2:30 PM Saturday3 - January 2026
ಬ್ರೇಕಿಂಗ್ ನ್ಯೂಸ್
ಜಗತ್ತಿನ 3ನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಏರಿದ ಮಂಗಳೂರು ಮೂಲದ… Bangalore | ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಸಮ್ಮತಿ: 153 ಎಕರೆ… ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್… ಬಳ್ಳಾರಿ ಗಲಭೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಮಾಜಿ ಸಿಎಂ… ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ

ಇತ್ತೀಚಿನ ಸುದ್ದಿ

ಯುದ್ಧಪೀಡಿತ ಉಕ್ರೇನ್‌ನಿಂದ ಇಬ್ಬರು ದಾವಣಗೆರೆ ವಿದ್ಯಾರ್ಥಿಗಳು ಮನೆಗೆ ವಾಪಸ್:  ಇನ್ನು 3 ಮಂದಿ ತಾಯಿನಾಡಿನತ್ತ

27/02/2022, 14:12

ಸತ್ಯಪ್ರಕಾಶ್ ಜಾಧವ್ ದಾವಣಗೆರೆ

info.reporterkarnataka@gmail.com

ಉಕ್ರೇನ್- ರಷ್ಯಾ ಯುದ್ಧದ  ಹಿನ್ನೆಲೆಯಲ್ಲಿ ಅನಿಶ್ಚಿತತೆಯಲ್ಲಿ ಸಿಲುಕಿದ್ದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪಿದ್ದು, ಮನೆ ಮಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ನಡುವೆ ವಿಜಯಪುರ ಜಿಲ್ಲೆಯ 13 ವಿದ್ಯಾರ್ಥಿಗಳು ಇನ್ನೂ ಪೂರ್ವ ಯೂರೋಪಿಯನ್ ದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರು ಮೆಟ್ರೋದ ನೆಲ ಮಾಳಿಗೆಯಲ್ಲಿ ಸದ್ಯ ಆಶ್ರಯ ಪಡೆದಿದ್ದಾರೆ. ಅವರೆಲ್ಲ ಸುರಕ್ಷಿತವಾಗಿ ಮತ್ತೆ ತಾಯ್ನಾಡಉ ತಲುಪುವುದನ್ನು ಎದುರು ನೋಡುತ್ತಿದ್ದಾರೆ.

2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮನು ಡಿ.ಎಸ್. ಅವರು ಚೆನ್‌ವಿಸಿ ಎಂಬಲ್ಲಿನ ಬುಕೊವಿನಾ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದರು. ಜತೆಗೆ ಸುದೀಪ್ ಪಾಟೀಲ್ ಕೂಡಾ ದಾವಣಗೆರೆ ಜಿಲ್ಲೆಯವರಾಗಿದ್ದು, ಇಬ್ಬರೂ ಮನೆ ತಲುಪಿದ್ದಾರೆ. ಚೆರ್ನ್‌ವಿಸಿಯಿಂದ ಕೀವ್ ವರೆಗೆ ರೈಲಿನಲ್ಲಿ ಬಂದು ಬಳಿಕ ಭಾರತಕ್ಕೆ ವಾಪಸ್ಸಾಗಿದ್ದಾಗಿ ಅವರು ಹೇಳಿದ್ದಾರೆ.

ಉಕ್ರೇನ್ ರಾಜಧಾನಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದಾಗಿ ಅವರು ವಿವರಿಸಿದ್ದಾರೆ. “ನಮ್ಮ ವಿವಿ ಪೂರ್ವ ಉಕ್ರೇನ್‌ನಲ್ಲಿ ಇದ್ದ ಕಾರಣದಿಂದ ಯುದ್ಧ ಪ್ರದೇಶದಿಂದ ದೂರದ ಸ್ಥಳ. ಆದ್ದರಿಂದ ಸುರಕ್ಷಿತವಾಗಿ ಕೀವ್‌ಗೆ ತಲುಪಲು ಸಾಧ್ಯವಾಯಿತು” ಎಂದು ಮನು ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಇತರ ಮೂವರು ವಿದ್ಯಾರ್ಥಿಗಳಾದ ಸಯೀದಾ ಹಬೀಬಾ, ಹಬೀದ್ ಅಲಿ ಮತ್ತು ಪ್ರಿಯಾ ಭಾರತಕ್ಕೆ ಆಗಮಿಸುವ ಮಾರ್ಗಮಧ್ಯದಲ್ಲಿದ್ದಾರೆ ಎನ್ನಲಾಗಿದೆ. “ಕೀವ್ ವಿಮಾನ ನಿಲ್ದಾಣ ಮುಚ್ಚಿರುವುದರಿಂದ ಅವರು ಬಸ್ಸಿನಲ್ಲಿ ನೆರೆಯ ರೊಮಾನಿಯಾಗೆ ಆಗಮಿಸಿದ್ದಾರೆ. ರೊಮಾನಿಯಾದಿಂದ ಮುಂಬೈಗೆ ಬರುವ ವಿಮಾನದಲ್ಲಿ ಆಗಮಿಸುತ್ತಿರುವುದಾಗಿ ಮನು ಹೇಳಿದ್ದಾರೆ.

ವಿಜಾಪುರ ಜಿಲ್ಲೆಯ 13 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಇರುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದ್ದಾರೆ. ಈ ಪೈಕಿ ಸ್ನೇಹಾ ಪಾಟೀಲ್ ಎಂಬ ವಿದ್ಯಾರ್ಥಿನಿ ದೆಹಲಿಗೆ ಬಂದಿರುವುದಾಗಿ ವರದಿಯಾಗಿದೆ. ಉಕ್ರೇನ್‌ನಿಂದ ವಿಮಾನ ದರವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬರ ಪೋಷಕರು ದೂರಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಉಕ್ರೇನ್‌ನಲ್ಲೇ ಉಳಿಯುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು