11:59 PM Monday18 - May 2026
ಬ್ರೇಕಿಂಗ್ ನ್ಯೂಸ್
ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು.

ಇತ್ತೀಚಿನ ಸುದ್ದಿ

ಅಪಘಾತ ರಹಿತ ಚಾಲನೆ: ಧರ್ಮಸ್ಥಳ ಡಿಪೋದ ಕೆಎಸ್ಸಾರ್ಟಿಸಿ ಬಸ್ ಚಾಲಕ ಉಮೇಶ್ ಭಂಡಾರಿಗೆ ಚಿನ್ನದ ಪದಕ

28/01/2022, 17:52

ಮಂಗಳೂರು(reporterkarnataka.com): ಸತತ ಎರಡು ದಶಕಗಳ ಕಾಲ ಅಪಘಾತ ರಹಿತವಾಗಿ ಕೆಎಸ್ಆರ್ ಟಿಸಿ ಬಸ್ ಚಾಲನೆ ಮಾಡಿದ ಸಾಧನೆಗಾಗಿ ಉಜಿರೆಯ ಎಸ್. ಉಮೇಶ್ ಭಂಡಾರಿ ಅವರಿಗೆ ಚಿನ್ನದ ಪದಕ ನೀಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಗೌರವಿಸಿದೆ.

ಜನವರಿ 26 ರ ಬುಧವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಜರಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಈ ಪ್ರಶಸ್ತಿಯನ್ನು ವಿತರಿಸಿದರು.

ಉಮೇಶ್ ಭಂಡಾರಿ ಅವರಿಗೆ 1999ನೇ ಇಸವಿಯಲ್ಲಿ ಸತತ 5 ವರ್ಷ ಅಪಘಾತ ರಹಿತ ಚಾಲನೆಗೆ ಬೆಳ್ಳಿ ಪದಕ ಲಭಿಸಿತ್ತು .

ಇದೀಗ ಸತತ 15 ವರ್ಷಗಳ ಅಪಘಾತ ರಹಿತ ಚಾಲನೆಗೆ ಮತ್ತೊಮ್ಮೆ ಚಿನ್ನದ ಪದಕ ಮತ್ತು ಪ್ರಶಸ್ತಿ ಲಭಿಸಿರುವುದು ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ,ನಿಷ್ಠೆಯನ್ನು ತಿಳಿಸುತ್ತದೆ .

ಈ ಪ್ರಶಸ್ತಿ ಲಭಿಸಿದ ಧರ್ಮಸ್ಥಳ ಡಿಪೋ ದ 4 ಚಾಲಕರಲ್ಲಿ ಹಾಗೂ ಪುತ್ತೂರು ಡಿವಿಷನ್ ನ 11 ಚಾಲಕರಲ್ಲಿ ಉಮೇಶ್ ಭಂಡಾರಿಯೂ ಒಬ್ಬರಾಗಿರುವುದು ವಿಶೇಷ .

ಕೊಪ್ಪದ ದಿವಂಗತ ಶೀನ ಭಂಡಾರಿ ಮತ್ತು ದಿವಂಗತ ರಮಣಿ ಭಂಡಾರಿ ಯವರ ಮೂರನೇ ಮಗನಾಗಿ ಜನಿಸಿದ ಉಮೇಶ್ ಭಂಡಾರಿ ಅವರನ್ನು 1987 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಾಲಕರಾಗಿ ನೇಮಿಸಿದೆ. ಉಮೇಶ್ ಭಂಡಾರಿಯವರು ಚಿಕ್ಕಮಗಳೂರು ಡಿಪೋ ದಲ್ಲಿ 2 ವರ್ಷ ಹಾಗೂ ಧರ್ಮಸ್ಥಳ ಡಿಪೋ ದಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.

ರಾತ್ರಿ ಹೊತ್ತಿನಲ್ಲಿ ತನ್ನ ಬಸ್ ನಲ್ಲಿ ಯಾರಾದರೂ ಅಶಕ್ತ , ಒಬ್ಬಂಟಿ ಮಹಿಳೆ, ಹೆಣ್ಣು ಮಕ್ಕಳಿದ್ದರೆ ಅವರ ಮನೆಯ ವರೆಗೆ ತಲುಪಿಸುವ ಜವಾಬ್ದಾರಿ ತೆಗೆದುಕೊಂಡು ಇಂತಹ ಹಲವಾರು ಉತ್ತಮ ಕೆಲಸಗಳನ್ನು ತಮ್ಮ ಸೇವಾವಧಿಯಲ್ಲಿ ಮಾಡಿಕೊಂಡು ಬಂದಿದ್ದಾರೆ.

ತನ್ನ ಕ್ಷೇತ್ರದಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿ ದುಡಿದಿಯುತ್ತಿದ್ದ ಉಮೇಶ್ ಭಂಡಾರಿ ಅವರ ಸೇವೆಯನ್ನು ಮನಗಂಡು ಕರ್ನಾಟಕ ಸರಕಾರ 1996 ರಲ್ಲಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು