7:39 PM Monday18 - May 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ…

ಇತ್ತೀಚಿನ ಸುದ್ದಿ

ಚಳ್ಳಕೆರೆ: ಶೂನ್ಯದ ಮಾರಮ್ಮ ದೇವರಿಗೆ ಅದ್ದೂರಿಯ ಎತ್ತಿನ ಗೂಡು ಕಾರ್ಯಕ್ರಮ

27/01/2022, 13:13

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿ ಬಳಿ ದೇವರ ಎತ್ತುಗಳನ್ನು ಮೆರೆಸುವ ಮೂಲಕ ಶ್ರೀ ಶೂನ್ಯದ ಮಾರಮ್ಮ ದೇವರ ಎತ್ತಿನ ಗೂಡು ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಬುಡಕಟ್ಟು ಮ್ಯಾಸನಾಯಕರ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಶೂನ್ಯ ಮಾರಮ್ಮ ದೇವರ ಎತ್ತಿನಗೂಡು ಕಾರ್ಯಕ್ರವು ಮಂಗಳವಾರ ತೋಡ್ಲರಹಟ್ಟಿ ಬಳಿ ದೇವರ ಪದಿಗಳನ್ನು ತಂಗಟೆ, ಪುವಲಿ, ಬಂದರಕಳ್ಳೆಗಳಿಂದ ದೇವರ ಪದಿಗಳ ನಿರ್ಮಾಣ ಮಾಡುವ ಮೂಲಕ ಆರಂಭವಾಗುತ್ತದೆ. ಅಂದು ಸಂಜೆ ನೂರಾರು ಭಕ್ತಾಧಿಗಳು ದೇವರ ಪದಿಗಳ ಬಳಿ ದೇವರ ಎತ್ತುಗಳ ಜೊತೆಯಲ್ಲಿ ವಾಸ್ತವ್ಯ ಮಾಡುತ್ತಾರೆ. ಭಕ್ತಾಧಿಗಳು ತಂದಂತ ರೊಟ್ಟಿಯನ್ನು ಎತ್ತುಗಳಿಗೆ ನೀಡಿ ಭಕ್ತಿಯನ್ನು ಸಮರ್ಪಣೆ ಮಾಡುತ್ತಾರೆ.

ಇನ್ನು ಮಂಗಳಾವರ ರಾತ್ರಿ ಶೂನ್ಯದ ಮಾರಮ್ಮ ದೇವಿಯನ್ನು ಕಿಲಾರಿಗಳು ಕಟ್ಟಿದ ಹುಲ್ಲಿನ ಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.

 ಇನ್ನು ಬುಧವಾರ ಬೆಳಿಗ್ಗೆಯಿಂದ ಶೂನ್ಯದ ಮಾರಮ್ಮ ದೇವಿ ಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಮಾರಮ್ಮ ಮೂರ್ತಿಗೆ ಭಕ್ತಾಧಿಗಳು ಹೂ ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸಲಾಯಿತು.

ನಂತರ ಸೂರ್ಯನು ಸ್ವಲ್ಪ ಇಳಿಮುಖವಾದಗ ಮೇಯಲು ಹೋದ ದೇವರ ಎತ್ತುಗಳನ್ನು ಹೊಡೆದಂದು ದೇವರ ಪದಿಗಳ ಮುಂದೆ ಅಯಾ ಬೆಡಿಗಿನವರು ಎತ್ತುಗಳನ್ನು ಪ್ರತ್ಯೇಕ ಮಾಡಿಕೊಂಡು ಮೂರು ಬಾರಿ ಮರೆಸಿ, ಆಯಾ ದೇವರ ಪದಿಗಗಳ ಹಮುಂದೆ ಭಕ್ತಾಧಿಗಳ ತಮ್ಮ ಮನೆಯ ದೇವರ ಎತ್ತುಗಳಿಗೆ ಮಂಡಕ್ಕಿ ತೂರಿ ಹಾರಕುತ್ತಾರೆ.

ಎತ್ತುಗಳಿಗೆ, ತದನಂತರ ಕಿಲಾರಿಗಳು ತಮ್ಮ ಪದಿಗಳ ಮುಂದೆ ಕರಿ ಕಂಬಳಿ ಹಾಕಿದಾಗ ಭಕ್ತಾದಿಗಳು ಹೂವು, ಹಣ್ಣು, ಕಾಯಿ ಕಾಸು ಇಟ್ಟು ಪೂಜೆ ಸಲ್ಲಿಸುತ್ತಾರೆ.

ದೇವರ ಎತ್ತುಗಳ ಗೂಡಿನ ಸನ್ನಿಧಿಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾರೆ. ಇತ್ತೀಚೆಗೆ ನಮ್ಮ ಮ್ಯಾಸ ಬೇಡರ ಸಂಪ್ರದಾಯ ನಶಿಸಿ ಹೋಗ್ತಿದೆ. ಅಂತದ್ರಲ್ಲಿ ನಮ್ಮ ಸಮುದಾಯದವರು ಕೆಲವು ಕಡೆ ಈ ರೀತಿಯ ಹಬ್ಬ ಆಚರಣೆಗಳನ್ನು ಮಾಡೋದ್ರಿಂದ ನಮ್ಮ ಮ್ಯಾಸ ನಾಯಕರ ಸಂಪ್ರದಾಯ ಉಳಿಯಲಿದೆ.

ವಿಶೇಷ ಪೂಜೆನಂತರ ದಾಸಯ್ಯರಿಂದ ಮಣೇವು ಕಾರ್ಯಕ್ರಮ ಜರುಗುತ್ತದೆ, ನಂತರ ಶೂನ್ಯದ ಮಾರಮ್ಮ ದೇವಿಯ ಮೂರ್ತಿಯನ್ನು ಸೂರ್ಯ ಉದಯಿಸುವ ಕಡೆ ಸಾಗಿಹಾಕಿದ ನಂತರ ಅನ್ನದಾಸೋಹ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

.

ಇತ್ತೀಚಿನ ಸುದ್ದಿ

ಜಾಹೀರಾತು