1:48 PM Tuesday16 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ…

ಇತ್ತೀಚಿನ ಸುದ್ದಿ

ಎಲ್ ಐ ಸಿಯಲ್ಲಿ ಕೇಳೋರಿಲ್ಲದೇ ಬಿದ್ದಿದೆ 21 ಸಾವಿರ ಕೋಟಿ ರುಪಾಯಿ: ಕ್ಲೈಮ್ ಮಾಡದ  ಹಣ ಇದು!

17/02/2022, 12:33

ಹೊಸದಿಲ್ಲಿ(reporterkarnataka.com):ಎಲ್‌ಐಸಿಯಲ್ಲಿ ಕ್ಲೈಮ್ ಮಾಡದ ಸುಮಾರು 21,500 ಕೋಟಿಗೂ ಹೆಚ್ಚು ನಿಧಿ ಇದೆ.

ಹೌದು, ಮಾರುಕಟ್ಟೆ ನಿಯಂತ್ರಕ ಸೆಬಿಗೆ, ಐಪಿಒಗಾಗಿ ಸಲ್ಲಿಸಿದ ಕರಡಿನಲ್ಲಿ ಕಂಪನಿ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಎಲ್‌ಐಸಿ ಸೆಪ್ಟೆಂಬರ್ 2021 ವೇಳೆಗೆ 21,539  ಕೋಟಿ ರೂ.ಗಳಷ್ಟು ಕ್ಲೈಮ್ ಮಾಡದ ಹಣವನ್ನು ಹೊಂದಿದೆ.

ಇದರಲ್ಲಿ ಕ್ಲೈಮ್ ಮಾಡದ ಬಾಕಿ ಮೊತ್ತದ ಮೇಲೆ ಗಳಿಸಿದ ಬಡ್ಡಿ ಹಣ ಕೂಡ ಸೇರಿದೆ. ಭಾರತೀಯ ಜೀವ ವಿಮಾ ನಿಗಮ ಸಲ್ಲಿಸಿದ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ, ಕ್ಲೈಮ್ ಮಾಡದ ಮೊತ್ತವು ಮಾರ್ಚ್ 2021ರ ಅಂತ್ಯದ ವೇಳೆಗೆ 18,489 ಕೋಟಿಯಷ್ಟಿತ್ತು.

ಸೆಬಿಯ ನಿಯಮಗಳ ಪ್ರಕಾರ ಯಾವುದೇ ವಿಮಾ ಕಂಪನಿ ತನ್ನ ಜಾಲತಾಣದಲ್ಲಿ ಕ್ಲೈಮ್ ಮಾಡದ ಮೊತ್ತವನ್ನು ಪರಿಶೀಲಿಸಲು ಸೌಲಭ್ಯವನ್ನು ಒದಗಿಸಬೇಕಿದೆ. ಈ ಸೌಲಭ್ಯವನ್ನು ಎಲ್ ಐ ಸಿ ವೆಬ್ ಸೈಟ್ ನಲ್ಲಿ ಕಲ್ಪಿಸಲಾಗಿದ್ದು, ಪಾಲಿಸಿ ಹೊಂದಿರುವವರು ತಮಗೆ ಬರಬೇಕಾದ ಮೊತ್ತವಿದೆಯೇ ಎಂಬುದನ್ನು ಪರಿಶೀಲಿಸಿ ಅದನ್ನು ಕೋರುವುದಕ್ಕೆ ಅವಕಾಶವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು