ಇತ್ತೀಚಿನ ಸುದ್ದಿ
ಬೀಳುತ್ತಿವೆ ವನ್ಯಜೀವಿಗಳ ಮೃತದೇಹಗಳು: ಕರಡಿ ಧಾಮ ದಾಖಲೆಗೆ ಮಾತ್ರ; ಅರಣ್ಯ ಇಲಾಖೆ ಜೀವಂತ ಹೆಣವಾಗುತ್ತಿದೆ!!
27/02/2022, 17:53
ವಿ.ಜಿ. ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಬೃಹತ್ ಅರಣ್ಯ ಸಂಪತ್ತನ್ನ ಹೊಂದಿದೆ. ಸಸ್ಯ ಹಾಗೂ ಜೀವ ವನ್ಯ ಸಂಪತ್ತು ಹೇರಳವಾಗಿದೆ. ಆದರೆ ಸಂಪತ್ತಿಗೆ ಸೂಕ್ತ ಸಂರಕ್ಷಣೆ ಮಾಡುತ್ತಿಲ್ಲ ಎಂಬ ಕೊರಗು ಪರಿಸರವಾದಿಗಳದ್ದಾಗಿದೆ.
ಸರ್ಕಾರ ಅರಣ್ಯ ಸಂಪತ್ತಿನ ಕಾವಲಿಗಾಗಿ ಅರಣ್ಯ ಇಲಾಖೆ ಇದೆಯಾದರೂ, ಕೆಲ ವರ್ಷಗಳಿಂದ ನಿರಂತರವಾಗಿ ವನ್ಯ ಸಂಪತ್ತಿನ ಹರಣವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ತಾಲೂಕಿನ ಅರಣ್ಯದ ಕೆಲವೆಡೆಗಳಲ್ಲಿ ಜರುಗುತ್ತಿರುವ, ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆಯಿಂದಾಗಿ ವನ್ಯಜೀವಿಗಳು ನಾಡಿನತ್ತ ನುಗ್ಗುತ್ತಿವೆ. ಕೆಲವೆಡೆಗಳಲ್ಲಿ ಅರಣ್ಯ ಹರಣವನ್ನು ಅರಣ್ಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ನೇತೃತ್ವದಲ್ಲಿ ಜರುಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಪ್ರಭಾವಿಗಳು ತಮ್ಮ ಪ್ರಭಾವ ಬಳಸಿ ಮರ ಗಿಡಗಳನ್ನು ಕಡಿಸಿ ಡಾಬಾ, ಇಟ್ಟಂಗಿ ಬಟ್ಟಿ, ಸಾಮಿಲ್ ಹಾಗೂ ಕಾರ್ಖಾನೆಗಳಿಗೆ ಮತ್ತು ವಾಣಿಜ್ಯೋದ್ಯಮಕ್ಕೆ ಸಾಗಿಸಲಾಗುತ್ತಿದೆ. ತಾಲೂಕಿನ ಹೊಸಹಳ್ಳಿ ಗುಡೇಕೋಟೆ ಕೂಡ್ಲಿಗಿ ಹೋಬಳಿಗಳಲ್ಲಿ, ವನ್ಯ ಪ್ರಾಣಿಗಳ ಹಾಗೂ ಜೀವಿಗಳನ್ನು ಭೇಟೆಯಾಡಿ ಮಾರಾಟ ಮಾಡುವ ಬೃಹತ್ ಉದ್ಯಮ ಜರುಗುತ್ತಿದೆ ಎಂಬ ದೂರು ಇದೆ. ಭೇಟೆಯಾಡಿದ ವನ್ಯ ಜೀವಿಗಳನ್ನು ಡಾಬಾ ರೆಸ್ಟೋರೆಂಟ್ ಗಳಿಗೆ,ಹಾಗೂ ಹೋಟೆಲ್ ಮತ್ತು ಪ್ರಭಾವಿಗಳ ಪಾರ್ಟಿಗಳಿಗೆ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಎರೆಡೇ ವರ್ಷಗಳಲ್ಲಿ ಐದಾರು ಕರಡಿಗಳು ಬಲಿಯಾಗಿವೆ. ಕೆಲ ವರ್ಷಗಳ ಹಿಂದೆ ಒಂದು ಚಿರತೆ ಸತ್ತಿತ್ತು. ಇತ್ತೀಚೆಗೆ ಸಿರಿಬಿ ಅರಣ್ಯದಲ್ಲಿ ಈಗೆರೆಡು ಸತ್ತಿವೆ ಎನ್ನಲಾಗುತ್ತಿದೆ. ವಿದ್ಯುತ್ ಶಾಕ್ ನಿಂದಾಗಿ ವನ್ಯ ಜೀವಿಗಳನ್ನ ಕೊಂದು ಚರ್ಮ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇವರು ಈಗಾಗಲೇ ಒಂದು ಕರಡಿ ಸಾಯಿಸಿದ್ದು ಅದದ ಕಳೇಬರ ಸಿಕ್ಕಿದ್ದು, ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆನ್ನ ಲಾಗಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಹೊಲಗಳಲ್ಲಿ ರಕ್ಷಣಾ ನೆಪದಲ್ಲಿ, ಬದುವಿನಲ್ಲಿ ವಿದ್ಯುತ್ ತಂತಿ ಹರಿಸಿ ವನ್ಯಪ್ರಾಣಿಹರಣ ಮಾಡಿ ಮಾಂಸ ಮಾರಾಟ ಹಾಗೂ ಚರ್ಮ ಮಾರಾಟ ದಂಧೆ ನಡೆಸಲಾಗುತ್ತಿದೆ ಎಂಬ ದೂರು ಇದೆ. ಇಂತಹ ಕೆಲ ತಂಡಗಳು ತಾಲೂಕಿನಲ್ಲಿ ಚಟುವಟಿಕೆಯಿಂದ ಇವೆ ಎಂದು ಗುಮಾನಿ ಇದೆ. ಅದನ್ನ ಸಾಬೀತು ಪಡಿಸುವಂತಹ ದುಷ್ಟಾಂತಗಳು ಜರುಗಿವೆ. ಬಣವಿಕಲ್ಲು ಹೊರವಲಯದಲ್ಲಿ ಕರಡಿ ದಾಳಿ, ಮೊಲದ ಬಲೆಗೆ ಬಿದ್ದ ಕರಡಿ, ಕೆಲ ಗ್ರಾಮಗಳಲ್ಲಿ ಜರುಗಿರುವ ನರಿ ದಾಳಿ,ಕರಡಿ ದಾಳಿ ಪ್ರಕರಣಗಳ ತನಿಖೆಯಾದರೆ. ಅರಣ್ಯ ಸಂಪತ್ತಿನ ಲೂಟಿ ದಂಧೆಯ ಹಿಂದಿರುವ, ಕರಾಳ ಕಟು ಸತ್ಯ ಬಯಲಾಗಲಿದೆ ಭ್ರಷ್ಟರ ಬಣ್ಣ ಹಾಗೂ ಅರಣ್ಯ ಇಲಾಖೆಯ ನಿಜವಾದ ಕಾಳಜಿ ಜಗ್ಗಜಾಹೀರಾಗುತ್ತದೆ ಎನ್ನುತ್ತಾರೆ ಪರಿಸರವಾದಿಗಳು.
ಕರಡಿ ಧಾಮ ದಾಖಲಲ್ಲಿ ಮಾತ್ರ: ತಾಲೂಕಿನಲ್ಲಿ ಕರಡಿ ಧಾಮವಿದೆಯಾದಯರೂ ಏನೂ ಪ್ರಯೋಜನವಾಗಿಲ್ಲ, ಬದಲಿಗೆ ಕರಡಿಗಳ ಹರಣ ಜರುತ್ತಿವೆ ಎನ್ನುತ್ತಾರೆ ಹೋರಾಟಗಾರರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದೆರೆಡು ವರ್ಷಗಳಲ್ಲಿ ಐದಾರು ಕರಡಿಗಳು ಸತ್ತಿವೆ. ಅದಕ್ಕೆ ನಿಖರ ತಿಳಿಯುತ್ತಿಲ್ಲ ಈ ಬಗ್ಗೆ ಅರಣ್ಯ ಇಲಾಖೆ ಮೌನಕ್ಕೆ ಶರಣಾಗಿದೆ.ಇದು ಹತ್ತು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ,ಕರಡಿ ದಾಮವಿದೆಯಾದರೂ ಏನೂ ಉಪಯೋಗವಾಗಿಲ್ಲ, ಕರಡಿ ಧಾಮದ ಬಗ್ಗೆ ಯಾವುದೆ ಮಾಹಿತಿಯನ್ನ ಪತ್ರಕರ್ತರಿಗೆ ಮಾಧ್ಯಮ ಮಾಹಿತಿ ನೀಡುತ್ತಿಲ್ಲ.
ಮಾಧ್ಯಮದಿಂದ ದೂರ..ದೂರ: ಕೂಡ್ಲಿಗಿ ತಾಲೂಕಿನ ಅರಣ್ಯ ಇಲಾಖಾಧಿಕಾರಿಗಳು, ಬಗ್ಗೆ ಅರಣ್ಯ ಇಲಾಖೆ ಚಟುವಟಿಕೆಗಳ ಬಗ್ಗೆ ನಿಖರ ಮಾಹಿತಿಯನ್ನ ಸಾರ್ವಜನಿಕ ವಲಯಕ್ಕೆ ನೀಡುತ್ತಿಲ್ಲ. ಪತ್ರಕರ್ತರು ಕೇಳುವ ಪ್ರೆಶ್ನೆಗೆ ಉತ್ತರಿಸದೇ ಮೇಲಾಧಿಕಾರಿಗಳನ್ನ ತೋರಿಸಿ ಜಾರಿಕೊಳ್ಳುತ್ತಿದ್ದಾರೆ. ಇದು ಅವರ ಭ್ರಷ್ಟಾಚಾರದ ನಡೆ ಹಾಗೂ ಕಾನೂನಿನ ಭಯ ಕಾರಣ ಎನ್ನಬಹುದಾಗಿದೆ. ಕರಡಿ ಧಾಮದ ನಿರ್ವಹಣೆಯಲ್ಲಿ ಭಾರೀ ಭ್ರಷ್ಟಾಚಾರ ಜರುಗುತ್ತಿದೆ. ಅದರ ಬಗ್ಗೆ ಉನ್ನತಾಧಿಕಾರಿಗಳು ಎಸಿಬಿಯಿಂದ ತನಿಖೆಯಾಗಬೇಕಿದೆ ಎಂಬ ಆರೋಪಗಳನ್ನು ಕೆಲ ಮುಖಂಡರು ಮಾಡಿದ್ದಾರೆ. ತಾಲೂಕಿನ ಹಲವೆಡೆಗಳಲ್ಲಿ ವನ್ಯ ಜೀವಿಗಳ ಭೇಟೆಯಾಡುವ ಜಾಲಗಳಿವೆ, ತಾಲೂಕಿನ ಕೆಲವೆಡೆಗಳಿಂದ ಮರ ಗಿಡಗಳನ್ನು ಕಡಿದು ಸಾಗಿಸಲಾಗುತ್ತಿದೆ. ಹಾಗಿದ್ದರೂ ಕೂಡ ಅರಣ್ಯ ಇಲಾಖೆ ಮಾಡುತ್ತಿರುವುದಾದರೂ ಏನು..!?, ಅರಣ್ಯ ಇಲಾಖೆ ಮಾಧ್ಯಮ ಪತ್ರಕರ್ತರಿಂದ ಮಾಹಿತಿ ಗೌಪ್ಯವಾಗಿರಿಸುವುದಾದರೂ ಏತಕ್ಕಾಗಿ.ಈ ವರೆಗೂ ಜರುಗಿರುವ ವನ್ಯ ಪ್ರಾಣಿಗಳ ಸಾವಿನ ಹಿಂದಿರುವ, ವನ್ಯ ಪ್ರಾಣಿ ದಾಳಿ ಪ್ರಕರಣಗಳ ಹಿಂದಿರುವ ಖಟು ಸತ್ಯವಿಚಾರಗಳನ್ನು ತೆರೆದಿಡಬೇಕಿದೆ. ಜಿಲ್ಲಾ ಅರಣ್ಯ ಇಲಾಖಾಧಿಕಾರಿಗಳು ನಿಜಕ್ಕೂ ಪ್ರಾಮಾಣಿಕರಾಗಿದ್ದಲ್ಲಿ , ಎಲ್ಲಾ ಪ್ರಕರಣಗಳ ಕುರಿತು ತನಿಖೆ ಮಾಡಿ ವರದಿ ಬಹಿರಂಗ ಗೊಳಿಸಬೇಕಿದೆ. ನವಿಲು, ಹಂದಿ, ಕೌಜಗಾ, ಪಾರಿವಾಳ, ಮೊಲ,ಉಡ ಸೇರಿಂದತೆ ವನ್ಯ ಪ್ರಾಣಿಗಳ ಹರಣ ನಿಲ್ಲಬೇಕಿದೆ. ಅರಣ್ಯ ಇಲಖೆಯಲ್ಲಿ ಜರುಗುವ ಹಾಗೂ ಸಂಬಂಧಿಸಿದ ಮಾಹಿತಿಗಳು, ಹಾಗೂ ಕರಡಿದಾಮದಲ್ಲಿ ಜರುಗುವ ಪ್ರತಿಯೊಂದು ಚಟುವಟಿಕೆಗಳು ಸಾರ್ವಜನಿಕ ವಲಯಕ್ಕೆ ಪ್ರಚುರ ಪಡಿಸುವಂತೆ ಕ್ರಮ ಜರುಗಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು