12:12 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ವಿಟಮಿನ್ ‘ಎ’ ಪ್ರಾಮುಖ್ಯತೆ: ಯಾವುದರಲೆಲ್ಲ ಇದು ಸಿಗುತ್ತದೆ?; ಕೊರತೆಯ ಲಕ್ಷಣಗಳೇನು ?

28/01/2022, 23:31

ಮೊಟ್ಟ ಮೊದಲು ಕಂಡುಹಿಡಿದ ವಿಟಮಿನ್ ಅಂದರೆ ವಿಟಮಿನ್ A. ಇದು ಕಣ್ಣಿನ ಆರೋಗ್ಯಕ್ಕೆ ಬೇಕಾದ ಅತೀ ಮುಖ್ಯವಾದ ಅಂಶವಾಗಿದೆ. ಇದು ಸಸ್ಯಾಹಾರ ಹಾಗು ಮಾಂಸಾಹಾರ ಎರಡೂ ಮೂಲಗಳಿಂದ ದೊರೆಯುತ್ತದೆ.

ಮೊಟ್ಟೆ, ಕೋಳಿ ಮಾಂಸ, ಲಿವರ್, ಹಾಲು, ತುಪ್ಪ ,ಬೆಣ್ಣೆ, ಕಾಳುಗಳು , ಹಸಿರು ತರಕಾರಿ, ಕ್ಯಾರಟ್, ಸಿಹಿಗುಂಬಳಕಾಯಿ, ಹಳದಿ ಬಣ್ಣದ ಹಣ್ಣು ಪಪ್ಪಾಯ, ಮಾವಿನಕಾಯಿ, ಫಿಶ್ ಲಿವರ್ ಆಯಿಲ್ ಇವುಗಳಲ್ಲಿ ಹೇರಳವಾಗಿ ವಿಟಮಿನ್ A ಕಂಡು ಬರುತ್ತದೆ.

ಬೇರೆ ಬೇರೆ ಕಾರಣಗಳಿಂದ ಇದರ ಅಂಶದ ಕೊರತೆ  ನಮ್ಮ ದೇಹದಲ್ಲಿ ಕಂಡುಬರುತ್ತದೆ.

* ಜೀರ್ಣನಾಂಗವ್ಯೂಹದಲ್ಲಿನ ತೊಂದರೆಯಿಂದಾಗಿ ನಾವು ಸೇವಿಸಿದ ವಿಟಮಿನ್ಅನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳದೇ ಇರುವುದರಿಂದ

* ಲಿವರ್ /ಪಿತ್ತಜನಕಾಂಗದ ಖಾಯಿಲೆ

* ಗರ್ಭಿಣಿಯರಲ್ಲಿ, ಬೆಳೆಯುವ ಮಕ್ಕಳಲ್ಲಿ ಅಧಿಕ  ಬೇಡಿಕೆ  ಇದ್ದಾಗ ಸರಿಯಾಗಿ ಆಹಾರದಲ್ಲಿ ಪೂರೈಕೆ ಆಗದೇ ಇರುವುದರಿಂದ ವಿಟಮಿನ್ A ಕೊರತೆ ಉಂಟಾಗುತ್ತದೆ.

ಲಕ್ಷಣಗಳು ಏನು?:

ಮೊತ್ತ ಮೊದಲಿಗೆ ಕಂಡು ಬರುವ ಲಕ್ಷಣ ಎಂದರೆ ಇರುಳುಗಣ್ಣು, ಮಂದ ಬೆಳಕಿನಲ್ಲಿ ಸರಿಯಾಗಿ ಕಾಣಿಸದೇ ಇರುವುದು, ಒಣ ಚರ್ಮ, ಮೂಳೆಗಳ ಸರಿಯಾದ ಬೆಳವಣಿಗೆ ಆಗದೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಸೋಂಕು  ಸುಲಭವಾಗಿ ತಗಲುವುದು , ನರಗಳ ಕಾರ್ಯಕ್ಷಮತೆ ತಗ್ಗುವುದು, ಕಣ್ಣಿನ ಬಿಳಿಭಾಗಕ್ಕೆ ಸಂಬಂಧಿಸಿದ ತೊಂದರೆ, ಕೆಲವೊಮ್ಮೆ ಶಾಶ್ವತವಾಗಿ ದೃಷ್ಟಿಹೀನರನ್ನಾಗಿ ಮಾಡಬಹುದು.

RDA ಪ್ರಕಾರ ಒಬ್ಬ ಆರೋಗ್ಯವಂತನಿಗೆ, ಮಗುವಿನಿಂದ ಹಿಡಿದು ವಯಸ್ಕರವರೆಗೆ ದಿನವೊಂದಕ್ಕೆ ಸುಮಾರು 350ರಿಂದ 950 ಮೈಕ್ರೋ ಗ್ರಾಂನಷ್ಟು ವಿಟಮಿನ್ A ಆಹಾರದ ಮೂಲಕ ಸೇವನೆ ಮಾಡುವುದದಿಂದ ಈ ಎಲ್ಲಾ ತೊಂದರೆಗಳು ಬಾರದಂತೆ ತಡೆಗಟ್ಟಬಹುದು. ಹಾಗೆಂದು ಅತಿಯಾದ ಸೇವನೆಯೂ ಸಹ ತೊಂದರೆಯನ್ನ ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣವನ್ನು ಸೇವನೆ ಮಾಡುವುದು ಒಳಿತು.

✍️ ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ

ಇತ್ತೀಚಿನ ಸುದ್ದಿ

ಜಾಹೀರಾತು