11:17 AM Sunday5 - May 2024
ಬ್ರೇಕಿಂಗ್ ನ್ಯೂಸ್
ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ…

ಇತ್ತೀಚಿನ ಸುದ್ದಿ

ಹೋಮ್ ಗಾರ್ಡ್ ವರದಿಗೆ ಸಾಂದರ್ಭಿಕ ನೆಲೆಯಲ್ಲಿ ಫೋಟೋಗಳನ್ನು ಬಳಸಲಾಗಿದೆ: ಚಿತ್ರದಲ್ಲಿದ್ದವರಿಗೂ ವರದಿಗೂ ಸಂಬಂಧವಿಲ್ಲ

03/06/2021, 16:14

ಮಂಗಳೂರು(reporterkarnataka News): ‘ರಿಪೋರ್ಟರ್ ಕರ್ನಾಟಕ’ದಲ್ಲಿ ಜೂನ್  1ರಂದು ಪ್ರಕಟವಾದ ‘ವೇತನ ತಾರತಮ್ಯ: ಕೊರೊನಾ ವಾರಿಯರ್ಸ್ ಹೋಮ್ ಗಾರ್ಡ್ ಗಳ ಯಾತನೆ ಕೇಳುವರ್ಯಾರು ?’ ವರದಿಗೂ ಅದರಲ್ಲಿ ಬಳಸಲಾದ ಫೋಟೋಗಳಿಗೂ ಯಾವುದೇ ಸಂಬಂಧವಿಲ್ಲ. ಸಾಂದರ್ಭಿಕ ನೆಲೆಯಲ್ಲಿ ಫೋಟೋವನ್ನು ಬಳಸಲಾಗಿದೆ ಅಷ್ಟೇ.

ವರದಿಯಲ್ಲಿ ಇಡೀ ಕರ್ನಾಟಕದ ಹೋಮ್ ಗಾರ್ಡ್ ಗಳ ಚಿತ್ರಣ ನೀಡಲಾಗಿದೆಯೇ ಹೊರತು ಕೇವಲ ದಕ್ಷಿಣ ಕನ್ನಡ ಅಥವಾ ಮಂಗಳೂರಿನ ಹೋಮ್ ಗಾರ್ಡ್ ಗಳ ಸಮಸ್ಯೆಯಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್ ಗಾರ್ಡ್ ಗಳು ವ್ಯಕ್ತಪಡಿಸಿದ ಅನಿಸಿಕೆಗಳನ್ನು ಕ್ರೋಢೀಕರಿಸಿ ವರದಿ ತಯಾರಿಸಲಾಗಿದೆ.

ಪೊಲೀಸರಂತೆ ಆಪತ್ಕಾಲದಲ್ಲಿ ಹೋಮ್ ಗಾರ್ಡ್ ಗಳು ಕೂಡ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ಮನದಟ್ಟ ಮಾಡಲು ಪೊಲೀಸ್ ಜತೆ ಇರುವ ಹೋಮ್ ಗಾರ್ಡ್ ಗಳ ಫೋಟೋ ಬಳಸಲಾಗಿದೆ. ಅದು ಬಿಟ್ಟು ಫೋಟೋದಲ್ಲಿರುವ ಯಾವುದೇ ಹೋಮ್ ಗಾರ್ಡ್ ಗಳು ದೂರು ನೀಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ.

– ಅಶೋಕ್ ಕಲ್ಲಡ್ಕ, ಸಂಪಾದಕರು

ಇತ್ತೀಚಿನ ಸುದ್ದಿ

ಜಾಹೀರಾತು