಾವು:  ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ

28/02/2022, 18:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಈಗಷ್ಟೇ ಒಂದನೇ ತರಗತಿಗೆ ಶಾಲೆಗೆ ಸೇರಿಕೊಂಡಿದ್ದ ಪುಟ್ಟ ಕಂದಮ್ಮ ಅದು.! ಅಜ್ಜಿ ಮನೆಯಲ್ಲಿದ್ದ ಮುದ್ದು ಮುಖದ ಬಾಲಕಿ ಕಳೆದ ಎರಡು ವಾರದ ಹಿಂದೆಯಷ್ಟೇ ಮನೆಗೆ ಹೋಗಿತ್ತು. ಮನೆಯಲ್ಲೂ ಅಪ್ಪ-ಅಮ್ಮನಿಗೆ ತೋಟದ ಕೆಲಸ, ರಜೆ ಮಾಡಿದ್ರೆ ಬದುಕಿನ ಬಂಡಿ ಸಾಗುತ್ತಿರಲಿಲ್ಲ. ಹಾಗಾಗೀ ಇಬ್ಬರು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿದ್ರು. ಇದೇ ಆಕೆಯ ಸಾವಿಗೆ ನೆಪವಾಗಿಬಿಡ್ತು, ನಾಯಿ ಮರಿಯೊಂದನ್ನ ಸಂಪ್ ಬಳಿ ಸ್ನಾನ ಮಾಡಿಸಲು ಹೋಗಿ ತಾನೇ ಸಂಪಿಗೆ ಹಾರವಾಗಿದ್ದಾಳೆ.

ಎಷ್ಟು ನೋಡಿದ್ರೂ ನೋಡಬೇಕೆಂದೆನಿಸೋ ಮುದ್ದು ಮುಖ.! ಕಣ್ಣಲ್ಲಿ ಅದೇನೋ ಮಂದಹಾಸದ ನೋಟ.! ನೀರಲ್ಲಿ ತುಂಟಾಟವಾಡಿದ್ರೂ ಚೆಂದ, ಗಲ್ಲದ ಮೇಲೆ ಕೈ ಇಟ್ಕೊಂಡ್ರೂ ಅಂದ.! ಈ ಮಕ್ಕಳನ್ನ ಇದಕ್ಕೆ ಏನೋ ದೇವರಿಗೆ ಹೋಲಿಸಿರೋದು.! ಆದ್ರೆ ದೇವರಂತಹ ಈ ಪುಟ್ಟ ಕಂದಮ್ಮ ಇದೀಗ ಬದುಕಿಲ್ಲ ಅನ್ನೋದೇ ವಿಷಾದ.! ಹೌದು, ಹೀಗೆ ಎಲ್ಲರ ಜೊತೆಗೆ ನಗುನಗುತಾ, ಖುಷಿ ಖುಷಿಯಿಂದ ಇದ್ದು, ಇನ್ನೊಬ್ಬರ ಖುಷಿಗೂ ಕಾರಣವಾಗಿದ್ದ ಪ್ರಾರ್ಥನಾ ಕೊನೆಯುಸಿರೆಳೆದಿದ್ದಾಳೆ. 


ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಕಾಫಿ ಎಸ್ಟೇಟ್ನಲ್ಲಿದ್ದ ನೀರಿನ ಸಂಪ್, ಮುದ್ದು ಕಂದಮ್ಮನ ಜೀವವನ್ನ ತೆಗೆದಿದೆ. ತಂದೆ-ತಾಯಿ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಾಗ ಮನೆಯ ಪಕ್ಕದ ಮತ್ತೊಂದು ಮಗುವಿನೊಂದಿಗೆ ಆಟವಾಡಿಕೊಂಡಿದ್ದ ಪ್ರಾರ್ಥನಾ, ಸಂಪ್ ಬಳಿ ಚಿಕ್ಕ ನಾಯಿಮರಿಯೊಂದನ್ನ ಕರೆದುಕೊಂಡು ಹೋಗಿದ್ದಾಳೆ. ಆ ನಾಯಿ ಮರಿಗೆ ಸ್ನಾನ ಮಾಡಿಸಲು ಇಬ್ಬರು ರೆಡಿಯಾಗಿದ್ದಾಗ ಕಾಲು ಜಾರಿ ಸಂಪ್ಗೆ 7 ವರ್ಷದ ಪ್ರಾರ್ಥನಾ ಬಿದ್ದಿದ್ದಾಳೆ. ಸುಮಾರು 15 ಅಡಿ ಆಳವಿರುವ ಸಂಪ್ಗೆ ಬಿದ್ದಾಗ, ಪಕ್ಕದಲ್ಲಿದ್ದ ಮತ್ತೊಂದು ಪುಟ್ಟ ಹುಡುಗಿ ಏನೂ ಮಾಡಲಾಗದೇ ಮನೆಗೆ ಓಡಿ ಹೋಗಿದ್ದಾಳೆ. ಎಲ್ಲರೂ ಸಂಪ್ ಬಳಿ ಬರುವಷ್ಟರಲ್ಲಿ ಪುಟ್ಟ ಕಂದಮ್ಮನ ಜೀವ ಹಾರಿ ಹೋಗಿದೆ.

ಮನೋಹರ್ ಶೆಟ್ಟಿ ಎಂಬುವರಿಗೆ ಸೇರಿದ ಇಂದ್ರಾವತಿ ಎಸ್ಟೇಟ್ನಲ್ಲಿ ಘಟನೆ ನಡೆದಿದ್ದು, ಎಸ್ಟೇಟ್ ನವರ ಬೇಜವಾಬ್ದಾರಿತನದಿಂದ ಏನೂ ಅರಿಯದ ಜೀವ ಬಲಿಯಾಗಿದೆ. ಅಷ್ಟು ಆಳವಿದ್ರೂ ಸಂಪ್ ಕ್ಲೋಸ್ ಮಾಡದೇ ಹಾಗೇ ಓಪನ್ ಆಗಿ ಬಿಟ್ಟಿದ್ದು ಅಪಾಯಕ್ಕೆ ಆಹ್ವಾನ ಕೊಟ್ಟಿತ್ತು. ಹೆತ್ತ ಮಗಳನ್ನ ಕಳೆದುಕೊಂಡ ತಾಯಿಯ ರೋಧನೆ ಹೇಳತೀರದಾಗಿತ್ತು. ಮುದ್ದು ಕಂದಮ್ಮ ಇನ್ನಿಲ್ಲ ಅನ್ನೋ ಸುದ್ದಿ ತಿಳಿದು ನೂರಾರು ಜನರು, ಎಸ್ಟೇಟ್ನಲ್ಲಿರುವ ಲೈನ್ ಮನೆ ಬಳಿ ಬಂದು ಕಣ್ಣೀರು ಸುರಿಸಿದ್ರು..

ಗೀತಾ-ಶೇಷಪ್ಪ ದಂಪತಿಗೆ ಪ್ರಾರ್ಥನಾಳನ್ನ ಸೇರಿಸಿ ಒಟ್ಟು ಮೂವರು ಮಕ್ಕಳು. ಅದರಲ್ಲಿ ಇಬ್ಬರು ಗಂಡು ಮಕ್ಕಳು, ಅವರಿಬ್ಬರು ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಹೆಣ್ಣು ಮಗು ಬೇಕು ಅನ್ನೋ ಕಾರಣಕ್ಕಾಗಿ ಮೂರನೇ ಮಗುವಾಗಿ ಪ್ರಾರ್ಥನಾ ಈ ದಂಪತಿಯ ಜೀವನದಲ್ಲಿ ಬಂದಿದ್ದಳು. ಕಾಲೇಜು ವ್ಯಾಸಂಗ ಮಾಡುತ್ತಿದ್ದ ಅಣ್ಣಂದಿರಿಗೂ ಒಂದನೇ ಕ್ಲಾಸ್ ಒದ್ತಿದ್ದ ಪ್ರಾರ್ಥನಾ ಮೇಲೆ ಇನ್ನಿಲ್ಲದ ಪ್ರೀತಿ. ಹೆತ್ತವರಿಗೂ ಪ್ರಾರ್ಥನಾಳ ಅಂದ್ರೆ ಪಂಚಪ್ರಾಣ. ಎಲ್ಲರೂ ಪ್ರಾರ್ಥನಾಳನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ರು. ಆದ್ರೆ ಅದೇ ಜೀವ ಇದೀಗ ಎಲ್ಲರನ್ನೂ ಬಿಟ್ಟು ಹೋಗಿರೋದು ಇಡೀ ಕುಟುಂಬವನ್ನೇ ಕಣ್ಣೀರ ಕೋಡಿಯಲ್ಲಿ ಮುಳುಗಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು