5:20 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚಳ್ಳಕೆರೆ: ಪದೇ ಪದೇ ಬಣವೆಗಳಿಗೆ ಬೆಂಕಿ: ಗಾಡಿ ಗಾಡಿ ಶೇಂಗಾ ಬೆಂಕಿಗಾಹುತಿ; ಆತಂಕದಲ್ಲಿ ರೈತರು

25/01/2022, 08:58

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಪದೇ ಪದೇ ಬಣವಗಳಿಗೆ ಬೆಂಕಿ ಬೀಳುವುದರಿಂದ ರೈತರಲ್ಲಿ ಆತಂಕದ ಮನೆ ಮಾಡಿದೆ.

ಚಳ್ಳಕೆರೆ ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಮೂರು ರೈತರ ಬಣವೆಗಳಿಗೆ ಬೆಂಕಿ ಬಿದ್ದು ಭಸ್ಮವಾಗಿರುವುರಿಂದ ರೈತರಲ್ಲಿ ಆಂತಕ ಮೂಡಿದೆ. ಜ. 14 ರಂದು ರಾಜಪ್ಪನಿಗೆ ಸೇರಿದ 6 ಗಾಡಿ ಶೇಂಗಾ ಬಳ್ಳಿ ಬಣವೆಗೆ ಬೆಂಕಿ ಬಿದ್ದು ಸುಮಾರು 20 ಸಾವಿರ ನಷ್ಟವಾಗಿದೆ. ಜ. 15 ರಂದು ರಾಜಣ್ಣ ಇವರಿಗೆ ಸೇರಿದ 4 ಗಾಡಿ ಶೇಂಗಾ ಬಳ್ಳಿಗೆ ಬೆಂಕಿ ಬಿದ್ದುಸುಮಾರು 15 ಸಾವಿರ ರೂ ನಷ್ಟವಾಗಿದೆ. ಜ. 24 ರಂದು ಚನ್ನಬಸಪ್ಪ ಇವರಿಗೆ ಸೇರಿದ 11 ಎಕರೆಯಲ್ಲಿ ಬೆಳೆದ 8 ಟ್ರಾಕ್ಟ್ರರ್ ಶೇಂಗಾ ಬಳ್ಳಿಗೆ ಬೆಂಕಿ ಬಿದ್ದು ಸುಮಾರು 60 ಸಾವಿರು ರೂ ನಷ್ಟವಾಗಿದ್ದು ಒಂದೇ ತಿಂಗಳಲ್ಲಿ ಮೂರು ಜನರ ರೈತರ ಬಣವೆಗಳಿಗೆ ಬೆಂಕಿ ಬಿದ್ದು ಬಸ್ಮವಾಗಿದ್ದು ಜಾನುವಾರಿಗೆ ಮೇವಿನ ಕೊರತೆ ಎದುರಾಗಿದ್ದು ಇವುಗಳ ಪಾಲನೆ ಮಾಡುವುದು ಹೇಗೆ ಎಂಬ ಚಿಂತೆ ಒಂದು ಕಡೆಯಾಗಿದ್ದ ಗ್ರಾಮದಲ್ಲೂ ಸಹ ಬೆಂಕಿ ಅವಗಡಗಳಿಂದ ಆತಂಕ ಉಂಟಾಗಿದ್ದು ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಹುಲ್ಲಿನ ಬಣವಗಳಿಗೆ ಬೆಂಕಿ ಹಚ್ಚುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಮೂರು ಪ್ರಕರಣಗಳನ್ನು ಅಗ್ನಿಶಾಮ ದಳದವರು ಬೆಂಕಿ ನಂದಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಇತ್ತೀಚಿನ ಸುದ್ದಿ

ಜಾಹೀರಾತು