5:50 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಲತಾ ದೀದಿ ಅಗಲಿಕೆಯ ನೋವು ಶಬ್ದಗಳಲ್ಲಿ ವಿವರಿಸಲಾಗದು: ದೀದಿ ಜತೆಗಿನ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ

06/02/2022, 21:12

ಹೊಸದಿಲ್ಲಿ(reporterkarnataka.com): ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಇಂದು ಕೊನೆಯುಸಿರೆಳೆದಿದ್ದು, ಲತಾ ದೀದಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಸರಣಿ ಟ್ವೀಟ್‌ ಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಈ ವೇಳೆ ಪ್ರಧಾನಿ ಮೋದಿ ತಾವು ಲತಾ ಮಂಗೇಶ್ಕರ್‌ ಜತೆಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಕಾಳಜಿ ಹಾಗೂ ದಯೆಯ ಪ್ರತಿರೂಪವೇ ಆಗಿದ್ದ ಲತಾ ದೀದಿ ಅವರನ್ನು ಕಳೆದುಕೊಂಡ ದುಃಖವನ್ನು ಶಬ್ದದದಲ್ಲಿ ವಿವರಿಸಲಾಗುವುದಿಲ್ಲ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರು ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿದ್ದರು. ತಮ್ಮ ಕಂಠದಿಂದ ಜನರನ್ನು ಮಂತ್ರಮುಗ್ದರನ್ನಾಗಿರುವ ಶಕ್ತಿ ಅವರಲ್ಲಿತ್ತು. ಮುಂದಿನ ಪೀಳಿಗೆಗೆ ಅವರು ಸದಾ ಪ್ರೇರಣೆಯಾಗಿರುತ್ತಾರೆ’ ಎಂದಿದ್ದಾರೆ.

‘ಲತಾ ದೀದಿಯವರ ಹಾಡುಗಳು ವಿವಿಧ ಭಾವನೆಗಳನ್ನು ಮೂಡಿಸುತ್ತವೆ. ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಆದ ಪರಿವರ್ತನೆಯನ್ನು ಲತಾ ಮಂಗೇಶ್ಕರ್​ ತುಂಬ ಹತ್ತಿರದಿಂದ ನೋಡಿದ್ದಾರೆ. ಸಿನಿಮಾ ಕ್ಷೇತ್ರ ಹೊರತುಪಡಿಸಿ ಲತಾ ಅವರು ಭಾರತದ ಅಭಿವೃದ್ಧಿಯ ಕುರಿತು ತುಡಿತ ಹೊಂದಿದ್ದರು. ಭಾರತವನ್ನು ಒಂದು ಬಲಿಷ್ಠ, ಅಭಿವೃದ್ಧಿ ದೇಶವನ್ನಾಗಿ ನೋಡುವುದು ಅವರ ಅತಿದೊಡ್ಡ ಬಯಕೆಯಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

‘ಲತಾ ದೀದಿಯಿಂದ ಹೆಚ್ಚು ಪ್ರೀತಿ ಪಡೆದಿದ್ದೇನೆ, ಅವರ ಪ್ರೀತಿಪಾತ್ರರಲ್ಲಿ ನಾನೂ ಒಬ್ಬ ಎಂದು ಹೇಳುವುದು ನನಗೆ ಹೆಮ್ಮೆ ಅನಿಸುತ್ತದೆ. ಅವರೊಂದಿಗೆ ನಾನು ಕಳೆದ ಕ್ಷಣಗಳು, ಆಡಿದ ಮಾತುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದ್ದೇನೆ’. ಲತಾ ದೀದಿಯನ್ನು ಕಳೆದುಕೊಂಡ ದೇಶದ ಜನತೆಗೆ ಕೂಡ ಪ್ರಧಾನಿ ಮೋದಿ ಸಾಂತ್ವಾನ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು