8:59 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ವೈದ್ಯ ಶಿಕ್ಷಣಕ್ಕೆ ಭಾರತೀಯರೇಕೆ ಉಕ್ರೇನ್ ಆಶ್ರಯಿಸಿದ್ದಾರೆ? ಇದಕ್ಕೆ ಏನು ಕಾರಣ? 

27/02/2022, 22:14

ಹೊಸದಿಲ್ಲಿ(reporterkarnataka.com): ಉಕ್ರೇನ್ ನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿರುವುದೇ ರಷ್ಯಾ ಜತೆ ಯುದ್ಧ ಆರಂಭವಾದ ಬಳಿಕ. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳು 

ವಿಶೇಷವಾಗಿ ವೈದ್ಯಕೀಯ ಶಿಕ್ಷಣಕ್ಕೆ ಉಕ್ರೇನ್ ಆಯ್ಕೆ ಮಾಡುತ್ತಿದ್ದಾರೆ. ಹಾಗಾದರೆ ಇದಕ್ಕೆ ಕಾರಣಗಳೇನು? ಉಕ್ರೇನ್ ಭಾರತೀಯರ ಪಾಲಿಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಪ್ರಶಸ್ತ ಸ್ಥಳವಾಗಿರುವುದಾದರೂ ಹೇಗೆ? ನೋಡೋಣ ಬನ್ನಿ.

1. ಭಾರತದಲ್ಲಿ ಸರ್ಕಾರಿ ವೈದ್ಯ ಸೀಟು ಸಿಗದಿದ್ದವರಿಗೆ ಇಲ್ಲಿನ ಖಾಸಗಿ ಕಾಲೇಜುಗಳಿಗೆ ದುಬಾರಿ ಮೊತ್ತ ತೆರುವುದಕ್ಕಿಂತ ಉತ್ತಮ ಆಯ್ಕೆ ಉಕ್ರೇನ್. ವರದಿಗಳ ಪ್ರಕಾರ ವಾರ್ಷಿಕ ರುಪಾಯಿ 4 ಲಕ್ಷದ ಖರ್ಚಲ್ಲಿ ವೈದ್ಯ ಪದವಿ ಓದಬಹುದು. ಹಾಗೆಂದೇ ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹೊರದೇಶದವರ ಪೈಕಿ ಭಾರತದ ಪಾಲು ಶೇ. 22.

2. ಇಲ್ಲಿನ ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆಯೂ ಒಳ್ಳೆಯ ಮಾತುಗಳಿವೆ. ಇಲ್ಲಿನ ವೈದ್ಯ ವಿಶ್ವವಿದ್ಯಾಲಯಗಳು ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಣ ಗಳಿಸಿರುವುದರಿಂದ ಜಾಗತಿಕ ಅವಕಾಶಗಳು ಸುಲಭ.

3. ಇಲ್ಲಿ ಓದಿದವರು ಯುರೋಪಿನಲ್ಲಿ ವೃತ್ತಿ ಅವಕಾಶಗಳನ್ನು ಪಡೆಯುವುದಕ್ಕೂ ಹೆಚ್ಚು ಅನುಕೂಲವಾಗುತ್ತದೆ. ಏಕೆಂದರೆ ಉಕ್ರೇನ್ ವೈದ್ಯ ವಿದ್ಯಾಲಯಗಳ ಕೋರ್ಸುಗಳಿಗೆ ಯುರೋಪ್ ಮತ್ತು ಇಂಗ್ಲೆಂಡಿನ ಮೆಡಿಕಲ್ ಕೌನ್ಸಿಲ್ ಗಳು ಮಾನ್ಯತೆ ನೀಡಿವೆ.

4. ಹೆಚ್ಚಿನ ವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲ

5. ಯುರೋಪ್ ಎಂದಕೂಡಲೇ ಸಾಮಾನ್ಯವಾಗಿ ಇಂಗ್ಲೀಷೇತರ ಮಾಧ್ಯಮದಲ್ಲಿ ಕಲಿಕೆ ಇರುತ್ತದೆ. ಆದರೆ ಉಕ್ರೇನ್ ವೈದ್ಯ ವಿದ್ಯಾಲಯಗಳ ಕಲಿಕೆಯ ಮಾಧ್ಯಮ ಇಂಗ್ಲಿಷ್ ಆಗಿರುವುದು ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು