10:12 AM Friday29 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಒಮಿಕ್ರಾನ್ ವೈರಸ್; ಭಾರತದಲ್ಲಿ 1 ಸಾವು: ಕೇಂದ್ರ ಆರೋಗ್ಯ ಸಚಿವಾಲಯ

12/01/2022, 22:08

ಹೊಸದಿಲ್ಲಿ(reporterkarnataka.com): ಎಲ್ಲೆಡೆ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿನಿಂದ ಭಾರತದಲ್ಲಿ ಒಂದು ಸಾವು ಸಂಭವಿಸಿದ್ದು, ವಿಶ್ವದಲ್ಲಿ ಒಟ್ಟು 115 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಈ ಕುರಿತು ಮಾಹಿತಿ ನೀಡಿದ್ದು, ಒಮಿಕ್ರಾನ್ ಕೋವಿಡ್ ರೂಪಾಂತರವು ಸಾಮಾನ್ಯ ಶೀತವಲ್ಲ ಮತ್ತು ಅದನ್ನ ಲಘುವಾಗಿ ಯಾರು ಪರಿಗಣಿಸಬಾರದು. ಲಸಿಕೆ ಪಡೆಯುವುದು ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಮುಖ್ಯ ಎಂದು ಹೇಳಿದರು.

ನಾವು ಮುಖ್ಯವಾಗಿ ಮಾಸ್ಕ್ ಧರಿಸಬೇಕು. ಲಸಿಕೆ ಹಾಕಿಸಿಕೊಳ್ಳಿ. ಇದು ಒಂದು ಮಟ್ಟಿಗೆ ಸಹಾಯಕವಾಗಿವೆ ಎಂಬುದು ವಾಸ್ತವ. ನಮ್ಮ ಕೋವಿಡ್ ಪ್ರತಿಕ್ರಿಯೆಯ ಲಸಿಕೆ ನಿರ್ಣಾಯಕ ಸ್ತಂಭವಾಗಿದೆ ಎಂದು ಪಾಲ್ ಹೇಳಿದರು.

ಇನ್ನು ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಇಂದು 9,55,319 ಸಕ್ರಿಯ ಪ್ರಕರಣಗಳಿವೆ. ಮುಖ್ಯವಾಗಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತ್ ನಲ್ಲಿ ಹೆಚ್ಚಿನ ಆತಂಕವಿದೆ ಎಂದು ಅವರು ಹೇಳಿದರು. . ಇನ್ನು ಮಹಾರಾಷ್ಟ್ರ 22.39%, ಪಶ್ಚಿಮ ಬಂಗಾಳ 32.18%, ದೆಹಲಿ 23.1% ಮತ್ತು ಉತ್ತರ ಪ್ರದೇಶ 4.47% ಇದೆ ಎಂದರು.

ಅದೇ ರೀತಿ ಯುರೋಪಿನ ಎಂಟು ದೇಶಗಳು ಕಳೆದ ಎರಡು ವಾರಗಳಲ್ಲಿ 2 ಪಟ್ಟು ಹೆಚ್ಚು ಪ್ರಕರಣಗಳನ್ನು ವರದಿ ಮಾಡುತ್ತಿವೆ ಎಂದು ಹೇಳಿದರು.

ಜನವರಿ 9 ರಂದು ಕೊವಿಡ್ 19 ಪರಿಸ್ಥಿತಿಯ ಕುರಿತು ಪ್ರಧಾನ ಮಂತ್ರಿ ಮೋದಿ ಅವರು ನಡೆಸಿದ ಪರಿಶೀಲನಾ ಸಭೆ ಬಳಿಕ ಆರೋಗ್ಯ ಸಚಿವಾಲಯವು ಸೌಮ್ಯ ಮತ್ತು ಮಧ್ಯಮ ಪ್ರಕರಣಗಳಾಗಿ ವರ್ಗೀಕರಿಸಲಾದ ತೀವ್ರತೆಯೊಂದಿಗೆ ಡಿಸ್ಚಾರ್ಜ್ ನೀತಿಯನ್ನು ಪರಿಷ್ಕರಿಸಿದೆ. ಸತತ 3 ದಿನಗಳ ಕಾಲ ಪಾಸಿಟಿವ್ ಮತ್ತು ಅರ್ತು ಪರೀಕ್ಷೆಯಿಂದ ಕನಿಷ್ಠ 7 ದಿನಗಳ ನಂತ್ರ ಸೌಮ್ಯ ಪ್ರಕರಣ ಡಿಸ್ಚಾರ್ಜ್, ಡಿಸ್ಚಾರ್ಜ್ʼಗೆ ಮೊದಲು ಪರೀಕ್ಷೆಯ ಅಗತ್ಯವಿಲ್ಲ.

ಎಲ್ಲಾಎಲ್ಲಾ ರೋಗಲಕ್ಷಣದ ಪ್ರಕರಣಗಳನ್ನ ಪರೀಕ್ಷಿಸಬೇಕಾಗಿದೆ. ರೋಗಲಕ್ಷಣವಿಲ್ಲದ ಪ್ರಕರಣಗಳು ಹೆಚ್ಚಿನ ಅಪಾಯದಲ್ಲಿರದ ಹೊರತು ಪರೀಕ್ಷಿಸಲ್ಪಡುವ ಅಗತ್ಯವಿಲ್ಲ. ಮಾರ್ಗಸೂಚಿಗಳ ಪ್ರಕಾರ, 7 ದಿನಗಳ ಕಾಲ ಎಲ್ಲಾ ಸಂಪರ್ಕಗಳಿಗೆ ಹೋಮ್ ಕ್ವಾರಂಟೈನ್ ಕಡ್ಡಾಯ ಎಂದು ಡಿಜಿ, ಐಸಿಎಂಆರ್ ಡಾ. ಬಲರಾಮ್ ಭಾರ್ಗವ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು