ಇತ್ತೀಚಿನ ಸುದ್ದಿ
ಪ್ರತಿ ಹಳ್ಳಿಯಲ್ಲೂ ಆರೋಗ್ಯ ಮೂಲ ಸೌಕರ್ಯ ವೃದ್ಧಿಗೆ ಸರಕಾರದ ಗಮನ: ಪ್ರಧಾನಿ ಮೋದಿ ಘೋಷಣೆ
26/02/2022, 20:20
ಹೊಸದಿಲ್ಲಿ(reporterkarnataka.com): ಆಧುನಿಕ ಮತ್ತು ಭವಿಷ್ಯ ತಂತ್ರಜ್ಞಾನದದೊಂದಿಗೆ ಆರೋಗ್ಯದ ಜೊತೆ ಪ್ರತಿಯೊಬ್ಬರ ಕ್ಷೇಮದ ಬಗ್ಗೆ ನಾವು ಗಮನ ಹರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆಯೋಜಿಸಿರುವ ವೆಬಿನಾರ್‌ನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಮಾತನಾಡಿದ್ದಾರೆ.
ಬಜೆಟ್‌ನಲ್ಲಿ ಮೂರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆಧುನಿಕ ಮೂಲಸೌಕರ್ಯ, ಮಾನವ ಸಂಪನ್ಮೂಲ ವಿಸ್ತರಣೆ, ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಆಧುನಿಕ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೊಡ್ಡ ನಗರಗಳನ್ನು ಮೀರಿ ಆರೋಗ್ಯ ಮೂಲಸೌಕರ್ಯ ವೃದ್ಧಿಸುವ ಆಶಯ ಇದೆ. ಪ್ರತಿ ಹಳ್ಳಿ, ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ನಮ್ಮ ಉದ್ದೇಶ ಎಂದಿದ್ದಾರೆ.