10:43 AM Tuesday11 - March 2025
ಬ್ರೇಕಿಂಗ್ ನ್ಯೂಸ್
APMC BILL | ಎಪಿಎಂಸಿ ನಿಯಂತ್ರಣಕ್ಕೆ ಇ-ಫ್ಲಾಟ್ಫಾರಂಗಳು ತಿದ್ದುಪಡಿ ವಿಧೇಯಕ: ವಿಧಾನಸಭೆ ಅನುಮೋದನೆ Power For Farmers | ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ… Education | ಶಿಕ್ಷಣ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳ ಭರ್ತಿಗೆ ಕ್ರಮ: ಸಚಿವ… Govt Hospital | ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಬೆಳಿಗ್ಗೆ 9ರಿಂದ ಸಂಜೆ… ತೀರ್ಥಹಳ್ಳಿ: ಮನೆಯಲ್ಲಿಯೇ ಯುವಕ ನೇಣಿಗೆ ಶರಣು ಕಲಾಪ ನಿರ್ವಹಿಸಿದ ಡಾ. ಮಂಜುನಾಥ ಭಂಡಾರಿ: ವಿಧಾನ ಪರಿಷತ್ ಸಭಾಪತಿ ಪೀಠದಲ್ಲಿ ಅಲಂಕಾರ Siddu Budget | ರಾಜ್ಯ ಬಜೆಟ್ 2025-26: ಮುಖ್ಯಾಂಶಗಳು ಇಲ್ಲಿದೆ ಓದಿ.. Tourism | ಕೊಡವ ಹೆರಿಟೇಜ್ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ: ಪ್ರವಾಸೋದ್ಯಮ ಸಚಿವ… Primary Education | ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ದಿಗೆ ಕಲಿಕಾ ದೀಪ, ಜ್ಞಾನ… BJP v/s Cong | ಉದ್ದೇಶಿತ ಕ್ಷೇತ್ರ ಮರು ವಿಂಗಡಣೆ ದಕ್ಷಿಣ ಭಾರತದ…

ಇತ್ತೀಚಿನ ಸುದ್ದಿ

ಕೇಂದ್ರ ಬಜೆಟ್ 2022 ಮುಖ್ಯಾಂಶಗಳು: ಯಾವುದು ಅಗ್ಗ? ಯಾವುದು ದುಬಾರಿ?

01/02/2022, 21:46

ಹೊಸದಿಲ್ಲಿ(reporterkarnataka.com): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರೀಯ ಬಜೆಟ್ ನಲ್ಲಿ ಯಾವುದು ಅಗ್ಗ ಯಾವುದು ತುಟ್ಟಿ ಯಾಗಿರಲಿದೆ ಇಲ್ಲಿ ನೋಡಿ

ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿದಂತೆ, ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ಫೋನ್ ಚಾರ್ಜರ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು ಅಗ್ಗವಾಗಲಿವೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಹಾಗೂ ರತ್ನದ ಕಲ್ಲುಗಳ ಮೇಲಿನ ಸೀಮಾ ಸುಂಕವನ್ನು ಶೇ 5ಕ್ಕೆ ಇಳಿಸಲಾಗಿದೆ. ಆ ನಂತರದಲ್ಲಿ 350ಕ್ಕೂ ಹೆಚ್ಚು ಸೀಮಾ ಸುಂಕ ವಿನಾಯಿತಿಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.

ಯಾವುದು ಅಗ್ಗ?

*ಬಟ್ಟೆ

*ಎಲೆಕ್ಟ್ರಾನಿಕ್ ವಸ್ತುಗಳು

*ಆಭರಣ ವಸ್ತುಗಳು

* ಕೈಗಡಿಯಾರಗಳು

*ಚರ್ಮದ ವಸ್ತುಗಳು

*ಕೃಷಿ ಉಪಕರಣಗಳು

*ರತ್ನದ ಕಲ್ಲುಗಳು ಮತ್ತು ವಜ್ರಗಳು

* ತದ್ರೂಪಿ ಅಥವಾ ಅನುಕರಣೆ ಆಭರಣ

*ಮೊಬೈಲ್ ಫೋನ್‌ಗಳು

*ಮೊಬೈಲ್ ಫೋನ್ ಚಾರ್ಜರ್‌ಗಳು

*ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳು

*ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು ಮೇಲಿನ ಕಸ್ಟಮ್ ಸುಂಕಗಳು

*ಸ್ಟೀಲ್ ಸ್ಕ್ರ್ಯಾಪ್

ಯಾವುದು ದುಬಾರಿ?

*ಎಲ್ಲ ಆಮದು ವಸ್ತುಗಳು

*ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ

*ಛತ್ರಿಗಳ ಮೇಲಿನ ಸುಂಕ ಹೆಚ್ಚಳ…

 ಬಜೆಟ್ ಭಾಷಣದ ಮುಖ್ಯಾಂಶಗಳು :

* ಲಸಿಕೆ ಹಾಕುವಲ್ಲಿನ ವೇಗವು ಆರ್ಥಿಕ ಚೇತರಿಕೆಗೆ ನೆರವಾಗಿದೆ.

* ದೇಶ ಈಗ ಓಮಿಕ್ರಾನ್ ಅಲೆಯ ನಡುವೆ ಇದೆ.

* 2021-22ರಲ್ಲಿ ಆರ್ಥಿಕತೆಯಲ್ಲಿ ಕ್ಷಿಪ್ರ ಹಿನ್ನಡೆ ಉಂಟಾಯಿತು. ಶೇ.9.2ರ ಬೆಳವಣಿಗೆ ನಿರೀಕ್ಷಿಸಲಾಗಿತ್ತು.

* ಸರ್ಕಾರವು 2014ರಿಂದ ಬಡ ಮತ್ತು ಅವಕಾಶವಂಚಿತ ಜನರಿಗೆ ಆದ್ಯತೆ ನೀಡಿದೆ. ಸರ್ಕಾರವು ಮಧ್ಯಮ ವರ್ಗಕ್ಕೆ ಅಗತ್ಯ ಪರಿಸರ ವ್ಯವಸ್ಥೆಯನ್ನು ಒದಗಿಸಲು ಶ್ರಮಿಸುತ್ತಿದೆ.

* ವಿದೇಶೀ ಬಂಡವಾಳ ಮತ್ತು ಖಾಸಗಿ ಬಂಡವಾಳ ಹೂಡಿಕೆಯಲ್ಲಿನ ಹೆಚ್ಚಳದಿಂದ ಹೂಡಿಕೆಯ ಪ್ರಮಾಣ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.

* ಏರ್ ಇಂಡಿಯಾದ ಮಾಲೀಕತ್ವದ ಕಾರ್ಯತಂತ್ರ ವರ್ಗಾವಣೆ ಪೂರ್ಣಗೊಂಡಿದೆ. ಎನ್‍ಐಎನ್‍ಎಲ್‍ನ ಕಾರ್ಯತಂತ್ರ ಖರೀದಿದಾರರನ್ನು ಆಯ್ಕೆ ಮಾಡಲಾಗಿದೆ.

* ಎನ್‍ಆರ್‍ಸಿಎಲ್ ತನ್ನ ಚಟುವಟಿಕೆಯನ್ನು ಆರಂಭಿಸಿದೆ.

* ಉತ್ಪಾದಕತೆ ಸಂಪರ್ಕಿತ ಯೋಜನೆಗಳು 14 ಕ್ಷೇತ್ರಗಳಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಸ್ವೀಕರಿಸುವ ಹೂಡಿಕೆ ಅಂದಾಜು 30 ಲಕ್ಷ ಕೊಟಿ ರೂ.ಗಳಷ್ಟು ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು