1:39 PM Friday3 - May 2024
ಬ್ರೇಕಿಂಗ್ ನ್ಯೂಸ್
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:…

ಇತ್ತೀಚಿನ ಸುದ್ದಿ

ಚಳ್ಳಕೆರೆ: ನಕಲಿ ವೈದ್ಯರ ಹಾವಳಿ; ನಾಯಿಕೊಡೆ ತರಹ ತಲೆ ಎತ್ತುತ್ತಿರುವ ಖಾಸಗಿ ಕ್ಲಿನಿಕ್ ಗಳು

23/01/2022, 19:45

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನಲ್ಲಿ ಸರಕಾರಿ ವೈದ್ಯರ ಕೊರತೆ ಹೆಚ್ಚುತ್ತಲೇ ಇದ್ದು, ಇನ್ನೊಂದು ಕಡೆ ನಕಲಿ ವೈದ್ಯರ ಸಂಖ್ಯೆ ಕೂಡ ಕಡಿಮೆಯಾಗುತ್ತಿಲ್ಲ. ತಾಲೂಕಿನಲ್ಲಿ ಅಸಲಿ ವೈದ್ಯರು ಯಾರು ನಕಲಿ ಯಾರು ಎನ್ನುವ ಮಾಹಿತಿ  ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆಗೆ ಇದ್ದರೂ ಸಹ ನಕಲಿ ವೈದ್ಯರಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.

ನಗರ  ಹಾಗೂ ಗ್ರಾಮೀಣ ಭಾಗಗಳಲ್ಲಿ ಖಾಸಗಿಯಾಗಿ ಕ್ಲಿನಿಕ್ ನಡೆಸುವ ಎಲ್ಲ ವೈದ್ಯರು ತಾಲೂಕು ಆರೋಗ್ಯಾಧಿಗಳ ಕಚೇರಿಯಲ್ಲಿ ಸಂಬಂದಪಟ್ಟ ದಾಖಲೆಗಳೊಂದಿಗೆ ನೊಂದಾಯಿಸಿ ಕೊಳ್ಳಬೇಕು. ಇಲ್ಲವಾದಲ್ಲಿ ಅವರು ನಕಲಿ ವೈದ್ಯರೆಂದು ಪರಿಗಣಿಸಿ ಕಾನೂನು  ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ಜಾರಿ ಮಾಡಿದರೂ ಸಹ ಆರೋಗ್ಯ ಇಲಾಖೆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ರಾಜಾರೋಷವಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 62 ನಕಲಿ ವೈದ್ಯರು ಸೇವೆ ಸಲ್ಲಿಸುತ್ತಿರುವ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಕೆಲವು ವೈದ್ಯರು ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಾಯಿ ಕೊಡೆಗಳಂತೆ ಹಬ್ಬಿದ ಕ್ಲಿನಿಕ್‍ಗಳು: ತಾಲೂಕಿನಲ್ಲಿ ಸರಕಾರಿ ವೈದ್ಯರ ಹುದ್ದೆ ಹಲವು ವರ್ಷಗಳಿಂದ ಖಾಲಿಯಾಗಿದ್ದು,ಖಾಸಗಿ ಕ್ಲಿನಿಕ್‍ಗಳು ಹೆಚ್ಚುತ್ತಿವೆ. ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಲು ಹಿಂಜರಿಯುತ್ತಿರುವ ವೈದ್ಯರು ತಾವೆ ಖಾಸಗಿ ಕ್ಲಿನಿಕ್‍ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ದಮ್ಮಯ್ಯ ಎಂದರೂ ಸರಕಾರಿ ಆಸ್ಪತ್ರೆಗೆ ಎಂ.ಬಿ.ಬಿಎಸ್ ಪದವಿ ಪಡೆದವರು ಬರುತ್ತಿಲ್ಲ. ಇತ್ತೀಚಿನ  ದಿನಗಳಲ್ಲಿ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ವೈದ್ಯರನ್ನೇ ಜನರು ಹೊಣೆ ಮಾಡುತ್ತಿರುವುದು ಮತ್ತು ಹಲ್ಲೆಯಂತಹ ಘಟನೆ ನಡೆಯುವುದು ಸಹ ವೈದ್ಯರಿಗೆ ಸರಕಾರಿ ಸೇವೆ ಹಿಡಿಸದೇ ಇರಲು ಕಾರಣವೆಂದು ಹೇಳಲಾಗುತ್ತಿದೆ.

ಮೊತ್ತೊಂದೆಡೆ ಸರಕಾರಿ ವೈದ್ಯರೇ ತಮ್ಮ ಕರ್ತವ್ಯ ಮುಗಿಸಿದ ಮೇಲೆ ಖಾಸಗಿಯಾಗಿ ಕ್ಲಿನಿಕ್‍ಗಳನ್ನು  ನಡೆಸುತ್ತಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆಗಳು ಸೊರಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಖಾಸಗೀ ಕ್ಲಿನಿಕ್‍ಗಳ ಸಂಖ್ಯೆ ಕೂಡ ನಾಯಿ ಕೊಡೆಗಳಂತೆ ಹಬ್ಬಿವೆ. ಹೀಗಾಗಿ ತಾಲೂಕು ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿದ್ದರೂ ಸಹ ಖಾಲಿ ಖಾಲಿ ಖಾಸಗಿ ಆಸ್ಪತ್ರೆಯತ್ತ ಹೆಜ್ಜೆ ಹಾಕಲಾಗುತ್ತಿದೆ.

ನಕಲಿ ವೈದ್ಯರು: ಪಟ್ಟಣ ಹಾಗೂ ಗ್ರಾಮೀಣ ಭಾಗದ ಆಂಧ್ರ ಗಡಿಭಾಗ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಹತೆ ಪಡೆಯದ ವೈದ್ಯರ ಸಂಖ್ಯೆ ಹೆಚ್ಚಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಂಥವರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿಲ್ಲ. ಬದಲಾಗಿ ವೈದ್ಯರ ನೊಂದಣೆಗೆ ಸೂಚಿಸುತ್ತಿದೆ. ದಾಖಲೆ ಪತ್ರಗಳು ಮತ್ತು ಅರ್ಹತೆಯುಳ್ಳ ವೈದ್ಯರು ಮಾತ್ರ ನೊಂದಣೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅರ್ಹತೆಯಿಲ್ಲದ ವೈದ್ಯರು ವೈದ್ಯಕೀಯ ಭಾಷೆಯ ಪ್ರಕಾರ ನಕಲಿ ವೈದ್ಯರೆಂದೆ ಹೇಳಲಾಗುತ್ತಿದೆ. ಈಗಾಗಲೆ ಯಾರು ಅಸಲಿ- ನಕಲಿ ಎಂಬುವರ ಪಟ್ಟಿ ನಮ್ಮ ಬಳಿ ಇದೆ

ಎಂದು ಜಿಲ್ಲಾ ಕುಟುಂಬ ಆರೋಗ್ಯ ಇಲಾಖೆ ಅಧಿಕಾರಿ ಡಾ.ರಂಗನಾಥ್ ಅವರು ರಿಪೋರ್ಟರ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇಂತಹ ಯಾವುದೇ ಪದ್ದತಿಯಲ್ಲೂ ಶಿಕ್ಷಣ ಪಡೆಯದೆ ಸಾರಾಸಗಟು ಎಲ್ಲ ಖಾಯಿಲೆಗಳಿಗೂ ಚಿಕಿತ್ಸೆ ನೀಡುವ ಸ್ವಯಂಘೋಸಿತ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಇಂತಹ ಬಹುತೇಕ ವೈದ್ಯರಿಗೆ ವೈದ್ಯಕೀಯದ ಗಂಧ ಗಾಳಿಯೇ ಗೊತ್ತಿಲ್ಲ. ನೆಗೆಡೆಗೆ ಸಿಪಿಎಂ, ಜ್ವರಕ್ಕೆ ಪ್ಯಾರಸಿಟಮಲ್, ನೋವಿಗೆ ನ್ಯೂಮ್ಯೂಸೆಲೈಡ್, ಅಸಿಡಿಟಿಗೆ ರ್ಯಾಟೆಂಕ್, ಜಿಂಟಕ್ ಹೀಗೆ ಔಷಧಿ ಅಂಗಡಿಗಳಲ್ಲಿ ಲಭ್ಯವಾಗುವ ಕಳಪೆ ದರ್ಜೆಯ ಔಷಧಿಗಳನ್ನು ಖರೀದಿಸಿ ಚುಚ್ಚು ಮದ್ದು ಗ್ಲೂಕೋಸ್ ಹಾಕುತ್ತಿದ್ದಾರೆ.

ಎಲ್ಲೆಲ್ಲಿದ್ದಾರೆ: ಚಳ್ಳಕೆರೆ ನಗರದ ಗಾಂಧಿ ನಗರ, ರಹೀಂ ನಗರ, ವಿವಿಧ ವಾರ್ಡ್‍ಗಲ್ಲಿ ಹಾಗೂ ಗ್ರಾಮೀಣ ಭಾಗದ ಸಾಣೀಕೆರೆ, ದೊಡ್ಡಉಳ್ಳಾರ್ತಿ, ಹಿರೆಹಳ್ಳಿ, ನಾಯಕನಹಟ್ಟಿ, ಬೇಡರೆಡ್ಡಿಹಳ್ಳಿ, ಗೌರಸಮುದ್ರ, ದೊಡ್ಡಚೆಲ್ಲೂರು, ತಳಕು, ಮುಷ್ಠಲಗುಮ್ಮಿ ನಾಗಪ್ಪನಹಳ್ಳಿಗೇಟ್, ನಾರಾಯಣಪುರ, ಕಲಮರಹಳ್ಳಿ, ಹೀಗೆ ಮತ್ತಿತರ ಗಡಿ ಭಾಗಗಳಲ್ಲಿ  ಸುಮಾರು 62 ಜನರ ನಖಲಿ ವೈದ್ಯರು ರಾಜಾರೋಷವಾಗಿ ತಮ್ಮ ವೃತ್ತಿ ನಡೆಸುತ್ತಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಇವರು ನೀಡುವ ಅನೇಕ ಔಷಧಿಗಳು ತಾತ್ಕಾಲಿಕವಾಗಿ ಸಂಜೀವಿನಿಯಂತೆ ಕಂಡು ಬಂದರೂ ನಂತರದ ದಿನಗಳಲ್ಲಿ ಇವುಗಳ ಗಂಭೀರ ಪರಿಣಾಮಗಳಿಂದ ಜೀವಕ್ಕೆ ಮಾರಕವಾಗಿರುವ ಅನೇಕ ಉದಾಹರಣೆಗಳಿವೆ. ಕೂಡಲೇ ನಕಲಿ ವೈದ್ಯರು ಬಗ್ಗೆ ಸಂಬಂಧ ಪಟ್ಟ ಆರೋಗ್ಯ ಇಲಾಖೆ ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು