12:23 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಮೂತ್ರಜನಕಾಂಗದ ಸೋಂಕು: ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ?

05/02/2022, 11:22

ಮೂತ್ರ ಜನಕಾಂಗದ ಸೋಂಕು ಮಹಿಳೆಯರು ಮತ್ತು ಪುರುಷರನ್ನು ಕಾಡುವ ಸಾಮಾನ್ಯವಾದ ಸೊಂಕಾಗಿದೆ. ಆದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.
ಮೂತ್ರನಾಳ, ಮೂತ್ರಚೀಲ, ಅಥವಾ ಕಿಡ್ನಿ  ಹೀಗೆ ಬೇರೆ ಬೇರೆ ಭಾಗ ಸೊಂಕಿಗೆ ಒಳಗಾಗಬಹುದು.


ಕಾರಣಗಳು ಏನು?

ಇದು ಹೆಚ್ಚಾಗಿ ಬ್ಯಾಕ್ಟರಿಯ ಅಥವಾ ಫಂಗಸ್ನಿಂದಾಗಿ ಬರುವ ತೊಂದರೆಯಾಗಿದೆ. ಈ ಸೂಕ್ಷ್ಮಣು ಜೀವಿಗಳು ಮೂತ್ರ ನಳಿಕೆಯ ಮೂಲಕ ದೇಹವನ್ನು ಪ್ರವೇಶಿಸಿ ಸೋಂಕು ತಗಲುತ್ತದೆ.

ಮಧುಮೇಹ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇಂತಹ ಸೋಂಕು ಸುಲಭವಾಗಿ ತಗಲುತ್ತದೆ. ಕಿಡ್ನಿ ಸ್ಟೋನ್ 

ಪುರುಷರಲ್ಲಿ ದೊಡ್ಡದಾದ ಪ್ರೊಸ್ಟೆಟ್ ಗ್ರಂಥಿಯ ಸಮಸ್ಯೆಯಿಂದಾಗಿ ಉರಿಮೂತ್ರ ಉಂಟಾಗುತ್ತದೆ.

ಲಕ್ಷಣಗಳು ಏನು?

*ಸೊಂಟನೋವು

*ಮೇಲಿಂದ ಮೇಲೆ ಮೂತ್ರ ವಿಸರ್ಜನೆ

*ಮೂತ್ರ ವಿಸರ್ಜನೆ ಸಮಯದಲ್ಲಿ ನೋವು *ಉರಿಮೂತ್ರ

*ಮೂತ್ರದ ಬಣ್ಣ ಹಾಗೂ ವಾಸನೆಯಲ್ಲಿ ವ್ಯತ್ಯಾಸ *ಕಿಬ್ಬೊಟ್ಟೆ ನೋವು

*ಚಳಿ, ಜ್ವರ, ವಾಂತಿ

ಪತ್ತೆ ಹಚ್ಚುವ ವಿಧಾನಗಳು ಏನು?

ಯೂರಿನ್ ಅನಾಲಿಸಿಸ್ : ಇದರ ಮೂಲಕ ಸೊಂಕಿನ ತೀವ್ರತೆಯನ್ನು ಪತ್ತೆಹಚ್ಚಬಹುದು.

ಯೂರಿನ್ ಕಲ್ಚರ್ : ಇದರಿಂದ ಯಾವ ಸೂಕ್ಷ್ಮಣು ಜೀವಿಯಿಂದ ತೊಂದರೆ ಉಂಟಾಗಿದೆ ಎಂದು ತಿಳಿದುಕೊಳ್ಳಬಹುದು.

ಅಲ್ಟ್ರಾಸೌಂಡ್ : ಒಂದುವೇಳೆ  ಚಿಕಿತ್ಸೆ ನಂತರವೂ ಗುಣಮುಖವಾಗದೆ ಇದ್ದಲ್ಲಿ, ಇದರ ಮೂಲಕ ಮೂತ್ರ ನಾಳ ಅಥವಾ ಕೋಶದಲ್ಲಿಇರುವ ತೊಂದರೆಯನ್ನು ಪತ್ತೆ ಹಚ್ಚಬಹುದು.

ಸಿಸ್ಟೋಸ್ಕೋಪಿ: ಇದರ ಮೂಲಕ ಮೂತ್ರಕೋಶದ ಒಳಭಾಗವನ್ನು ವೀಕ್ಷಿಸಿ ಸೂಕ್ತ ಕಾರಣವನ್ನು ತಿಳಿದುಕೊಳ್ಳಬಹುದು.


ತಡೆಗಟ್ಟುವ ಕ್ರಮ ಹೇಗೆ?

*ಹೆಚ್ಚಿನ ಪ್ರಮಾಣದಲ್ಲಿ  ನೀರನ್ನು ಕುಡಿಯುವುದರಿಂದ ಬ್ಯಾಕ್ಟರಿಯ ಬೆಳೆಯದಂತೆ ತಡೆಯಬಹುದು.

*ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.

*ಮೂತ್ರವನ್ನು ತಡೆಹಿಡಿಯದೇ ಇರುವುದು

*ಮಧುಮೇಹ ನಿಯಂತ್ರಣ

* ಮಲಬದ್ಧತೆ ಆಗದಂತೆ ಎಚ್ಚರವಹಿಸುವುದು

*ವಿಟಮಿನ್ C ಜಾಸ್ತಿ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಮೂತ್ರದ ಸೋಂಕು ಬಾರದಂತೆ ತಡೆಗಟ್ಟಬಹುದು.

*ಮೂತ್ರಜನಕಾಂಗದ ಸೋಂಕು ಉಂಟಾದ ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸೋಂಕು ತೀವ್ರತೆಯನ್ನು ನಿಯಂತ್ರಿಸಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ

ಇತ್ತೀಚಿನ ಸುದ್ದಿ

ಜಾಹೀರಾತು